ಇಂದು ಪಾಲಕರ ದಿನಾಚರಣೆ
ಮುಂಡರಗಿ: ಸ್ಥಳೀಯ ವಿ.ಜಿ. ಲಿಂಬಿಕಾಯಿ ಕನ್ನಡ ಪ್ರಾಥಮಿಕ ಶಾಲೆ, ಸರಸ್ವತಮ್ಮ ಲಿಂಬಿಕಾಯಿ ಪೂರ್ವ ಪ್ರಾಥಮಿಕ ಶಾಲೆಯ ಪಾಲಕರ ದಿನಾಚರಣೆ ಮತ್ತು ವಾರ್ಷಿಕ ಸ್ನೇಹ ಸಮ್ಮೇಳನವು ಫೆ. 8 ಮತ್ತು 9 ರಂದು ಜರುಗಲಿವೆ. ರೋಟರಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಕೊಟ್ರೇಶ ಅಂಗಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೇಮಂತಗೌಡ ಪಾಟೀಲ, ಪ್ರೊ. ಸಿ.ಎಸ್. ಅರಸನಾಳ, ಡಾ. ನಿಂಗು ಸೊಲಗಿ, ಎಸ್.ವೈ.ನಾಡಗೌಡ್ರ, ಎ.ಜಿ. ಕಡ್ಡಿ, ಜಗನ್ನಾಥ ಅಳವಂಡಿ ಆಗಮಿಸುವರು. ಫೆ. 9ರಂದು ಸಂಜೆ 5ಗಂಟೆಗೆ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮ ಜರುಗಲಿದ್ದು, ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಕೊಟ್ರೇಶ ಅಂಗಡಿ ವಹಿಸುವರು. ಅತಿಥಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎ. ರಡ್ಡೇರ, ಸಿದ್ದಲಿಂಗಯ್ಯ ಹಿರೇಮಠ, ಪಿ.ಎಂ. ಪಾಟೀಲ, ಡಾ. ಅನ್ನದಾನಿ ಮೇಟಿ, ಎಸ್.ವಿ. ಲಿಂಬಿಕಾಯಿ, ರೇಖಾ ಮೇಟಿ, ಎಸ್.ವಿ. ಪಾಟೀಲ, ರಾಮಕೃಷ್ಣ ದೊಡ್ಡಮನಿ, ಪ್ರಭುಗೌಡ ತಲೇಗೌಡ್ರ, ಡಿ.ಡಿ. ಮೋರನಾಳ, ಶ್ರೀನಿವಾಸ ಉಪ್ಪಿನ ಬೆಟಗೇರಿ ಪಾಲ್ಗೊಳ್ಳುವರು. ಇದೇ ಸಂದರ್ಭದಲ್ಲಿ ಆನಂದ ಕಂಚಗಾರ ಅವರಿಗೆ ಸನ್ಮಾನ ಜರುಗಲಿದೆ. ಪಾಲಕರು, ಸಂಸ್ಥೆಯ ಹಿತೈಸಿಗಳು ಪಾಲ್ಗೊಳ್ಳಬೇಕೆಂದು ಶಾಲಾ ಮುಖ್ಯೋಪಾಧ್ಯಾಯ ಸಿ.ವಿ. ಪಾಟೀಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು ಜೋಶಿ ನಗರಕ್ಕೆ
ಗದಗ: ನಂಜುಂಡಪ್ಪ ವರದಿ ಅನುಷ್ಠಾನ ಉನ್ನತಾಧಿಕಾರ ಸಮಿತಿಯ ಅಧ್ಯಕ್ಷ ತ್ರಿವಿಕ್ರಮ ಜೋಶಿ ಫೆ. 8ರಂದು ನಗರಕ್ಕೆ ಆಗಮಿಸಿ ಬೆಳಗ್ಗೆ 10.30ಕ್ಕೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆಸುವರು. ನಂತರ 11.30ಕ್ಕೆ ಸುದ್ದಿಗೋಷ್ಠಿ ನಡೆಸುವರೆಂದು ಪ್ರಕಟಣೆ ತಿಳಿಸಿದೆ.
ನೀರು ಪೂರೈಕೆ ಮಾಹಿತಿ
ಗದಗ: ನಗರದ ದಾಸರ ಓಣಿ, ಸರಾಫಬಜಾರ್, ಹಾಳದಿಬ್ಬ, ಕರಿದೇವರಗುಡಿಲೈನ್, ಅಣಬಿನಗಲ್ಲಿ, ಕರುಗಲ್ಲ ಓಣಿ, ಮಸೂತಿ ಲೈನ್, ನಾಲ್ವಾಡ ಗಲ್ಲಿ, ರಂಗನವಾಡ, ಹನುಮಾನ ನಗರ, ರಾಚೂಟೇಶ್ವರ ನಗರ, ಗೆಳೆಯರ ಬಳಗ, ಒಕ್ಕಲಗೇರಿ ಓಣಿ, ಗೌಡ್ರ ಲೈನ್, ಮೇರವಾಡೆ ಲೈನ್, ಕುರುಬರ ಗರಡಿ ಮನೆಲೈನ್ ಈ ಭಾಗಗಳಲ್ಲಿ ಶುಕ್ರವಾರ ನೀರು ಪೂರೈಕೆ ಮಾಡಲಾಗುವುದು ಎಂದು ನಗರಸಭೆಯ ಪ್ರಕಟಣೆ ತಿಳಿಸಿದೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.