ಸಾಹಿತ್ಯ ಸಮ್ಮೇಳನದಲ್ಲಿ ಕೃತಿ ಲೋಕಾರ್ಪಣೆ
ಗದಗ: ಹಿರಿಯ ಸಾಹಿತಿ ಗದಗನ ಐ.ಕೆ. ಕಮ್ಮಾರ (ಇಮಾಮಲಿ) ರಚಿಸಿದ ಅಕ್ಷರ ಜಾತ್ರೆಯ ರಾಯಭಾರಿಗಳು ಕೃತಿಯು ಫೆ. 9 ರಿಂದ ಬಿಜಾಪುರದಲ್ಲಿ ಜರುಗುವ 79ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆಗೊಳ್ಳಲಿದೆ ಎಂದು ಪ್ರಕಟಣೆ ತಿಳಿಸಿದೆ.
ನೀರು ಪೂರೈಕೆ ಮಾಹಿತಿ
ಗದಗ: ನಗರದ ಹುಡ್ಕೋ ಕಾಲನಿ ಉಳಿದಭಾಗ, ಸಿದ್ರಾಮೇಶ್ವರ ನಗರ, ಲೋದಿಯವರ ಲೈನ್, ಕೇಶವ ನಗರ, ಬ್ಯಾಂಕರ್ಸ್ ಕಾಲನಿ, ಮೂರಶಿಳ್ಳೀನ ಚಾಳ, ಖಾಜಿಯವರ ಲೈನ್, ಕೊರವರ ಓಣಿ, ಸಿಕ್ಕಲಗಾರ ಓಣಿ, ರಾಧಾಕೃಷ್ಣ ನಗರದ ಉಳಿದ ಭಾಗಗಳಲ್ಲಿ ಗುರುವಾರ ತುಂಗಭದ್ರಾ ನದಿ ನೀರು ಪೂರೈಕೆ ಮಾಡಲಾಗುವುದು ಎಂದು ನಗರಸಭೆಯ ಪ್ರಕಟಣೆ ತಿಳಿಸಿದೆ.