ಇಂದು ಸಾಮೂಹಿಕ ವಿವಾಹ
ಗದಗ: ರೋಣ ತಾಲೂಕಿನ ಕುರಡಗಿ ಗ್ರಾಮದ ವರವೀರಭದ್ರೇಶ್ವರ ಗದ್ದುಗೆ ಸ್ಥಾಪನೆಯ ಸವಿನೆನಪಿಗಾಗಿ ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ಫೆ. 11ರ ಬೆಳಗ್ಗೆ 10.15ಕ್ಕೆ ಹಮ್ಮಿಕೊಳ್ಳಲಾಗಿದೆ. ಸಾನ್ನಿಧ್ಯವನ್ನು ಹಾಲಕೇರಿಯ ಅಭಿನವ ಅನ್ನದಾನ ಶ್ರೀಗಳು, ಸೂಡಿಯ ಜುಕ್ತಿಹಿರೇಮಠದ ಡಾ. ಕೊಟ್ಟೂರು ಬಸವೇಶ್ವರ ಶಿವಾಚಾರ್ಯರು ವಹಿಸುವರು. ಅತಿಥಿಗಳಾಗಿ ಡಾ. ಸಿದ್ದಯ್ಯ ಹಿರೇಮಠ, ವೀರಣ್ಣ ಹಂಚಿನಾಳ, ವೀರಭದ್ರಪ್ಪ ಗಂಗಣ್ಣವರ, ಪ್ರಕಾಶ ಘಾಟಗೆ, ಯಮನಪ್ಪ ಕಬ್ಬೇರ, ಬಸವರಾಜ ಕುರಡಗಿಮಠ, ಶಂಕ್ರವ್ವ ಬೇವಿಕನಕಟ್ಟಿ, ಗಂಗಾಧರ ಕೋಟಿ, ಯು.ವಿ. ಹುಲಕೋಟಿ, ಸಿ.ಎ. ಹಳ್ಳಿಗುಡಿ ಉಪಸ್ಥಿತರಿರುವರು. ಸಾಧಕರನ್ನು ಸನ್ಮಾನಿಸುವ ಹಾಗೂ ಗುರುರಕ್ಷೆ ನೀಡುವ ಕಾರ್ಯಕ್ರಮ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.