ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ರಾಷ್ಟ್ರ ಮಟ್ಟಕ್ಕೆ ಆಯ್ಕೆ: ಶಂಕರ ಸಂತಸ

Lingaraj Badiger
Updated On : 31 Dec 2013, 1:39 am

ಕನ್ನಡಪ್ರಭ ವಾರ್ತೆ, ನರೇಗಲ್ಲ, ಡಿ. 30
ನರೇಗಲ್‌ನಂತಹ ಚಿಕ್ಕ ಪಟ್ಟಣದಿಂದ ಹೆಚ್ಚಿನ ಪ್ರಮಾಣದಲ್ಲಿ ಹೆಣ್ಮಕ್ಕಳು ಅಟ್ಯಾಪಟ್ಯಾದಂತ ಅಪ್ಪಟ ಗ್ರಾಮೀಣ ಕ್ರೀಡೆಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿ ಚಂಡಿಗಡದಲ್ಲಿ ನಡೆಯುವ ರಾಷ್ಟ್ರಮಟ್ಟದ ಕ್ರೀಡೆಯಲ್ಲಿ ಭಾಗವಹಿಸುತ್ತಿರುವುದು ಸಂತಸ ತಂದಿದೆ ಎಂದು ಜಿಲ್ಲಾ ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಕೆ. ಶಂಕರ ತಿಳಿಸಿದರು.  ಅವರು ಈಚೆಗೆ ಸ್ಥಳೀಯ ಪಿ.ಎಸ್.ಎಸ್. ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಕರ್ನಾಟಕ ಅಟ್ಯಾ ಪಟ್ಯಾ ಸಂಸ್ಥೆ, ಹಠಯೋಗಿ ಕ್ರೀಡಾ ಸಂಸ್ಥೆ ಹಾಗೂ ಪಿ.ಎಸ್.ಎಸ್. ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ತರಬೇತಿ ಶಿಬಿರದಲ್ಲಿ ಕ್ರೀಡಾಪಟುಗಳಿಗೆ ಸಮವಸ್ತ್ರ ವಿತರಿಸಿ ಮಾತನಾಡಿದರು.  ಜಿಲ್ಲಾ ಕರವೇ ಅಧ್ಯಕ್ಷ ಹನಮಂತ ಅಬ್ಬಿಗೇರಿ ಮಾತನಾಡಿ ಕ್ರೀಡಾಪಟುಗಳಿಗೆ ಹಾಗೂ ತರಬೇತುದಾರರಿಗೆ ಸೂಕ್ತ ಸೌಲಭ್ಯಗಳಿಲ್ಲದಿದ್ದರೂ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವುದು ಹೆಮ್ಮೆಯ ವಿಚಾರ. ಇಂತಹ ಮಕ್ಕಳಿಗೆ  ಸರ್ಕಾರಿ ಸೌಲಭ್ಯಗಳು ದೊರಕುವಂತಾಗಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಪಿ.ಎಸ್.ಎಸ್. ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಕೆ.ಬಿ.ಧನ್ನೂರ ಮಾತನಾಡಿದರು.  ಕಾರ್ಯಕ್ರಮದಲ್ಲಿ ಓಂ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಅಶೋಕ ಬೇವಿನಕಟ್ಟಿ, ಪ.ಪಂ. ಸದಸ್ಯ ಕಲ್ಮೇಶ ತೊಂಡಿಹಾಳ, ಸರ್ಕಾರಿ ಮಾದರಿ ಕೇಂದ್ರ ಎಸ್‌ಡಿಎಂಸಿ ಅಧ್ಯಕ್ಷ ಬಸವರಾಜ ಸಿದ್ನೆಕೊಪ್ಪ, ತಾಲೂಕು ಕರವೇ ಅಧ್ಯಕ್ಷ ನಿಂಗಪ್ಪ ಹೊನ್ನಾಪುರ, ಮೌಲಾಸಾಬ ಕುಂದಗೋಳ, ರಮೇಶ ಕಾಟಿ, ತರಬೇತುದಾರ ಕೃಷ್ಣಾ ನಡುಮನಿ, ಮಹಮ್ಮದ ರಫೀಕ ರೇವಡಿಗಾರ ಉಪಸ್ಥಿತರಿದ್ದರು. ವಿ.ಎ.ಕುಂಬಾರ ಸ್ವಾಗತಿಸಿ, ನಿರೂಪಿಸಿದರು.
--
ಶಿವರಾಜ ಖಾನಾಪುರ ನೇಮಕ
ಗದಗ:  ಅಖಿಲ ಭಾರತ ಕಾಂಗ್ರೆಸ್ ಸೇವಾದಳದ ಗದಗ ಶಹರ ಮುಖ್ಯ ಸಂಘಟನಾ ಕಾರ್ಯದರ್ಶಿಯನ್ನಾಗಿ ಶಿವರಾಜ ಖಾನಾಪುರ ಅವರನ್ನು ನೇಮಿಸಲಾಗಿದೆ ಎಂದು ಅಖಿಲ ಭಾರತ ಕಾಂಗ್ರೆಸ್ ಸೇವಾದಳದ ಮುಖ್ಯ ಸಂಘಟಿಕ ರಾಚಪ್ಪ ಗಡಾದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶೋಭಾ ಕಮ್ಮಾರ ನೇಮಕ
ಶಿರಹಟ್ಟಿ: ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರ ಆದೇಶದ ಮೇರೆಗೆ (ಎಚ್. ಶಿವರಾಮೇಗೌಡ) ಬಣದ ಮಹಿಳಾ ಘಟಕದ ಶಿರಹಟ್ಟಿ ತಾಲೂಕು ಅಧ್ಯಕ್ಷರನ್ನಾಗಿ ಶೋಭಾ ಸುರೇಶ ಕಮ್ಮಾರ ಅವರನ್ನು ನೇಮಕಗೊಳಿಸಲಾಗಿದೆ ಎಂದು ಜಿಲ್ಲಾಧ್ಯಕ್ಷ ಕೆ.ಎಸ್. ಕೊಡತಗೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಟ್ಯಾಪಟ್ಯಾ ತಂಡಕ್ಕೆ ಆಯ್ಕೆ
ನರೇಗಲ್ಲ: ಸ್ಥಳೀಯ ಅನ್ನದಾನೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಥಮ ವಿಜ್ಞಾನ ಪಿಯು ವಿದ್ಯಾರ್ಥಿನಿ ಮಾಳವ್ವ ಹೆಬ್ಬಳ್ಳಿ, ಚೇತನಾ ಕಿನ್ನಾಳ ಹಾಗೂ ದ್ವಿತೀಯ ಪಿಯು ವಿಜ್ಞಾನ ವಿದ್ಯಾರ್ಥಿನಿ ವೀಣಾ ಮರಿನಾಯ್ಕರ ಕರ್ನಾಟಕ ಸಿನಿಯರ್ ಅಟ್ಯಾಪಟ್ಯಾ ತಂಡಕ್ಕೆ ಆಯ್ಕೆಯಾಗಿದ್ದಾರೆ.
2014ರ ಜನವರಿ 3ರಿಂದ 5ರ ವರೆಗೆ ಚಂಡೀಗಡದಲ್ಲಿ ನಡೆಯುವ ರಾಷ್ಟ್ರಮಟ್ಟದ ಕ್ರೀಡೆಯಲ್ಲಿ ಭಾಗವಹಿಸಲಿದ್ದಾರೆ. ಈ ಕ್ರೀಡಾಪಟುಗಳಿಗೆ ಹಾಗೂ ತರಬೇತಿ ನೀಡಿದ ದೈಹಿಕ ನಿರ್ದೇಶಕಿ ಪ್ರತಿಭಾ ಜೋಗಿಯವರಿಗೆ ಸಂಸ್ಥೆಯ ಅಧ್ಯಕ್ಷ ಅನ್ನದಾನ ಶ್ರೀಗಳು, ಆಡಳಿತ ಮಂಡಳಿ ಚೇರಮನ್ ರವೀಂದ್ರನಾಥ ದೊಡ್ಡಮೇಟಿ, ಆಡಳಿತ ಮಂಡಳಿ ಸದಸ್ಯ ಬಸವರಾಜ ವೀರಾಪುರ, ಡಾ. ಕೆ.ಬಿ. ಧನ್ನೂರ, ಆಡಳಿತಾಧಿಕಾರಿ ಹಾಗೂ ನಿವೃತ್ತ ಪ್ರಾಚಾರ್ಯ ಎಸ್.ಜಿ. ಹಿರೇಮಠ, ಜಮಾಖಾನ ವಿಭಾಗದ ಮುಖ್ಯಸ್ಥ ಜಿ.ಎಸ್. ಮಠಪತಿ, ಪಪೂ ಪ್ರಾಚಾರ್ಯ ವೈ.ಸಿ. ಪಾಟೀಲ ಹಾಗೂ ಸಿಬ್ಬಂದಿ ಸಾಧನೆಗೈದ ಕ್ರೀಡಾಪಟುಗಳಿಗೆ ಹಾಗೂ ತರಬೇತಿ ನೀಡಿದ ದೈಹಿಕ ನಿರ್ದೇಶಕರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement