ಆತ್ಮಹತ್ಯೆ
ಗದಗ: ವ್ಯಕ್ತಿಯೋರ್ವ ಮನೆಯಲ್ಲಿನ ಸಮಸ್ಯೆ ಹಾಗೂ ಸಾಲಬಾಧೆಯಿಂದ ಮನನೊಂದು ಮನೆಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ನಗರದ ಒಕ್ಕಲಗೇರಿ ಭಾಗದಲ್ಲಿ ನಡೆದಿದೆ. ಮೃತನನ್ನು ಶಿದ್ಧನಗೌಡ ಶಂಕರಗೌಡ ಪಾಟೀಲ (46) ಎಂದು ಗುರುತಿಸಲಾಗಿದೆ. ಈ ಕುರಿತು ಗದಗ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟ್ರ್ಯಾಕ್ಟರ್ ಹಾಯ್ದು ಸಾವು
ಗದಗ: ಜಿಲ್ಲೆಯ ರೋಣ ಪಟ್ಟಣದಲ್ಲಿ ಟ್ರ್ಯಾಕ್ಟರ್‌ಒಂದು ಗೊಬ್ಬರ ತುಂಬುತ್ತಿದ್ದ ವೇಳೆಯಲ್ಲಿ ಮುಂದೆ ಚಲಿಸಲು ಪ್ರಾರಂಭಿಸಿದಾಗ ಅದರ ಗಾಲಿಗೆ ಕಲ್ಲು ಹಾಕಲು ಹೋಗಿ ವ್ಯಕ್ತಿಯೋರ್ವ ಚಕ್ರದಡಿಗೆ ಸಿಲುಕಿ ಸಾವನ್ನಪ್ಪಿದ ಘಟನೆ ಶುಕ್ರವಾರ ನಡೆದಿದೆ. ಮೃತನನ್ನು ವೀರಪ್ಪ ಬಸಪ್ಪ ಗಾಣಿಗೇರ (24) ಎಂದು ಗುರುತಿಸಲಾಗಿದ್ದು, ಈ ಕುರಿತು ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೀರು ಪೂರೈಕೆ ಮಾಹಿತಿ
ಗದಗ: ನಗರದ ಚವ್ಹಾಣ ಮನೆ ಲೈನ್, ಜವುಳಗಲ್ಲಿ, ವೀರನಾರಾಯಣ ಗುಡಿ ರಸ್ತೆ, ಖಾನತೋಟ, ಜಂತ್ಲಿಯವರ ಲೈನ್, ಕುಂಬಾರ ಓಣಿ, ಪಡಗದ ಅವರ ಲೈನ್, ವಿಭೂತಿ ಓಣಿ, ಶನಿವಾರ ನೀರು ಪೂರೈಕೆ ಮಾಡಲಾಗುವುದು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.