ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆ
ಗಂಗಾವತಿ: ನಗರದ 21ನೇ ವಾರ್ಡ್ನಲ್ಲಿ ಬಿಜೆಪಿ, ಕಾಂಗ್ರೆಸ್ ಪಕ್ಷ ತೊರೆದು ಕೆಲವರು ಜೆಡಿಎಸ್ ಸೇರ್ಪಡೆಯಾದರು. ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ಜೆಡಿಎಸ್ ಧ್ವಜ ನೀಡಿ ಸ್ವಾಗತಿಸಿಕೊಂಡರು.
ಈ ಸಂದರ್ಭ ಮಾತನಾಡಿದ ಅವರು, ಜೆಡಿಎಸ್ ಅಧಿಕಾರಕ್ಕೆ ಬಂದರೆ ಬಡವರಿಗೆ ಪ್ರತಿ ಒಂದು ಕಾರ್ಡಿಗೂ 25 ಕೆಜಿ ಅಕ್ಕಿ, 10 ಸಾವಿರ ನಿವೇಶನಗಳೊಂದಿಗೆ ಜನತಾ ಮನೆ ನಿರ್ಮಿಸಿಕೊಡುವ ಗುರಿ ಹೊಂದಿದ್ದೇನೆ. ಅಲ್ಲದೇ, ಕುಡಿಯುವ ನೀರು, ರಸ್ತೆ, ಶೌಚಾಲಯ ನಿರ್ಮಿಸಿಕೊಡಲಾಗುವುದು ಎಂದರು.
ಜೆಡಿಎಸ್ ಮುಖಂಡರಾದ ಎಸ್.ಬಿ. ಖಾದ್ರಿ, ಶೇಖ್ನಬೀಸಾಬ್, ವೀರಣ್ಣ ಡಗ್ಗಿ, ಆರತಿ ತಿಪ್ಪಣ್ಣ, ಬೇಲ್ದಾರ ಮಾಬುಸಾಬ್, ಗುತ್ತಿ ಮೆಹಬೂಬಾ ಸಾಬ್, ಹಾಜಿಬಾಬಾ, ವೀರಭದ್ರಸ್ವಾಮಿ, ವೀರಣ್ಣ, ವೆಂಕಟೇಶ, ಪಂಪಣ್ಣ ನಾಯಕ, ಫಕೀರಮ್ಮ ಗುಡ್ಡೇಕಲ್, ಕಾಶಿ ವಿಶ್ವನಾಥ, ವೆಂಕಟೇಶ ಭೋವಿ, ಗಂಗಮ್ಮ, ಹನುಮಮ್ಮ, ಬಸವರಾಜ, ಸಂಜೀವಪ್ಪ, ಅಲಿಮಾಖಾನ್ ಇತರರಿದ್ದರು.