ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

17ಕ್ಕೆ ಚನ್ನವೀರ ಶರಣರ ಜಾತ್ರಾಮಹೋತ್ಸವ

Parashurama
Updated On : 8 Feb 2013, 11:09 am

ಗದಗ: ಫೆ. 17ರಂದು ಬಳಗಾನೂರಿನ ಚಿಕೇನುಕೊಪ್ಪದ ಚನ್ನವೀರ ಶಿವಶರಣರ 18ನೇ ಪುಣ್ಯಸ್ಮರಣೋತ್ಸವ ಹಾಗೂ ಜಾತ್ರಾ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀಮಠದ ಶಿವಶಾಂತವೀರ ಶ್ರೀ ಹೇಳಿದರು.
ಅವರು ಗುರುವಾರ ನಗರದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಚನ್ನವೀರ ಶ್ರೀಗಳ ಪುಣ್ಯಸ್ಮರಣೋತ್ಸವ ಹಾಗೂ ಜಾತ್ರಾ ಮಹೋತ್ಸವದ ಅಂಗವಾಗಿ ಫೆ. 11ರಿಂದ 18ರ ವರೆಗೆ ಹಲವು ವಿಧಾಯಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಫೆ. 11 ರಿಂದ 16ರ ವರೆಗೆ ಪ್ರತಿದಿನ ಸಂಜೆ 6ಕ್ಕೆ ಶರಣ ಚಿಂತನ ಗೋಷ್ಠಿ ಹಮ್ಮಿಕೊಳ್ಳಲಾಗಿದ್ದು, ಗೋಷ್ಠಿಯ ಉದ್ಘಾಟನೆಯನ್ನು ಲಿಂಗನಾಯಕನಹಳ್ಳಿ ಜಂಗಮಕ್ಷೇತ್ರದ ಚನ್ನವೀರ ಶ್ರೀಗಳು ನೆರವೇರಿಸುವರು. ಅಧ್ಯಕ್ಷತೆಯನ್ನು ಅಡ್ನೂರು ದಾಸೋಹ ಮಠದ ಪಂಚಾಕ್ಷರಿ ಶಿವಾಚಾರ್ಯರು ವಹಿಸುವರು. ಫೆ. 15ರ ಬೆಳಗ್ಗೆ 11ಕ್ಕೆ ಬಿಜಾಪುರ ಜ್ಞಾನಯೋಗಾಶ್ರವುದ ಸಿದ್ಧೇಶ್ವರ ಶ್ರೀಗಳಿಂದ ಪ್ರವಚನ ಜರುಗಲಿದೆ.
ಫೆ. 16 ರಂದು ಬೆಳಗ್ಗೆ 8 ಗಂಟೆಗೆ ಕರಿಬಸವ ಶಿವಾಚಾರ್ಯರಿಂದ ಷಟಸ್ಥಳ ಧ್ವಜಾರೋಹಣ ನೆರವೇರಲಿದೆ. ಸಂಜೆ 6ಕ್ಕೆ ಲಘು ರಥೋತ್ಸವ ಜರುಗಲಿದೆ. 7.30ಕ್ಕೆ ಶರಣ ಚಿಂತನ ಗೋಷ್ಠಿಯ ಮಂಗಲೋತ್ಸವ ಜರುಗಲಿದ್ದು, ಸಾನ್ನಿಧ್ಯವನ್ನು ಹೂವಿನಶಿಗ್ಲಿಯ ಚನ್ನವೀರ ಶ್ರೀಗಳು, ಬೈರನಹಟ್ಟಿಯ ಶಿವಪುತ್ರ ಶ್ರೀಗಳು ವಹಿಸುವರು. ಅಧ್ಯಕ್ಷತೆಯನ್ನು ಬೆಳ್ಳಟ್ಟಿಯ ಬಸವರಾಜ ಶ್ರೀಗಳು ವಹಿಸುವರು. ಶಾಂತವೀರ ಶಿವಾಚಾರ್ಯರು, ಗವಿಮಠದ ಹಿರಿಶಿವಶಾಂತವೀರ ಶಿವಾಚಾರ್ಯರು, ಅಣದೂರಿನ ಶಿವಯೋಗಿ ಶಿವಾಚಾರ್ಯರು, ಬಿಕನಳ್ಳಿಯ ಸಿದ್ಧೇಶ್ವರ ಶಿವಾಚಾರ್ಯರು, ಗುಲ್ಬರ್ಗಾದ ಚನ್ನಮಲ್ಲ ದೇವರು ಆಗಮಿಸುವರು. ಫೆ. 17ರ ಬೆಳಗ್ಗೆ 5ಕ್ಕೆ ಚನ್ನವೀರ ಶರಣರ ಕತೃ ಗದ್ದುಗೆಗೆ ಮಹಾರುದ್ರಾಭಿಷೇಕ ಹಾಗೂ ಸಹಸ್ರ ಬಿಲ್ವಾರ್ಚನೆಯು ಬಸಯ್ಯ ಶಾಸ್ತ್ರೀ, ಚನ್ನವೀರ ಶಾಸ್ತ್ರೀ ಹಾಗೂ ಶ್ರೀಮಠದ ವೈದಿಕ ಪಾಠಶಾಲೆಯ ವಿದ್ಯಾರ್ಥಿಗಳ ವೈದಿಕತ್ವದಲ್ಲಿ ಜರುಗಲಿದೆ. ಅಧ್ಯಕ್ಷತೆಯನ್ನು ಬೆದವಟ್ಟಿಯ ಶಿವಸಂಗಮೇಶ್ವರ ಶಿವಾಚಾರ್ಯರು ವಹಿಸುವರು. ಬೆಳಗ್ಗೆ 11ಕ್ಕೆ ಚನ್ನವೀರ ಶರಣರ 18ನೇ ಪುಣ್ಯಸ್ಮರಣೋತ್ಸವ ಹಾಗೂ 55 ಜೋಡಿಗಳ ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮ ಜರುಗಲಿದೆ. ಸಾನ್ನಿಧ್ಯವನ್ನು ಮುಂಡರಗಿ ಸಂಸ್ಥಾನಮಠದ ಅನ್ನದಾನ ಶ್ರೀಗಳು ವಹಿಸುವರು. ಅಧ್ಯಕ್ಷತೆಯನ್ನು ನವಕಲ್ಯಾಣ ಮಠದ ಡಾ. ಮುರುಘರಾಜೇಂದ್ರ ಶ್ರೀಗಳು ವಹಿಸುವರು. ಡಾ. ಶಿವಾನಂದ ಶಿವಾಚಾರ್ಯರು, ಹೊಸಳ್ಳಿಯ ಜ. ಅಭಿನವ ಬೂದೀಶ್ವರ ಶ್ರೀಗಳು, ಶಿವಯೋಗೀಶ್ವರ ಶ್ರೀಗಳು, ಹುಚ್ಚೇಶ್ವರ ಶ್ರೀಗಳು, ಡಾ. ಚನ್ನಮಲ್ಲಶ್ರೀಗಳು ಆಗಮಿಸುವರು. ಮಧ್ಯಾಹ್ನ 1ರಿಂದ 4ರ ವರೆಗೆ ಹಾಲಕ್ಕಿ ಹಾಲೇಶ ತಂಡದವರಿಂದ ಹಾಸ್ಯ ಜಾನಪದ ಸಂಭ್ರಮ ಜರುಗಲಿದೆ. ಸಂಜೆ 5 ಗಂಟೆಗೆ ಜಗದ್ಗುರುಗಳ ಹರಗುರು ಚರಮೂರ್ತಿಗಳ ಹಾಗೂ ಶರಣರ ನೇತೃತ್ವದಲ್ಲಿ ಮಹಾರಥೋತ್ಸವ ಜರುಗಲಿದೆ. ಸಂಜೆ 6 ಗಂಟೆಗೆ ಶರಣ ಸಾಹಿತ್ಯ ಸಂಸ್ಕೃತಿ ಸೌರಭ ಸಮಾರಂಭ ಹಾಗೂ ಬಸವಜಯಂತಿ ಶತಮಾನೋತ್ಸವದ ವರ್ಷಾಚರಣೆಯ ಸಮಾರಂಭ ಜರುಗಲಿದೆ. ಸನ್ನಿದಾನವನ್ನು ಕೊಪ್ಪಳದ ಗವಿಮಠದ ಜ. ಅಭಿನವ ಗವಿಸಿದ್ಧೇಶ್ವರ ಶ್ರೀಗಳು ಹಾಗೂ ಹುಬ್ಬಳ್ಳಿಯ ಎರಡೆತ್ತಿನಮಠದ ಸಿದ್ಧಲಿಂಗ ಶ್ರೀಗಳು ವಹಿಸುವರು. ಅಧ್ಯಕ್ಷತೆಯನ್ನು ಮುರುಘಾಮಠದ ಮಲ್ಲಿಕಾರ್ಜುನ ಶ್ರೀ ವಹಿಸುವರು.  ವಿವಿಧ ರಂಗದಲ್ಲಿ ಸಾಧನೆಗೈದ ಈಶ್ವರ ಮಂಟೂರ, ನೀಲಮ್ಮ ಕೋಣನವರ ಹಾಗೂ ಹಾಲಕ್ಕಿ ಹಾಲೇಶ ಅವರಿಗೆ ಶರಣಶ್ರೀ ಪ್ರಶಸ್ತಿ ಪ್ರದಾನ ನೆರವೇರಲಿದೆ. ರಾತ್ರಿ 10.30ಕ್ಕೆ ನವಲಗುಂದ ಅಜಾತ ನಾಗಲಿಂಗ ಮಹಾತ್ಮೆ ನಾಟಕ ಪ್ರದರ್ಶನಗೊಳ್ಳಲಿದೆ. ಫೆ. 18ರ ಸಂಜೆ 5ಕ್ಕೆ ಕಡುಬಿನ ಕಾಳಗ ಹಾಗೂ ಶರಣರ ಬೆಳ್ಳಿ ರಥೋತ್ಸವ ಜರುಗಲಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಎಸ್.ಎಸ್. ಪಾಟೀಲ (ಅರಹುಣಶಿ), ಎ.ಎನ್.ನಾಗರಳ್ಳಿ, ಶರಣುಗೌಡ ಪಾಟೀಲ, ಶೇಖಣ್ಣ ಗದ್ದಿಕೇರಿ, ಮುರಿಗೆಪ್ಪ ಸಾಮಣ್ಣವರ, ಸಂಗಣ್ಣ ಗೌಡನವರ, ಮಹದೇವಪ್ಪ ಗೌರಿಪುರ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments