10ರಂದು ಸ್ಲೋ ಬೈಕ್ ರೇಸ್
ಹೊಳೆಆಲೂರ: ಅಸೂಟಿ ಗ್ರಾಮದ ಪಂಡಿತ ಪುಟ್ಟರಾಜ ಗವಾಯಿ ಯುವಕ ಮಂಡಳ ವತಿಯಿಂದ ರಾಜ್ಯಮಟ್ಟದ ಸ್ಲೋ ಬೈಕ್ ರೇಸ್ ಹಾಗೂ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮವು ಶಿವಾನಂದ ಮಠದ ಬಯಲು ಜಾಗೆಯಲ್ಲಿ ಫೆ. 10ರಂದು ನಡೆಯಲಿದೆ. ಸಾನ್ನಿಧ್ಯವನ್ನು ರೇವಣಸಿದ್ಧೇಶ್ವರ ಶ್ರೀಗಳು ವಹಿಸುವರು. ಫಲಹಾರೇಶ್ವರ ಶ್ರೀ ಉದ್ಘಾಟಿಸುವರು. ಹನುಮಂತಗೌಡ ಮೋಟಿಗೌಡ್ರ ಅಧ್ಯಕ್ಷತೆ ವಹಿಸುವರು. ಶೇಖರಗೌಡ ಪಾಟೀಲ, ವಿರುಪಾಕ್ಷಪ್ಪ ಮಹಾರಾಜನವರ, ಕೆ.ಬಿ. ಕೊಣ್ಣೂರ, ಮಲ್ಲಪ್ಪ ದಿಂಡೂರ, ಸಂಪತ್ತ ಕುಲಕರ್ಣಿ, ಶಿವಪ್ಪ ಜಲಗೇರಿ, ಗವಿಸಿದ್ಧಯ್ಯ ಕಲ್ಮಠ ಆಗಮಿಸಲಿದ್ದಾರೆ. ನಿರ್ಣಾಯಕರಾಗಿ ಭೀಮಾಜಿ ಕುಲಕರ್ಣಿ, ಹನುಮಂತಗೌಡ ದ್ಯಾಮನಗೌಡ್ರ, ಶಿವರಡ್ಡಿ ಗುಬ್ಬೇರಕೊಪ್ಪ, ಶಿವಯೋಗಿ ಕಸವಣ್ಣವರ, ಮುಕ್ತುಂಸಾಬ್ ಅತ್ತಾರ, ಶಿವನಗೌಡ ಪಾಟೀಲ, ಮಹಾಂತೇಶ ದೊಡಮನಿ, ವಿರುಪಾಕ್ಷಪ್ಪ ಕಸವಣ್ಣವರ, ಪ್ರವೀಣ ರೊಟ್ಟಿ, ಅಡಿವೆಪ್ಪ ಕೆಂದೂರ, ಬಕ್ಷಾರಲಿ ಮುಲ್ಲಾ, ನಿಂಗಪ್ಪ ಕುರಲಗೇರಿ ಕಾರ್ಯನಿರ್ವಹಿಸಲಿದ್ದಾರೆ. ಶಿವಯೋಗಿ ಕಸಣ್ಣವರ ಮೊ. 953523704, ಶರಣಪ್ಪ ಹಡಪದ-8722330609, ಎ.ಎಸ್. ಬೆಳಹಾರ-9740632499, ನಾಗರಾಜ ಹಡಪದ-9164223022, ಎಚ್.ಡಿ. ವಡ್ಡರ-8970598975 ಇವರಲ್ಲಿ ನೋಂದಾಯಿಸಲು ಕೋರಲಾಗಿದೆ.
--