ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ವಿದ್ಯಾರ್ಥಿಗಳಿಗೆ ಸಮಾಜದ ಬಗ್ಗೆ ಅರಿವಿರಬೇಕು: ಅಜ್ಜುಗೌಡ

Lingaraj Badiger
Updated On : 4 Feb 2013, 12:12 pm

ನರಗುಂದ: ಕಾಲೇಜ್‌ಗೆ ಬಂದ ತಕ್ಷಣ ಮಜಾ ಮಾಡಬೇಕೆಂದು ಕೆಲವು ವಿದ್ಯಾರ್ಥಿಗಳು ಮುಂದಾಗುವರು. ಇದರಿಂದ ಮುಂದಿನ ದಿನದಲ್ಲಿ ವಿದ್ಯಾರ್ಥಿಗಳಿಗೆ ಭವಿಷ್ಯ ರೂಪಿಸಿಕೊಳ್ಳುವುದು ಕಷ್ಟವಾಗುತ್ತದೆಂದು ಮುಖಂಡ ಅಜ್ಜುಗೌಡ ಪಾಟೀಲ ಹೇಳಿದರು.
ಅವರು ಈಚೆಗೆ ತಾಲೂಕಿನ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದಲ್ಲಿ ಎಸ್.ಎಸ್.ಎಸ್. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಈ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ದೊರಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀಗಳು ಮಾತನಾಡಿ, ಉತ್ತಮ ಸಮಾಜ ನಿರ್ಮಾಣ ಆಗಬೇಕೆಂದರೆ ಯುವಕರ ಪಾತ್ರ ಬಹಳ ದೊಡ್ಡದಾಗಿದ್ದು, ಅದಕ್ಕೆ ತಾವುಗಳು ಕಲಿಕೆ ಜತೆ ಧಾರ್ಮಿಕ, ಸಾಮಾಜಿಕ, ಶೈಕ್ಷಣಕ, ಕಲೆ ಸಾಹಿತ್ಯಗಳ ಬಗ್ಗೆ ಹೆಚ್ಚು ಒತ್ತು ಕೊಟ್ಟು ಇವುಗಳ ಬಗ್ಗೆ ತಿಳಿವಳಕೆ ಪಡೆದುಕೊಳ್ಳವುದು ಅವಶ್ಯ ಎಂದರು.
ಈ ಸಂದರ್ಭ ಹನುಮಂತಗೌಡ ಪಾಟೀಲ, ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ಎಚ್. ಮಾದರ, ಎಸ್.ಎನ್. ಪೂಜಾರ, ಡಿ.ಆರ್. ಕಲಬುರ್ಗಿ ಹಾಜರಿದ್ದರು. ಎಸ್.ಕೆ. ಜೋಗಿ ಸ್ವಾಗತಿಸಿದರು. ಜಿ.ಜಿ. ಹುಬ್ಬಳ್ಳಿ ನಿರೂಪಿಸಿದರು. ಕೆ.ಆರ್. ನದಾಫ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement