ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ನದಿಯಿಂದ ಜನತೆಗೆ ನೀರು ಪೂರೈಸುವೆ

Rashmi Kasaragodu
Updated On : 2 Feb 2013, 11:02 am




ಗದಗ: ಕೋಟುಮಚಗಿ, ನೀರಲಗಿ, ಬೆನಕೊಪ್ಪ, ಹುಯಿಲಗೋಳ, ಚಿಕ್ಕೊಪ್ಪ, ಹಿರೇಕೊಪ್ಪ ಹೀಗೆ ಒಟ್ಟು 8 ಹಳ್ಳಿಗಳಿಗೆ ರು. 25.86 ಲಕ್ಷ ವೆಚ್ಚದಲ್ಲಿ ತುಂಗಭದ್ರಾ ನದಿಯಿಂದ ಪೈಪಲೈನ್ ಮೂಲಕ ಕುಡಿಯುವ ನೀರನ್ನು ಶೀಘ್ರವಾಗಿ ಜನರಿಗೆ ತಲುಪಿಸುವ ವ್ಯವಸ್ಥೆ ಮಾಡುತ್ತೇನೆಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಕಳಕಪ್ಪ ಬಂಡಿ ಹೇಳಿದರು.
ಅವರು ಶುಕ್ರವಾರ ಕಾರವಾರ-ಇಲಕಲ್ಲ ರಾಜ್ಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಬದಾಮಿ-ಗದಗ, ಕುಷ್ಟಗಿಯಿಂದ ನವಲಗುಂದ, ಶಲವಡಿಯಿಂದ ಮುಂಡರಗಿ, ಗದಗದಿಂದ ಮುಂಡರಗಿ, ಹರ್ಲಾಪುರದಿಂದ ಕೋಟುಮಚಗಿ, ಹರ್ಲಾಪುರದಿಂದ ತಿಮ್ಮಾಪುರ, ನರೇಗಲ್ಲದಿಂದ ಹಂಚಿನಾಳ, ಹೀಗೆ ಹಲವಾರು ರಸ್ತೆ ಕಾಮಗಾರಿ ನಡೆದಿವೆ. ಅವುಗಳಲ್ಲಿ ಕೆಲವು ರಸ್ತೆಗಳು ಪೂರ್ಣಗೊಂಡಿವೆ.
ತಿಮ್ಮಾಪುದಿಂದ ಕೋಟುಮಚಗಿ ರಸ್ತೆಗೆ ಈಗಾಗಲೇ ರು. 8 ಕೋಟಿ ಹಣ ದೊರೆತಿದ್ದು, ಅದಕ್ಕೆ ಇನ್ನೂ ರು. 2 ಕೋಟಿ ಮಂಜೂರಾಗಿದೆ ಎಂದರು. ಸೇತುವೆ ನಿರ್ಮಾಣಕ್ಕಾಗಿ ಈಗಾಗಲೇ ಮತಕ್ಷೇತ್ರಕ್ಕೆ ರು. 15 ಕೋಟಿ ಮಂಜೂರಾಗಿದ್ದು ಅವುಗಳ ಕಾರ್ಯವನ್ನು ಶೀಘ್ರದಲ್ಲಿ ಪ್ರಾರಂಭಿಸಲಾಗುವದು. ಮುಂಬರುವ ದಿನಗಳಲ್ಲಿ ಹೆಚ್ಚು ಅಭಿವೃದ್ಧಿ ಹಾಗೂ ಜನಪರ ಕಾರ್ಯಗಳನ್ನು ಮಾನ್ಯ ಮುಖ್ಯಮಂತ್ರಿಗಳ ಸಹಕಾರದೊಂದಿಗೆ ಮಾಡಿಕೊಡುವ ಭರವಸೆ ನೀಡಿದರು.
ಶ್ರೀಧರ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯ ಮೇಲೆ ಜಿಪಂ ಉಪಾಧ್ಯಕ್ಷ ರಮೇಶ ಮುಂದಿನಮನಿ, ರೋಣ ತಾಲೂಕು ಬಿಜೆಪಿ ಅಧ್ಯಕ್ಷ ಆನಂದ ಇನಾಮದಾರ, ಕೋಟುಮಚಗಿ ಗ್ರಾಪಂ ಅಧ್ಯಕ್ಷೆ ಸುಮಂಗಲಾ ಜಗ್ಗಲ, ರಾಮಣ್ಣ ಕುಲಕರ್ಣಿ, ರಾಮಣ್ಣ ಶಿಂಗ್ಟಾಲಕೇರಿ, ಮುಡಿಯಪ್ಪ ಶಿಂಗ್ಟಾಲಕೇರಿ, ಪಾಲಾಕ್ಷಯ್ಯ ಬಲಗೇರಮಠ, ಮಲ್ಲಿಕಾರ್ಜುನ ಕಿತ್ತೂರ, ದೇವಪ್ಪ ಬಡಿಗೇರ, ಶಾಂತಮ್ಮ ಹರ್ಲಾಪುರ, ಶರಣಪ್ಪ ಕಲಾಲಬಂಡಿ, ಬಸವರಾಜ ಕೊಟಗಿ, ಪಪಂ ಮುಖ್ಯಾಧಿಕಾರಿ ಐ.ಕೆ. ಗುಡಧಾರಿ, ಅಭಿಯಂತರ ಪಿ.ಪಿ. ಕಾಟೆವಾಲೆ, ಶಿವನಗೌಡ ಸೋಮನಗೌಡ್ರ, ನಿಂಗಪ್ಪ ಕೊಟಗಿ, ನಾಗೇಂದ್ರಸಾ ನಿರಂಜನ, ಭೀಮಪ್ಪ ಹನಮಸಾಗರ, ಸುರೇಶ ರಾಯಭಾಗಿ, ಪಪಂ ಸದಸ್ಯರು, ಬಿಜೆಪಿ ಪ್ರಮುಖರು, ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement