ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಕವಿಯ ಮನ ಭಾವನೆಯ ಗೂಡು

Lingaraj Badiger
Updated On : 5 Feb 2013, 11:34 am

ಗದಗ: ಕವಿಯ ಮನ ಹತ್ತು ಹಲವು ಭಾವನೆಯ ಗೂಡಾಗಿದೆ ಎಂದು ಪ್ರಸಕ್ತ ಸಾಲಿನ ರಾಜ್ಯ ನಾಟಕ ಅಕಾಡೆಮಿಯ ರಂಗಪ್ರಶಸ್ತಿ ವಿಜೇತ ವೀರಭದ್ರಪ್ಪ ಬಡಿಗೇರ ಅಭಿಪ್ರಾಯಪಟ್ಟರು.
ಅವರು ಭಾನುವಾರ ಗದಗ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸ್ಥಳೀಯ ಗುರುರಾಜ ಶೇಡಗಟಗಿ ಅವರ ನಿವಾಸದಲ್ಲಿ ಏರ್ಪಡಿಸಿದ್ದ ಕಾವ್ಯ-ಗಾಯನ-ಕುಂಚ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಹಲವು ಭಾವನೆಗಳಿಂದ ಕವಿ ಕಾವ್ಯ ರಚಿಸಿದರೆ, ಕಲಾವಿದ ಭಾವನೆಗಳಿಂದ ಬಣ್ಣಕ್ಕೆ ಜೀವಂತಿಕೆ ನೀಡುತ್ತಾನೆ. ಗಾಯಕ ಧ್ವನಿಪೂರ್ಣತೆಯೊಂದಿಗೆ ಕವಿಯ ಕಾವ್ಯವನ್ನು ವಾಚಿಸಿದಾಗ ಕವಿಯ ಮನ ಸಾರ್ಥಕತೆಯನ್ನು ಪಡೆಯುತ್ತದೆ. ಸಾಹಿತ್ಯವನ್ನು ಹೆಚ್ಚು ಅಭ್ಯಾಸಿಸುವ ಮೂಲಕ ಕವಿಗಳು ತಮ್ಮ ಕಾವ್ಯಕ್ಕೆ ಜೀವವನ್ನು ತುಂಬಬೇಕಾಗುತ್ತದೆ ಅಂದಾಗ ಆ ಕವಿ ಪರಿಪೂರ್ಣತೆ ಪಡೆದುಕೊಳ್ಳಲು ಸಾಧ್ಯ ಎಂದರು.
ಡಾ. ಅಶೋಕ ಮತ್ತಿಗಟ್ಟಿ, ಎಸ್.ಎಸ್. ಸೂಳಿಕೇರಿ, ಮರುಳಸಿದ್ಧಪ್ಪ ದೊಡ್ಡಮನಿ ಕವಿಗಳ ಕಾವ್ಯಕ್ಕೆ ಹಿರಿಯ ಕಲಾವಿದ ಪಿ.ಎ. ಕುಲಕರ್ಣಿ ಚಿತ್ರ ಬಿಡಿಸಿದರು. ಶೋಭಾ ಜಕ್ಕನಗೌಡ್ರ ಹಾಗೂ ಕವಿತಾ ಮಾದಗುಂಡಿ ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು. ಡಾ. ಜಿ.ಬಿ.ಪಾಟೀಲ, ಅನ್ನದಾನಿ ಹಿರೇಮಠ, ಗುರುರಾಜ ಶೇಡಗಟಗಿ, ಸುವರ್ಣ ನಿಡಗುಂದಿ, ಮೀನಾಕ್ಷಿ ಮತ್ತಿಗಟ್ಟಿ, ಯರಗೇರಿ ಮಾತನಾಡಿದರು.
ಗದಗ ತಾಲೂಕಾ ಕಸಾಪ ಗೌರವ ಕಾರ್ಯದರ್ಶಿ ಕವಿತಾ ದಂಡಿನ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಸಕ್ತ ಸಾಲಿನ ರಾಜ್ಯ ನಾಟಕ ಅಕಾಡೆಮಿಯ ರಂಗಪ್ರಶಸ್ತಿ ವಿಜೇತ ವೀರಭದ್ರಪ್ಪ ಬಡಿಗೇರ ಅವರನ್ನು ಗದಗ ತಾಲೂಕು ಕಸಾಪದಿಂದ ಸನ್ಮಾನಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement