ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಸಾಧನೆಯ ಹಾದಿಗೆ ಸಾಕ್ಷಿಯಾದ ಶಾಸಕ ಮುನೇನಕೊಪ್ಪ

Parashurama
Updated On : 10 Feb 2013, 11:28 am

ಅಣ್ಣಿಗೇರಿ:  ನವಲಗುಂದ ತಾಲೂಕಿನಲ್ಲಿ ದೊಡ್ಡ ಪಟ್ಟಣವಾಗಿರುವ ಅಣ್ಣಿಗೇರಿ ಅಭಿವೃದ್ಧಿಗೆ ಶಾಸಕ ಶಂಕರಪಾಟೀಲ ಮುನೇನಕೊಪ್ಪ ಹೆಚ್ಚಿನ ಒತ್ತು ನೀಡಿದ್ದಾರೆ. ಅಣ್ಣಿಗೇರಿ ಪುರಸಭೆಗೆ ರು. 21.76 ಕೋಟಿ ಅನುದಾನ ಮಂಜೂರು ಮಾಡಿಸಿ ಸಿಸಿ ರಸ್ತೆ, ಸಿಡಿ, ಚರಂಡಿ, ಡಾಂಬರೀಕರಣ ಶೌಚಾಲಯ, ಕಾಂಪೌಂಡ್, ಹೈಮಾಸ್ಕ್ ವಿದ್ಯುತ್ ದೀಪ ಅಳವಡಿಕೆ ಸೇರಿದಂತೆ ಪಟ್ಟಣದ ಸೌಂದರ್ಯೀಕರಣಕ್ಕೆ ಶ್ರಮಿಸಿದ್ದಾರೆ. ಅಂಗವಿಕಲರಿಗೆ, ಮಹಿಳೆಯರಿಗೆ, ಎಸ್‌ಸಿ, ಎಸ್‌ಟಿ ವರ್ಗಕ್ಕೆ ಅನೇಕ ಯುವಕ ಮತ್ತು ಮಹಿಳಾ ಮಂಡಳಿಗಳಿಗೆ, ವಿದ್ಯಾರ್ಥಿಗಳಿಗೆ ವಿವಿಧ ಯೋಜನೆಗಳಲ್ಲಿ ಧನ ಸಹಾಯ ಒದಗಿಸಿದ್ದಾರೆ.  ಪುರಾತನ ಕೆರೆ ಮತ್ತು ಅಂಬಿಗೇರಿ ಕೆರೆ ಹೂಳು ತೆಗೆದು ಅಭಿವೃದ್ಧಿ ಪಡಿಸಲಾಗುತ್ತಿದೆ. ಶಾಶ್ವತ ಕುಡಿಯುವ ನೀರಿನ ಯೋಜನೆಗೆ ರು. 45.75 ಕೋಟಿ ಮಂಜೂರು ಮಾಡಿಸಿದ್ದಾರೆ. ಅಲ್ಲದೇ, ಅಣ್ಣಿಗೇರಿಯಿಂದ ನವಲಗುಂದ ರಸ್ತೆ ಅಗಲೀಕರಣ, ಬಸ್ ನಿಲ್ದಾಣ ದುರಸ್ತಿ ಮತ್ತು ನವೀಕರಣ ಹೀಗೆ ಜನಪರ ಕಾರ್ಯಗಳನ್ನು ಶಾಸಕ ಮುನೇನಕೊಪ್ಪ ಮಾಡಿದ್ದಾರೆ. ಇಲ್ಲಿವರೆಗೆ ತಾಲೂಕಿನ ಯಾವ ಶಾಸಕರೂ ಬಿಡುಗಡೆ ಮಾಡದಷ್ಟು ಅನುದಾನ ದೊರಕಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೇ, ಬಜೆಟ್‌ನಲ್ಲಿ ಅಣ್ಣಿಗೇರಿ ತಾಲೂಕು ಕೇಂದ್ರವೆಂದು ಪರಿಗಣಿಸಿದ್ದು, ವಿಶೇಷ ತಹಸೀಲ್ದಾರ್ ಕಚೇರಿ, ಉಪನೋಂದಣಿ ಕಚೇರಿ ಸೇರಿದಂತೆ ಹತ್ತು ಹಲವಾರು ಯೋಜನೆಗಳಿಗೆ ಚಾಲನೆ ನೀಡುವಲ್ಲಿ ಸಿದ್ಧ ಹಸ್ತರೆನಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments