ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ದೇಶದ ಇತಿಹಾಸ ಮರೆಯದಿರಿ: ಕುಲಕರ್ಣಿ

Lingaraj Badiger
Updated On : 4 Feb 2013, 12:13 pm

ನರೇಗಲ್ಲ: ದೇಶದ ಇತಿಹಾಸವನ್ನು ಎಂದಿಗೂ ಮರೆಯದೇ ದೇಶದ ಸ್ವಾತಂತ್ರ್ಯಕ್ಕಾಗಿ ದುಡಿದು ಮಣಿದ ವೀರರನ್ನು ನೆನಸುವ ಜತೆಗೆ ದೇಶದ ಅಭಿವೃದ್ದಿಗೆ ನಮ್ಮದೇ ಆದ ಕಾಣಿಕೆ ನೀಡಲು ಮುಂದಾಗಬೇಕೆಂದು ಕೋಟುಮಚಗಿಯ ಸೋಮೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಆರ್.ವಿ. ಕುಲಕರ್ಣಿ ಹೇಳಿದರು.
ಅವರು ಈಚೆಗೆ ಸಮೀಪದ ಕೋಟುಮಚಗಿಯ ಸೋಮೇಶ್ವರ ಪ್ರೌಢಶಾಲೆಯಲ್ಲಿ ಆಚರಿಸಲಾದ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮಲ್ಲಿ ಮಾನವೀಯ ಮೌಲ್ಯ ಬೆಳೆಸಿಕೊಳ್ಳಬೇಕು. ಜೀವನದಲ್ಲಿ ಸಂಸ್ಕಾರವಂತರಾಗಿ ಬಾಳಿದಾಗ ಮಾತ್ರ ಜೀವನಕ್ಕೊಂದು ಅರ್ಥವಿದೆ ಎಂಬುದನ್ನು ತಿಳಿಯಬೇಕೆಂದರು.
ಶಾಲಾ ವಿದ್ಯಾರ್ಥಿಗಳು ದೇಶ ಭಕ್ತಿ ಕುರಿತ ಹಾಡು, ಭಾಷಣ ಮಾಡಿದರು. ಮುಖ್ಯಾಧ್ಯಾಪಕ ಕೆ.ಎ. ಹಮ್ಮಿಗಿ ಪ್ರಾಸ್ತಾವಿಕ ಮಾತನಾಡಿದರು. ಆಡಳಿತ ಮಂಡಳಿ ಸದಸ್ಯ ಎಂ.ಆರ್. ಕಿತ್ತೂರ, ಮುಡಿಯಮ್ಮ ಜಗ್ಗಲ ಇದ್ದರು. ಎಸ್.ಎಸ್. ಶಿವಪ್ಪಯ್ಯನಮಠ ಸ್ವಾಗತಿಸಿದರು. ಪಿ.ಎಫ್. ಆನಂದರಭಾವಿ ನಿರೂಪಿಸಿದರು. ಎನ್.ವಿ. ಸಜ್ಜನರ ವಂದಿಸಿದರು.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement