ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಯೇಸು ಸಂದೇಶದಿಂದ ಶಾಂತಿ

Vishwanath S
Updated On : 30 Dec 2013, 12:28 pm

ಕನ್ನಡಪ್ರಭ ವಾರ್ತೆ, ಗದಗ, ಡಿ. 29
ಯೇಸುಕ್ರಿಸ್ತನ ಸಂದೇಶ ಅದ್ಭುತ, ಯೇಸುವನ್ನು ಶಿಲುಬೆಗೆ ಹಾಕಿಸಿ ಹಿಂಸೆ ನೀಡಿದರೂ ತಂದೆಯೇ ಈ ಜನರು ಏನು ಮಾಡುತ್ತಿದ್ದಾರೆಂದು ಅರಿಯರು ಎಂದು ಪ್ರಾರ್ಥಿಸಿದರು. ಯೇಸುವಿನ ಸಂದೇಶ ಸರ್ವಧರ್ಮೀಯರಿಗೂ ಶಾಂತಿ, ಪ್ರೀತಿ, ಸಮಾಧಾನ, ಕ್ಷಮಾಪಣೆ ನೀಡುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಅವರು ಬುಧವಾರ ಸಮೀಪದ ನರಸಾಪುರದ ಆಶ್ರಯ ಕಾಲೋನಿಯಲ್ಲಿ ಪ್ರಜಾಶಕ್ತಿ ಸೇನಾ ಸಮಿತಿಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕ್ರಿಸ್ತ ಜಯಂತಿ ಉದ್ಘಾಟಿಸಿ ಮಾತನಾಡಿದರು.
ಅತಿಥಿಗಳಾಗಿ ಪಾಲ್ಗೊಂಡಿದ್ದ ಕಾಶಣ್ಣವರ ಮಾತನಾಡಿ, ಯೇಸು ಸ್ವಾಮಿ ಸರ್ವ ಲೋಕದ ಪಾಪಗಳನ್ನು ಹೊತ್ತು ಶಿಲುಬೆಯಲ್ಲಿ ಬಲಿಯಾದರು. ಏಕೆಂದರೆ ಬೈಬಲ್ ಹೇಳುತ್ತದೆ. ಯೇಸುಸ್ವಾಮಿ ತಾನಾಗಿ ತನ್ನ ಪ್ರಾಣವನ್ನು ಕೊಡಲಿಲ್ಲ. ಅದು ದೇವರ ಸಂಕಲ್ಪವಾಗಿತ್ತು ಎಂದರು.
ಪಾಸ್ಟರ್ ಡ್ಯಾನಿಯಲ್ ಕುರಣಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಪ್ರಜಾಶಕ್ತಿ ಸೇನಾ ಸಮಿತಿ ವತಿಯಿಂದ ಬಡ ವಿಧವೆಯರಿಗೆ ಸೀರೆ ಮತ್ತು ಅಟೋ ಚಾಲಕರಿಗೆ ಸಮವಸ್ತ್ರ ವಿತರಿಸಲಾಯಿತು. ಪ್ರಭು ಬುರಬುರೆ, ನಗರಸಭೆ ಸದಸ್ಯ ಅನಿಲ ಸಿಂಗ್ಟಾಲಕೇರಿ, ಬಡವರ ಬಂಧು ಟಂಟಂ ಅಟೋ ಮಾಲೀಕರ, ಚಾಲಕರ ಸಂಘದ ಗೌರವ ಅಧ್ಯಕ್ಷರಾದ ಸುಧೀರ ಬಿಜಾಪುರ, ಜಯರಾಮಪ್ಪ ಪಿತಂಬರ, ರಾಮಣ್ಣ ರಾಂಪುರ, ಪ್ರಾಂಕ್ಲಿನ್ ಸಿ. ದಲಬಂಜನ, ರಾಜು ಗೌಡರ, ಚಂದ್ರಗೌಡ ಕರಿಸೋಮನಗೌಡ್ರು, ಸ್ಯಾಮುವೆಲ್ ಖಾನಾಪುರ, ಬಸವರಾಜ ಭಜಂತ್ರಿ, ಲಕ್ಷ್ಮಣ ಭಜಂತ್ರಿ, ಫಕ್ರುಸಾಬ್ ನದಾಫ, ಟಿಪ್ಪು ಸುಲ್ತಾನ್, ಶೇಖ, ಭಾಸ್ಕರ, ಬಾಬುರಾವ, ಕುಮಾರ ಕಮತರ, ಯಮನೂರ ಇರಕಲ್ಲ, ಮಾರುತಿ ಗೋಟೂರ, ಗರೀಬ ಬೇಪಾರಿ, ಸುರೇಶ ಕೊರವಿ, ದಾದಾಪೀರ ಮುಲ್ಲಾ, ದೇವಪ್ಪ ಭರಮಣ್ಣವರ, ಸುಲೇಮಾನ ಮಕಾನದಾರ ಮುಂತಾದವರು ಉಪಸ್ಥಿತರಿದ್ದರು. ಪ್ರಜಾಶಕ್ತಿ ಸೇನಾ ಸಮಿತಿಯ ಗೌರವಾಧ್ಯಕ್ಷ ಬಾಲರಾಜ ಅರಬರ ಸ್ವಾಗತಿಸಿದರು. ಮಂಜುನಾಥ ಬೋವಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement