23, 24ರಂದು ಲಕ್ಕುಂಡಿ ಉತ್ಸವ
ಗದಗ: ಈಚೆಗೆ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಿದಂತೆ ಫೆ. 23ರಂದು ಲಕ್ಕುಂಡಿ ಉತ್ಸವದ ಉದ್ಘಾಟನಾ ಸಮಾರಂಭ, ಫೆ. 24ರಂದು ಸಮಾರೋಪ ಸಮಾರಂಭ ಲಕ್ಕುಂಡಿಯಲ್ಲಿ ನಡೆಯಲಿದ್ದು, ಫೆ. 24ರಂದು ಲಕ್ಕುಂಡಿ ಉತ್ಸವದ ಅಂಗವಾಗಿ ಒಂದು ದಿನ ಸಾಂಸ್ಕೃತಿಕ ಕಾರ್ಯಕ್ರಮಗಳು ಗಜೇಂದ್ರಗಡದಲ್ಲಿ ನಡೆಯಲಿವೆ ಎಂದು ಪ್ರಕಟಣೆ ತಿಳಿಸಿದೆ.