ನಾಳೆ ವಾರ್ಷಿಕ ಸ್ನೇಹ ಸಮ್ಮೇಳನ
ಗದಗ: ತಾಲೂಕಿನ ಬಳಗಾನೂರಿನ ಚಿಕೇನುಕೊಪ್ಪ ಚನ್ನವೀರ ಶರಣರ ಮಠದ ವಿದ್ಯಾಪೀಠ ಟ್ರಸ್ಟ್, ಚಿಕೇನುಕೊಪ್ಪದ ಚನ್ನವೀರ ಶರಣರ ಕನ್ನಡ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವು ಫೆ. 6ರ ಬೆಳಗ್ಗೆ 10ಕ್ಕೆ ಜರಗುವುದು. ಸಾನ್ನಿಧ್ಯವನ್ನು ಶಿವಶಾಂತವೀರ ಶ್ರೀ ವಹಿಸುವರು. ಅಧ್ಯಕ್ಷತೆಯನ್ನು ವಿದ್ಯಾಪೀಠದ ಕಾರ್ಯಧ್ಯಕ್ಷ ಎಂ.ಬಿ. ಸಿಕ್ಕೇದೇಸಾಯಿ ವಹಿಸುವರು. ಕ್ಷಮಾ ವಸ್ತ್ರದ, ಶೇಖಣ್ಣ ಗದ್ದಿಕೇರಿ, ವಿ.ಎಸ್. ಹಿರೇಮಠ, ಎಸ್.ಎಸ್. ಕೋಣನವರ, ಎಸ್.ಬಿ. ಪಾಟೀಲ, ವಿ.ಬಿ. ಪಾಟೀಲ, ಎ.ಎನ್. ನಾಗರಳ್ಳಿ, ಎಸ್.ಎಸ್. ಪಾಟೀಲ, ಎಸ್.ಪಿ. ಪಾಟೀಲ, ಎ.ಎಂ. ವಿಜಯಕುಮಾರ ಆಗಮಿಸುವರೆಂದು ಪ್ರಕಟಣೆ ತಿಳಿಸಿದೆ.
ಇಂದು ಸ್ನೇಹ ಸಮ್ಮೇಳನ
ನರೇಗಲ್ಲ: ಸ್ಥಳಿಯ ಕೆ.ಎಸ್.ಎಸ್. ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ 2012-13ನೇ ಸಾಲಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಸ್ನೇಹ ಸಮ್ಮೇಳನ ಹಾಗೂ ಮಹಾ ಸರಸ್ವತಿ ಪೂಜಾ ಸಮಾರಂಭ ಫೆ. 5ರ ಮಧ್ಯಾಹ್ನ 12 ಗಂಟೆಗೆ ಜರುಗಲಿದ್ದು, ಅಧ್ಯಕ್ಷತೆಯನ್ನು ಕನಕದಾಸ ಶಿಕ್ಷಣ ಸಮಿತಿಯ ಪ್ರಧಾನ ಕಾರ್ಯದರ್ಶಿ ರವಿ ದಂಡಿನ ವಹಿಸುವರು. ಭೀಮರಾಯನಗುಡಿಯ ಸಹಾಯಕ ಆಯುಕ್ತ ಡಾ. ಎಸ್.ಎಲ್. ವಣಕಿಹಾಳ, ಎಸ್.ಎ.ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ವೈ.ಸಿ. ಪಾಟೀಲ, ಕನಕದಾಸ ಶಿಕ್ಷಣ ಸಮಿತಿಯ ಸ್ಥಾನಿಕ ಕಮಿಟಿಯ ಅಧ್ಯಕ್ಷ ರಾಮಣ್ಣ ಸಕ್ರೋಜಿ, ಕೆ.ಎಸ್.ಎಸ್. ಪದವಿಪೂರ್ವ ಮಹಾ ವಿದ್ಯಾಲಯದ ಪ್ರಾಚಾರ್ಯ ಎಂ.ಎಸ್. ಬೆನಕನವಾರಿ ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.
ಅಪಘಾತ: ಓರ್ವ ಸಾವು
ಗದಗ: ವೇಗವಾಗಿ ಬಂದ ಟಂಟಂ ವಾಹನ ರಸ್ತೆಯ ಬದಿ ಕಲ್ಲಿಗೆ ಗುದ್ದಿದ ಪರಿಣಾಮ ಚಾಲಕ ಮೃತಪಟ್ಟು, ನಾಲ್ವರು ಗಾಯಗೊಂಡ ಘಟನೆ ತಾಲೂಕಿನ ಕೋಟುಮಚಗಿ ರಸ್ತೆಯಲ್ಲಿ ಸೋಮವಾರ ಬೆಳಗ್ಗೆ ಸಂಭವಿಸಿದೆ. ಮೃತನನ್ನು ಬೆಟಗೇರಿಯ ಹೊಸಪೇಟ ಚೌಕ್ ನಿವಾಸಿ ಪ್ರಕಾಶ ಫಕ್ಕೀರಪ್ಪ ಮಾಚಲ (27) ಎಂದು ಗುರುತಿಸಲಾಗಿದೆ. ನಾರಾಯಣಪುರದಿಂದ ಗದಗ ಕಡೆಗೆ ಬರುವ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ. ಗದಗ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.