ನಾಳೆ ವಿಶ್ವಕರ್ಮ ಸಮಾಜದ ಹಿರಿಯರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ
ಹೊಳೆಆಲೂರ: ಸ್ಥಳೀಯ ವಿಶ್ವಕರ್ಮ ಸಮಾಜದ ವತಿಯಿಂದ ರೋಣ ತಾಲೂಕಿನ ವಿಶ್ವಕರ್ಮ ಸಮಾಜದ 80 ವರ್ಷ ವಯಸ್ಸಿನ ಮೇಲಿನ ಹಿರಿಯರಿಗೆ ಸನ್ಮಾನ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಡಿ. 29ರಂದು ಬೆಳಗ್ಗೆ 10.30 ಗಂಟೆಗೆ ಪಟ್ಟಣದ ಯಚ್ಚರೇಶ್ವರ ಪಪೂ ಮಹಾವಿದ್ಯಾಲಯದ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಯಚ್ಚರೇಶ್ವರ ಶ್ರೀಗಳು, ನಾಗಮೂರ್ತೇಂದ್ರ ಶ್ರೀಗಳು, ಅಲ್ಲಮಯ್ಯ ಶ್ರೀಗಳು ಸಾನ್ನಿಧ್ಯ ವಹಿಸುವರು. ವಿಶ್ವಕರ್ಮ ಸಮಾಜದ ಅಧ್ಯಕ್ಷ ಪಾಂಡುರಂಗ ಪತ್ತಾರ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಪಿ.ಬಿ.ಬಡಿಗೇರ, ಎ.ಎನ್. ಬಡಿಗೇರ, ನಾರಾಯಣಪ್ಪ ಪತ್ತಾರ, ಎಂ.ಐ. ಕಂಚಗಾರ, ಡಿ.ಎಂ. ಮನೋಚಾರ್ಯ, ನಾಗಲಿಂಗಪ್ಪ ಶಿಗ್ಗಾಂವಿ, ಈಶ್ವರಪ್ಪ ಉಪ್ಪಿನಬೆಟಗೇರಿ ಆಗಮಿಸಲಿದ್ದಾರೆ. ಈ ಸಂದರ್ಭದಲ್ಲಿ ರೋಣ ತಾಲೂಕಿನ ಶ್ರೇಷ್ಠ ಶಿಲ್ಪಿಗಳಾದ ಮುಳಿಯಪ್ಪ ಬಸವಂತಪ್ಪ ಬಡಿಗೇರ (ಶ್ರೇಷ್ಠ ಸುವರ್ಣ ಶಿಲ್ಪಿ) ನಾಗಲಿಂಗಪ್ಪ ಬಸವಂತಪ್ಪ ಬಡಿಗೇರ (ಶ್ರೇಷ್ಠ ಕಾಷ್ಠ ಶಿಲ್ಪಿ), ಪಾಂಡುರಂಗ ಬಡಿಗೇರ (ಶ್ರೇಷ್ಠ ರಥಶಿಲ್ಪಿ), ಶಂಕ್ರಪ್ಪ ದೇವಪ್ಪ ಬಡಿಗೇರ (ಶ್ರೇಷ್ಠ ಶಿಲಾ ಶಿಲ್ಪಿ), ವಿಷ್ಣು ವೀರಪ್ಪ ಬಡಿಗೇರ (ಶ್ರೇಷ್ಠ ಲೋಹ ಶಿಲ್ಪಿ) ನವೀನ ಕಾಳಪ್ಪ ಪೋತದಾರ (ಶ್ರೇಷ್ಠ ಪಂಚಲೋಹ ಶಿಲ್ಪಿ) ಅವರನ್ನು ಸನ್ಮಾನಿಸಲಾಗುವುದು. ಹಾಗೂ ಸಂಘಟನಾ ಚತುರ ವಿಶೇಷ ಪ್ರಶಸ್ತಿಯನ್ನು ಮುಧೋಳ ಗ್ರಾಮದ ಪಿ.ಬಿ. ಬಡಿಗೇರ ಅವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು. ಮತ್ತು ಶೇ. 80ಕ್ಕಿಂತ ಹೆಚ್ಚು ಅಂಕಗಳಿಸಿ ಪಾಸಾದ ಎಸ್ಎಸ್ಎಲ್ಸಿ ಮತ್ತು ಪಿಯುಸಿ ದ್ವಿತೀಯ ವರ್ಷದ ಪ್ರತಿಭಾವಂತ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ಮಾಡಲಾಗುತ್ತದೆಂದು ತಿಳಿಸಿದ್ದಾರೆ.