ಇಂದು ವಿದ್ಯಾರ್ಥಿಗಳಿಗಾಗಿ ಕಾನೂನು ಸಾಕ್ಷರತಾ ಕಾರ್ಯಕ್ರಮ
ನರಗುಂದ: ತಾಲೂಕಿನ ಸುರಕೋಡ, ಹದ್ಲಿ ಗ್ರಾಮಗಳಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ ಆಶ್ರಯದಲ್ಲಿ ಫೆ. 7ರ ಬೆಳಗ್ಗೆ 10ಗಂಟೆಗೆ ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳಿಗಾಗಿ ಕಾನೂನು ಅರಿವು ಕುರಿತು ಸಾಕ್ಷರತಾ ಕಾರ್ಯಕ್ರಮ ಜರುಗಲಿದೆ. ಉದ್ಘಾಟನೆಯನ್ನು ಜಿಲ್ಲಾ ನ್ಯಾಯಾಧೀಶ ಟಿ.ಎಚ್. ಅವಿನ ನೆರವೇರಿಸುವರು. ದಿವಾಣಿ ನ್ಯಾಯಾಧೀಶ ಎಲ್.ಆರ್. ಕುರಣೆ, ಜಿ.ಎ. ಮುಲ್ಲಾನವರ, ಎ.ಎಫ್. ಮುಳಗುಂದ, ಗ್ರಾಪಂ ಅಧ್ಯಕ್ಷೆ ಶಾಂತವ್ವ ತಳವಾರ, ಎಪಿಎಂಸಿ ಸದಸ್ಯ ಎಸ್.ಬಿ. ಕರಿಗೌಡ್ರ, ಆರ್.ಜಿ. ಆಡೂರ, ಜಿ.ಬಿ. ಹಾದಿಮನಿ, ಎಂ.ಬಿ. ಅರಹುಣಸಿ, ಎ.ಕೆ. ಬೂದಿಹಾಳ, ನ್ಯಾಯವಾದಿ ಸಿ.ಎಸ್.ಪಾಟೀಲ, ಬಿ.ಎಸ್. ಪಾಟೀಲ, ಎಂ.ಟಿ. ಪಾಟೀಲ, ಎಫ್.ವೈ. ದೊಡಮನಿ, ಸಿ.ಪಿ.ಐ. ಪ್ರಶಾಂತ ಸಿದ್ದನಗೌಡ್ರ, ಶಿಕ್ಷಣಾಧಿಕಾರಿ ಬಿ.ವಿ. ಪಾಟೀಲ, ತಾಲೂಕಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಂ.ಟಿ. ಅಸೂಟಿ, ವಿ.ಡಿ. ಮೊರಬ, ಎಸ್.ಎಸ್. ಅಂಗಡಿ, ವಿ.ಎಸ್. ದೇಶಪಾಂಡೆ, ಬಿ.ಎನ್. ಬೋಸಲೆ, ಎಸ್.ಕೆ. ಹರಪನಹಳ್ಳಿ, ವಿ.ಎಸ್. ದೇಶಪಾಂಡೆ ಮುಂತಾದವರು ಭಾಗವಹಿಸುವರೆಂದು ಪ್ರಕಟಣೆ ತಿಳಿಸಿದೆ.