ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಅಭಿವೃದ್ಧಿಗೆ ಜನತೆ ಸಹಕಾರ ಪ್ರೇರಕ

Parashurama
Updated On : 11 Feb 2013, 12:22 pm

ಕನ್ನಡಪ್ರಭ ವಾರ್ತೆ, ಗದಗ, ಫೆ. 10
ಅವಳಿ ನಗರ ಅಭಿವೃದ್ಧಿಯ ಹೊಸ ಚಿಂತನೆಗೆ ಸಾರ್ವಜನಿಕರಿಂದ ದೊರತೆ ಪ್ರೇರಕ ಶಕ್ತಿ ಕಾರಣವಾಗಿದ್ದು, ಸರ್ವರ ಸಹಕಾರದಲ್ಲಿ ಹಲವಾರು ಯೋಜನೆ ಅನುಷ್ಠಾನಗೊಳಿಸಿದ ಸಂತೃಪ್ತಿ ನನ್ನದಾಗಿದೆ ಎಂದು ಶಾಸಕ ಶ್ರೀಶೈಲಪ್ಪ ಬಿದರೂರ ಹೇಳಿದರು.
ಅವರು ಭಾನುವಾರ ನಗರದ ಪಂಚಾಕ್ಷರಿ ನಗರದ ಬುರಬುರೆ ಲೇಔಟ್‌ನಲ್ಲಿ ಗದಗ-ಬೆಟಗೇರಿ ನಗರಸಭೆ 2010-11ನೇ ಸಾಲಿನ ಮಾನ್ಯ ಮುಖ್ಯಮಂತ್ರಿಗಳ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿ ಯೋಜನೆ ಅಡಿಯಲ್ಲಿ ರು. 25ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಪುಟ್ಟರಾಜ ಉದ್ಯಾನವನದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಪ್ರಥಮ ಬಾರಿ ಮುಖ್ಯಮಂತ್ರಿಗಳ ಪಟ್ಟಣ ಅಭಿವೃದ್ಧಿ ಯೋಜನೆಯಲ್ಲಿ ನಗರಸಭೆಗೆ ಬಿಡುಗಡೆಯಾದ ರು. 30 ಕೋಟಿ ಅನುದಾನದಲ್ಲಿ ನಗರದ ಪ್ರಮುಖ ಮುಖ್ಯ ರಸ್ತೆಗಳನ್ನು ಮರು ನಿರ್ಮಿಸುವ ಮೂಲಕ ಅಭಿವೃದ್ಧಿಗೊಳಿಸಲಾಗಿದೆ.
2ನೇ ಅವಧಿಯಲ್ಲಿ ಬಿಡುಗಡೆಯಾದ ರು. 30 ಕೋಟಿ ಅನುದಾನದಲ್ಲಿ ನಗರದ ಹೊಸ ಬಡಾವಣೆಗಳು ಸೇರಿದಂತೆ ಎಲ್ಲ ಆಂತರಿಕ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಗಮನ ನೀಡಿ, ಆದ್ಯತೆ ಮೇರೆಗೆ ಕಾರ್ಯನಿರ್ವಹಿಸಲು ಕ್ರಮ ಕೈಗೊಳ್ಳಲಾಗಿದೆ. ಉದ್ಯಾನವನದಲ್ಲಿ ನೀರಿನ ಕೊರತೆ ಗಮನಕ್ಕೆ ಬಂದಿದ್ದು, ಈ ಹಿನ್ನೆಲೆಯಲ್ಲಿ ನೀರು ಸಂಗ್ರಹಿಸುವ ಸಂಪ್ ನಿರ್ಮಿಸಲು ನಗರಸಭೆ ಆಡಳಿತಕ್ಕೆ ಸೂಚಿಸಿದ್ದೇನೆ. ಈಗಾಗಲೇ ನಗರದ ಹುಡ್ಕೋ ಕಾಲೋನಿ ಮತ್ತು ಗಂಗಿಮಡಿಯಲ್ಲಿ 1.5 ಎಂಎಲ್‌ಡಿ ಸಾಮರ್ಥ್ಯದ ಕಲ್ಮಶ ನೀರು ಶುದ್ಧೀಕರಣ ಘಟಕ ಸ್ಥಾಪನೆ ಕಾರ್ಯ ಪ್ರಾರಂಭಿಸಲಾಗಿದ್ದು, ಸಾರ್ವಜನಿಕರು ಸಹಕರಿಸಿದಲ್ಲಿ ಈ ಭಾಗದಲ್ಲಿಯೂ ಒಂದು ಘಟಕ ಸ್ಥಾಪಿಸಲು ಚಿಂತನೆ ನಡೆಸಬಹುದಾಗಿದೆ ಎಂದರು.
ಉದ್ಯಾನವನದಲ್ಲಿ ವಾಯು ವಿಹಾರ ಪಥ ನಿರ್ಮಾಣಕ್ಕೆ ಬೇಕಾಗುವ ರು. 12 ಲಕ್ಷ ಬಿಡುಗಡೆಗೆ ಕ್ರಮ ಕೈಗೊಳ್ಳುವುದಾಗಿ ಹೇಳಿದರು. ಅಧ್ಯಕ್ಷತೆ ವಹಿಸಿದ್ದ ನಗರಸಭೆ ಅಧ್ಯಕ್ಷ ಶಿವಣ್ಣ ಮುಳಗುಂದ ಮಾತನಾಡಿ, ಅವಳಿ ನಗರದ ಉದ್ಯಾನವನಗಳು ಸೇರಿದಂತೆ ಸರ್ವ ಮೂಲ ಸೌಲಭ್ಯಗಳ ಕೊರತೆ ನೀಗಿಸಲು ಪಕ್ಷಾತೀತವಾಗಿ ಆಡಳಿತ ನಡೆಸಲಾಗಿದ್ದು, ಪರಿಸರ ಸಂರಕ್ಷಣೆಗೆ ಪ್ರಾಮುಖ್ಯತೆ ನೀಡಲಾಗಿದೆ ಎಂದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀಕೃಷ್ಣ ಹೊಂಬಾಳಿ, ನಗರಸಭೆಯ ವಿರೋಧ ಪಕ್ಷದ ನಾಯಕ ಎಂ.ಎಂ. ಹಿರೇಮಠ, ಸದಸ್ಯ ಸಿ.ಕೆ. ಮಾಳಶೆಟ್ಟಿ, ವಿದ್ಯಾದಾನ ಸಮಿತಿಯ ಅಧ್ಯಕ್ಷ ಧೀರೇಂದ್ರ ಹುಯಿಲಗೋಳ, ಭೂಸೇನಾ ನಿಗಮದ ಸಹಾಯಕ ನಿರ್ದೇಶಕ ಆರ್. ಶ್ರೀನಿವಾಸ, ಬಸವರಾಜ ಕೊರ್ಲಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ವಂದನಾ ವರ್ಣೇಕರ, ಹೈಸ್ಕೂಲ್ ಕಮಿಟಿಯ ಅಧ್ಯಕ್ಷ ಸದಾನಂದ ಪಿಳ್ಳಿ ಮುಂತಾದವರು ಉಪಸ್ಥಿತರಿದ್ದರು. ಸದಸ್ಯೆ ಜಯಶ್ರೀ ಉಗಲಾಟದ ಸ್ವಾಗತಿಸಿದರು. ರತ್ನಾ ಪಾಟೀಲ, ಜ್ಯೋತಿ ಉಗಲಾಟದ ಪ್ರಾರ್ಥಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments