ರೈತರ ಏಳ್ಗೆಯಿಂದ ದೇಶದ ಅಭಿವೃದ್ಧಿ
ಕನ್ನಡಪ್ರಭ ವಾರ್ತೆ, ನರಗುಂದ, ಫೆ. 1
ಭಾರತವು ಕೃಷಿ ಅವಲಂಬಿತವಾಗಿರುವುದರಿಂದ ಈ ದೇಶಕ್ಕೆ ರೈತನೇ ಬೆನ್ನೆಲುಬು. ರೈತನ ಅಭಿವೃದ್ಧಿಯಾಗದೇ ದೇಶದ ಅಭಿವೃದ್ಧಿ ಅಸಾಧ್ಯ ಎಂದು ಮಾಜಿ ಸಚಿವ ಹಾಗೂ ಶಾಸಕ ಸಿ.ಸಿ. ಪಾಟೀಲ ಹೇಳಿದರು.
ಅವರು ಈಚೆಗೆ ತಾಲೂಕಿನ ಭೈರನಹಟ್ಟಿ ಹತ್ತಿರದ 14ನೇ ಬ್ಲಾಕ್ ಕಾಲುವೆ ನವೀಕರಣಕ್ಕಾಗಿ ಎಸಿಟಿಪಿ, ಟಿಎಸ್‌ಪಿ ನೀರಾವರಿ ಇಲಾಖೆ ಯೋಜನೆಡಿಯಲ್ಲಿ ರು. 7.50 ಕೋಟಿ ಕಾಮಗಾರಿಗೆ ಭೂಮಿ ಪೂಜೆ ನರೇವರಿಸಿ ಮಾತನಾಡಿದರು. ರೈತರ ಅಭಿವೃದ್ಧಿಯಾದೇ ದೇಶ ಅಭಿವೃದ್ಧಿಯಾಗುವುದಿಲ್ಲ. ಆದ್ದರಿಂದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಅಧಿಕಾರಕ್ಕೆ ಬಂದ ಮೇಲೆ ರೈತರಿಗೆ ಉಚಿತ ಬೆಳೆಸಾಲ, ಬೆಳೆ ವಿಮೆ, ಹಾಲಿಗೆ ಸಹಾಯ ಧನ, ಸುವರ್ಣ ಚೇತನ ಸೇರಿದಂತೆ ಇನ್ನು ಹಲವಾರು ಯೋಜನೆಗಳನ್ನು ರೈತರಿಗೆ ಕಲ್ಪಿಸುವಲ್ಲಿ ಶ್ರಮಿಸಿದ್ದಾರೆ.
ನಮ್ಮ ಅಧಿಕಾರಿದ ಅವಧಿಯಲ್ಲಿ ಭೈರನಹಟ್ಟಿ ಗ್ರಾಮದ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ರು. 8.50 ಕೋಟಿ ಬಿಡುಗಡೆ ಮಾಡಿ, ಈ ಗ್ರಾಮವನ್ನು ಅಭಿವೃದ್ಧಿಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದ್ದು, ಇನ್ನು ಕೆಲವು ಕಾಮಗಾರಿಗಳು ಪ್ರಗತಿಯಲ್ಲಿದ್ದು ಕೆಲವೇ ದಿನಗಳಲ್ಲಿ ಪೂರ್ಣಗೊಳಿಸಲಾಗುವುದು. ಹಾಗೂ ಈ ಕಾಮಗಾರಿಗಳು ಯಶಸ್ವಿಯಾಗುವಲ್ಲಿ ಸಾರ್ವಜನಿಕರ ಶ್ರಮ ಅತ್ಯವಶ್ಯಕವಾಗಿದ್ದು, ಕಾಮಗಾರಿಗೆ ತೊಂದರೆಯುಂಟಾಗದಂತೆ ಎಲ್ಲರೂ ಶ್ರಮಿಸಬೇಕಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಈ ಭಾಗದಲ್ಲಿ ರೈತ ಸಮಾವೇಶವನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀಗಳು ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ತಾಪಂ ಅಧ್ಯಕ್ಷ ಗುರಪ್ಪ ಆದಪ್ಪನವರ, ಬಿ.ಬಿ. ಐನಾಪೂರ, ಚಂದ್ರು ದಂಡಿನ, ಗ್ರಾಪಂ ಸದಸ್ಯ ಹನುಮಂತ ಸಂಗಟಿ, ಹನುಮಂತ ಐನಾಪುರ, ಬಸನಗೌಡ ಚಿಕ್ಕನಗೌಡ್ರ, ಮಹಾಂತಗೌಡ ಪಾಟೀಲ, ಅಶೋಕ ಕುಲಕರ್ಣಿ, ಎಸ್.ಬಿ. ಕರಿಗೌಡರ, ಅಡಿಯಪ್ಪ ಖಾನಾಪುರ, ಜಿ.ಆರ್. ಹಿರೇಮಠ, ರಾಜುಗೌಡ ಪಾಟೀಲ, ಅನಿಲ ಧರಿಯಣ್ಣವರ, ಉಮೇಶ ಮೊರಬದ, ನಾಗೇಶ ನರಸಾಪುರ, ನೀರಾವರಿ ಇಲಾಖೆ ಅಧಿಕಾರಿ ರಮೇಶ ನಾರಾಯಣ್ಕರ, ಬಿ.ಎ. ಕುದರಿ ಮುಂತಾದವರು ಉಪಸ್ಥಿತರಿದ್ದರು.