ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಇಂದು ದತ್ತಿ ಉಪನ್ಯಾಸ

Lingaraj Badiger
Updated On : 5 Feb 2013, 11:34 am

ಲಕ್ಷ್ಮೇಶ್ವರ:  ಸಮೀಪದ ಶಿಗ್ಲಿ ಗ್ರಾಮದ ಪರಮೇಶ್ವರಪ್ಪ ಬಳಿಗಾರ ಸರ್ಕಾರಿ ಪಪೂ ಕಾಲೇಜಿನಲ್ಲಿ ಶಿರಹಟ್ಟಿ ತಾಲೂಕು ಕಸಾಪ ಆಶ್ರಯದಲ್ಲಿ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಫೆ. 5ರಂದು ಮಧ್ಯಾಹ್ನ 2.30 ಗಂಟೆಗೆ ಏರ್ಪಡಿಸಲಾಗಿದೆ. ಅಧ್ಯಕ್ಷತೆಯನ್ನು ಶಿರಹಟ್ಟಿ ತಾಲೂಕು ಕಸಾಪ ಅಧ್ಯಕ್ಷ ಕೆ.ಎ. ಬಳಿಗೇರ ವಹಿಸಿಕೊಳ್ಳುವರು. ಉದ್ಘಾಟನೆಯನ್ನು ಲಿಂಬಯ್ಯಸ್ವಾಮಿ ಲಿಂಬಯ್ಯಸ್ವಾಮಿಮಠ ನೆರವೇರಿಸುವರು. ಉಪನ್ಯಾಸಕರಾಗಿ ಗುಡಗೇರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಡಾ. ಎಸ್.ಆರ್.ಶಿರಹಟ್ಟಿ ಹಾಗೂ ಗದಗ ಜಿಲ್ಲಾ ಮಕ್ಕಳ ಸಾಹಿತ್ಯ ವೇದಿಕೆಯ ಅಧ್ಯಕ್ಷ ಡಾ. ರಾಜೇಂದ್ರ ಗಡಾದ ಆಗಮಿಸುವರು. ಅತಿಥಿಗಳಾಗಿ ಗದಗ ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಶಿವಣ್ಣ ಕುರಿ, ಶಿವಲಿಂಗು ಬಳಿಗಾರ, ಡಾ. ಪಿ.ಡಿ. ತೋಟದ, ಪ್ರಾಚಾರ್ಯ ಎನ್.ವಿ. ಮುಧೋಳ, ಉಪನ್ಯಾಸಕ ಎಸ್.ಬಿ. ಪೂಜಾರ ಆಗಮಿಸುವರು ಎಂದು ಶಿರಹಟ್ಟಿ ತಾಲೂಕು ಕಸಾಪ ಕಾರ್ಯದರ್ಶಿ ಅಶೋಕ ಸೊರಟೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮನೆ ಮೇಲಿಂದ ಬಿದ್ದು ಸಾವು
ಗದಗ:  ರಾತ್ರಿ ವೇಳೆ ಮನೆಯ ಮಾಳಗಿ ಮೇಲೆ ಮಲಗಿಕೊಂಡ ವ್ಯಕ್ತಿಯೋರ್ವ ಉಗುಳಲು ಎದ್ದಾಗ ಆಕಸ್ಮಿಕವಾಗಿ ಕೆಳಗೆ ಬಿದ್ದು ಮೃತಪಟ್ಟಿರುವ ಘಟನೆ ತಾಲೂಕಿನ ಮುಳಗುಂದ ಪಟ್ಟಣದ ಸವಳಬಾವಿ ಓಣಿಯಲ್ಲಿ ನಡೆದಿದೆ. ಮೃತನನ್ನು ಮುಳಗುಂದ ಪಟ್ಟಣದ ನಿವಾಸಿ ರಮೇಶ ಚೋಳಪ್ಪ ಹಡಪದ (32) ಎಂದು ಗುರುತಿಸಲಾಗಿದೆ. ತೀವ್ರ ಗಾಯಗೊಂಡಿದ್ದ ರಮೇಶನನ್ನು ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ. ಮುಳಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement