ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಗ್ರಾಮೀಣ ಕ್ರೀಡೆಗೆ ಪ್ರೋತ್ಸಾಹ ಅಗತ್ಯ

Lingaraj Badiger
Updated On : 6 Feb 2013, 11:08 am

ಗದಗ: ಯುವಕರು ಗ್ರಾಮೀಣ ಕ್ರೀಡೆಗಳನ್ನು ಪ್ರೋತ್ಸಾಹಿಸುವ ಮೂಲಕ ಅವುಗಳನ್ನು ಉಳಿಸಬೇಕಿದೆ ಎಂದು ಸಾಮಾಜಿಕ ಕಾರ್ಯಕರ್ತ ಶಿವನಗೌಡ ಪಾಟೀಲ ಹೇಳಿದರು.
ಈಚೆಗೆ ಅವರು ಜಿಲ್ಲೆಯ ರೋಣ ತಾಲೂಕಿನ ಶಾಂತಗೇರಿ ಗ್ರಾಮದಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಸಿಂಚನ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ ಗದಗ ಹಾಗೂ ಜೈಭೀಮ ಬುಲ್ಸ್ ಕ್ರೀಡಾಸಂಘ ಶಾಂತಗೇರಿ ಇವುಗಳ ಸಹಯೋಗದಲ್ಲಿ ಆಯೋಜಿಸಲಾಗಿದ್ದ 52 ಕೆಜಿ ಒಳಗಿನ ಹೊನಲು ಬೆಳಕಿನ ಪುರುಷರ ಕಬಡ್ಡಿ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು. ಅಧ್ಯಕ್ಷತೆವಹಿಸಿದ್ದ ಪೃತ್ವಿರಾಜ ದೇಸಾಯಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹನುಮಂತ ತುಗ್ಗಣ್ಣಿ, ಸಂಯುಕ್ತಾ ಬಂಡಿ ಆಗಮಿಸಿದ್ದರು. ಪಂದ್ಯಾವಳಿಯ ನಿರ್ಣಾಯಕರಾಗಿ ಶಾಂತಗೇರಿ ಪ್ರೌಢಶಾಲೆಯ ದೈಹಿಕ ಶಿಕ್ಷಕ ಹನುಮಂತ ಕೊತಬಾಳ ಕಾರ್ಯನಿರ್ವಹಿಸಿದರು. ಪ್ರಥಮ ಬಹುಮಾನವನ್ನು ಸಿದ್ಧಾರೂಢ ಯುವಕ ಸಂಘ ಆಲದಕಟ್ಟಿ, ದ್ವಿತೀಯ ಬಹುಮಾನವನ್ನು ಮಹರ್ಷಿ ವಾಲ್ಮೀಕಿ ಯುವಕ ಮಂಡಳಿ ಶಾಂತಗೇರಿ, ತೃತೀಯ ಬಹುಮಾನವನ್ನು ಹುಲ್ಲಿಕೇರಿ ತಂಡವು ಪಡೆದುಕೊಂಡಿತು. ಶರಣಪ್ಪ ಮಾದರ ನಿರೂಪಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement