ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಇಂದು ಪಂಚಮಸಾಲಿ ಗೊಜನೂರು ಗ್ರಾಮ ಘಟಕ ಉದ್ಘಾಟನೆ

Lingaraj Badiger
Updated On : 4 Feb 2013, 12:19 pm

ಲಕ್ಷ್ಮೇಶ್ವರ: ಸಮಿಪದ ಗೊಜನೂರ ಗ್ರಾಮದಲ್ಲಿ ಫೆ. 4ರಂದು ಪಂಚಮಸಾಲಿ ಗ್ರಾಮ ಘಟಕದ ಉದ್ಘಾಟನೆ ಹಾಗೂ ಕಿತ್ತೂರು ಚನ್ನಮ್ಮ 189ನೇ ವಿಜಯೋತ್ಸವದ ಕಾರ್ಯಕ್ರಮವು ಬೆಳಗ್ಗೆ 8.30ಕ್ಕೆ ಗ್ರಾಮದ ಪಾಟೀಲ ಅವರ ಜಾಗೆಯಲ್ಲಿ ಏರ್ಪಡಿಸಲಾಗಿದೆ. ಸಮಾರಂಭದ ಸಾನ್ನಿಧ್ಯವನ್ನು ಹೊಸಳ್ಳಿಯ ಬೂದೀಶ್ವರ ಮಠದ ಅಭಿನವ ಬೂದೀಶ್ವರ ಸ್ವಾಮಿಗಳು ವಹಿಸುವರು. ಉದ್ಘಾಟನೆಯನ್ನು ಗದಗ ಜಿಲ್ಲಾ ಪಂಚಮಸಾಲಿ ಸಂಘದ ಅಧ್ಯಕ್ಷ ಫಕ್ಕಿರಗೌಡ್ರ ವಿ.ಮರಿಗೌಡ್ರ ನೆರವೇರಿಸುವರು. ಅಧ್ಯಕ್ಷತೆಯನ್ನು ಶಿವನಗೌಡ ಪಾಟೀಲ ವಹಿಸುವರು. ಮುಖ್ಯ ಅತಿಥಿಯಾಗಿ ಶಿರಹಟ್ಟಿ ತಾಲೂಕು ಪಂಚಮಸಾಲಿ ಸಂಘದ ಅಧ್ಯಕ್ಷ ಡಾ. ಎಸ್.ಬಿ.ಜವಾಯಿ, ಪ್ರಧಾನ ಕಾರ್ಯದರ್ಶಿ ಶಿವಾನಂದ ದೇಸಾಯಿ ಭಾಗವಹಿಸುವರು ಎಂದು ಸಂಘದ ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement