ಸಮಸ್ಯೆ ಪರಿಹರಿಸುವ ವ್ಯಕ್ತಿ ಆಯ್ಕೆಗೊಳಿಸಿ: ಪಾಪು
ಕನ್ನಡಪ್ರಭ ವಾರ್ತೆ, ಗದಗ, ಡಿ. 27
ನಾಡೋಜ. ಡಾ. ಪಾಟೀಲ ಪುಟ್ಟಪ್ಪನವರ ಜತೆಗೆ ಹುಬ್ಬಳ್ಳಿಯ ಅವರ ನಿವಾಸದಲ್ಲಿ ಬುಧವಾರ ಅತಿಥಿ ಉಪನ್ಯಾಸಕರ ಒಕ್ಕೂಟದ ಅಧ್ಯಕ್ಷ ಪ್ರೊ. ಹನುಮಂತಗೌಡ ಕಲ್ಮನಿ ಹಾಗೂ ಅವರ ನಿಯೋಗ ಪಶ್ಚಿಮ ಪದವೀಧರರ ಚುನಾವಣೆ ಕುರಿತು ಸಮಾಲೋಚನೆ ನಡೆಸಿದರು.
ಈ ಸಂದರ್ಭದಲ್ಲಿ ಡಾ. ಪಾಟೀಲ ಪುಟ್ಟಪ್ಪ ಮಾತನಾಡಿ, ಮುಖ್ಯವಾಗಿ ಅತಿಥಿ ಉಪನ್ಯಾಸಕರ ಬೇಡಿಕೆಯಾದ ಅತಿಥಿ ಉಪನ್ಯಾಸಕರ ಕಾಯಂ ಮಾಡುವುದು, ಎಷ್ಟೋ ಜನ ಪದವಿಯನ್ನು ಪಡೆದುಕೊಂಡರೂ ನಿರುದ್ಯೋಗಿಗಳಾಗಿದ್ದಾರೆ. ಮುಖ್ಯವಾಗಿ ಕನ್ನಡ ಭಾಷಾ ಉಪನ್ಯಾಸಕರ ಕೊರತೆಯಿದೆ. ಪದವೀಧರರ ಹಾಗೂ ಉಪನ್ಯಾಸಕರ ಸಮಸ್ಯೆಗಳನ್ನು ಪರಿಹರಿಸುವಂತಹ ವ್ಯಕ್ತಿಗಳನ್ನು ಆಯ್ಕೆ ಮಾಡುವುದು ಪದವೀಧರರ ಕೈಯಲ್ಲಿದೆ. ಇತ್ತೀಚಿನ ಚುನಾವಣೆಗಳಂತೂ ಪ್ರಾಮಾಣಿಕತೆಗೆ ಬೆಲೆ ಇಲ್ಲದಂತಾಗಿದ್ದು, ಕಾರಣ ಪ್ರಜ್ಞಾವಂತ ಪ್ರತಿಯೊಬ್ಬ ಪದವೀಧರರೂ ಈ ಚುಣಾವಣೆಗೆ ಒಟ್ಟಾಗಿ ಸೇರಿ ಒಮ್ಮತದ ನಿರ್ಧಾರ ತೆಗೆದುಕೊಳ್ಳಲು ಸೂಚಿಸಿದರು. ಈ ಸಂದರ್ಭದಲ್ಲಿ ಎನ್.ಎಸ್. ಹೊನ್ನೂರ, ಸತೀಶ ಸರ್ವಿ, ಶೈಲಾ ಹಿರೇಮಠ, ಯಡವಟ್ಟಿ, ವೀರೇಶ ಕಮ್ಮಾರ, ಪ್ರಭುರಾಜಗೌಡ ಪಾಟೀಲ, ಮಲ್ಲು ಗೊಲ್ಲರ, ವಿ.ಬಿ. ಕರಮುಡಿ, ಬಿ.ಎಸ್. ಪರವಣ್ಣವರ, ಬಸವರಾಜ ಕುರುಬರ ಮುಂತಾದವರು ಉಪಸ್ಥಿತರಿದ್ದರು.