ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಗ್ರಾಮಗಳ ಅಭಿವೃದ್ಧಿಗೆ ಜನರ ಸಹಕಾರ ಅವಶ್ಯ

Parashurama
Updated On : 12 Feb 2013, 11:57 am

ನರಗುಂದ: ಸರ್ಕಾರ ಪ್ರತಿವರ್ಷ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಸಾವಿರಾರು ಕೋಟಿ ಅನುದಾನ ಬಿಡುಗಡೆಗೊಳಿಸುತ್ತಿದ್ದು, ಜನರು ತಮ್ಮ ಗ್ರಾಮಕ್ಕೆ ಬಂದ ಯೋಜನೆಗಳಿಗೆ ಸಹಕಾರ ನೀಡುವ ಮೂಲಕ ಯೋಜನೆಗಳ ಸಫಲತೆಗೆ ಸಹಕರಿಸುವಂತೆ ಶಾಸಕ ಸಿ.ಸಿ. ಪಾಟೀಲ್ ಹೇಳಿದರು.  ಅವರು ಭಾನುವಾರ ತಾಲೂಕಿನ ಬೈರನಹಟ್ಟಿ ಗ್ರಾಮವನ್ನು ಸುವರ್ಣಗ್ರಾಮ ಯೋಜನೆಗೆ ಮತ್ತು ಬೈರನಟ್ಟಿಯಿಂದ ರಡ್ಡೇರನಾಗನೂರ ಒಳರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ನಾನು ಶಾಸಕನಾಗಿ ಅಧಿಕಾರ ವಹಿಸಿಕೊಂಡ ಮೇಲೆ ಕ್ಷೇತ್ರದ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗಾಗಿ ಹಲವಾರು ಯೋಜನೆ ಹಮ್ಮಿಕೊಳ್ಳುವ ಮೂಲಕ ಗ್ರಾಮಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಗ್ರಾಮಸ್ಥರು ತಮ್ಮ ಗ್ರಾಮದಲ್ಲಿ ನಡೆಯುವ ಕಾಮಗಾರಿಗೆ ಅಡತಡೆ ಮಾಡದೇ ಗುತ್ತಿಗೆದಾರರಿಗೆ ಸಹಕಾರಿ ನೀಡಿ ಉತ್ತಮ ಕೆಲಸ ತೆಗೆದುಕೊಳ್ಳಿ. ಕಾಮಗಾರಿಯಲ್ಲಿ ಏನಾದರೂ ಕಳಪೆ ಕಂಡುಬಂದಲ್ಲಿ ಕೂಡಲೇ ಮೇಲಧಿಕಾರಿಗಳ ಗಮನಕ್ಕೆ ತರಬೇಕು. ಗುತ್ತಿಗೆದಾರರು ತಾವು ಕೈಗೊಂಡ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಕೋರಿದರು.  ಸಾನ್ನಿಧ್ಯವಹಿಸಿದ್ದ ಶಾಂತಲಿಂಗ ಶ್ರೀ, ಅತಿಥಿಗಳಾಗಿ ಆಗಮಿಸಿದ್ದ ಬಿ.ಬಿ. ಐನಾಪುರ, ಸಿ.ವೈ. ದಂಡಿನ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಪಂ ಸದಸ್ಯ ಶಾಂತಾ ದಂಡಿನ, ತಾಪಂ ಅಧ್ಯಕ್ಷೆ ಹನಮವ್ವ ಮಾದರ, ಉಪಾಧ್ಯಕ್ಷೆ ಪಾರವ್ವ ಐನಾಪುರ, ಸದಸ್ಯ ಹನಮಂತ ಸಂಗಟಿ, ವೈ.ಬಿ. ಮೊರಬದ, ತಾಪಂ ಅಧ್ಯಕ್ಷ ಗುರಪ್ಪ ಆದಪ್ಪನವರ, ಬಿ.ಎಸ್. ಪಾಟೀಲ, ಎಪಿಎಂಸಿ ಅಧ್ಯಕ್ಷ ಅಜ್ಜಪ್ಪ ಹುಡೇದ, ಸದಸ್ಯ ಎಸ್.ಬಿ. ಕರಿಗೌಡರ, ಬಸನಗೌಡ ಚಿಕ್ಕನಗೌಡ್ರ, ಧರ್ಮರಾಜಪ್ಪ ತೆಗ್ಗಿನಮನಿ, ಉಮೇಶ ಮೊರಬದ, ಎಲ್.ಎಂ. ಪಾಟೀಲ, ನಾಗೇಶ ನರಸಾಪುರ, ನಾಗಪ್ಪ ಬೆನ್ನೂರ, ಎಸ್.ಬಿ. ಪಾಟೀಲ, ಭೀಮಪ್ಪ ಐನಾಪುರ, ವಾಸುದೇವ ಪೂಜಾರ, ಸಿದ್ದಪ್ಪ ಸಂಗಳದ, ಮಲ್ಲಿಕಾರ್ಜುನ ಐನಾಪುರ, ಶಿವಯ್ಯ ಹಿರೇಮಠ, ಅರ್ಜುನ ಬದಾಮಿ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments