ಬಸ್ ಖರೀದಿಗೆ ರು. 50 ಕೋಟಿ
ಮುಂಡರಗಿ: ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಗೆ 150 ಎಕ್ಸ್ಪ್ರೆಸ್ ಬಸ್ ಖರೀದಿಸುವುದಕ್ಕಾಗಿ ಸರ್ಕಾರ ರು. 50 ಕೋಟಿ ಮಂಜೂರು ಮಾಡಿದೆ ಎಂದು ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಅಧ್ಯಕ್ಷ ಎಂ.ಎಸ್. ಕರಿಗೌಡ್ರ ಹೇಳಿದರು.
ಅವರು ಈಚೆಗೆ ಮುಂಡರಗಿ ಎಪಿಎಂಸಿ ಸಭಾಭವನದಲ್ಲಿ ತಾಲೂಕು ಬಿಜೆಪಿ ಹಾಗೂ ಶಹರ ಬಿಜೆಪಿಯಿಂದ ಜರುಗಿದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
30 ಹವಾನಿಯಂತ್ರಿತ ಬಸ್ ಖರೀದಿಗಾಗಿ ರು. 18 ಕೋಟಿ, ತಾಲೂಕಿಗೊಂದು ಮಿನಿ ಬಸ್ ಓಡಿಸಲು ರು. 3 ಕೋಟಿ ಸರ್ಕಾರ ಮಂಜೂರು ಮಾಡಿದೆ. ಶೀಘ್ರದಲ್ಲಿಯೇ ಸಾರ್ವಜನಿಕರಿಗೆ ಬಸ್ಗಳ ತೊಂದರೆ ಕಡಿಮೆ ಮಾಡಲು ಕ್ರಮಕೈಗೊಳ್ಳುವುದಾಗಿ ತಿಳಿಸಿದರು.
ಗ್ರಾಮೀಣ ಪ್ರದೇಶಗಳಲ್ಲಿ ಸಮಯಕ್ಕೆ ಸರಿಯಾಗಿ ಬಸ್ ಸೌಲಭ್ಯವಿಲ್ಲ ಎನ್ನುವ ದೂರುಗಳಿದ್ದು, ಸದ್ಯ ನಿಗದಿತ ಸಮಯದಲ್ಲಿ ಬಸ್ ಸೌಲಭ್ಯ ಒದಗಿಸಲು ಎಲ್ಲ ಕ್ರಮ ಕೈಗೊಳ್ಳಲಾಗಿದೆ. ಸಂಸ್ಥೆಯಲ್ಲಿ ಒಟ್ಟು 22 ಸಾವಿರ ನೌಕರರು ಕಾರ್ಯನಿರ್ವಹಿಸುತ್ತಿದ್ದು, ರು. 11 ಸಾವಿರ ಕೋಟಿ ವ್ಯವಹಾರ ಮಾಡಲಾಗುತ್ತಿದೆ. 5 ಸಾವಿರ ಬಸ್ಗಳು ನಿತ್ಯ ಸಾರ್ವಜನಿಕರ ಸೇವೆ ಮಾಡುತ್ತಿವೆ.
ಹಿರಿಯ ನಾಗರಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ, ಅಂಗವಿಕಲರಿಗೆ, ಸ್ವಾತಂತ್ರ್ಯ ಹೋರಾಟಗಾರರಿಗೆ ಒಟ್ಟು 90 ಲಕ್ಷ ಜನರಿಗೆ ವಾಯವ್ಯ ಸಾರಿಗೆ ಸಂಸ್ಥೆಯಿಂದ ಪಾಸ್ ನೀಡಲಾಗಿದೆ ಎಂದರು. ಸರ್ಕಾರಿ ಬಸ್ಗಳಲ್ಲಿ ಸಂಚರಿಸಲು ಬಸ್ ಪಾಸ್ ಪಡೆದಿರುವ ವಿದ್ಯಾರ್ಥಿಗಳು ತಮ್ಮ ಕುಟುಂಬಸ್ಥರಿಗೂ ಸರ್ಕಾರಿ ಬಸ್ಗಳಲ್ಲಿಯೇ ಪ್ರಯಾಣಿಸುವಂತೆ ತಿಳಿಸಬೇಕು. ಸರ್ಕಾರಿ ಬಸ್ಗಳಲ್ಲಿ ಪ್ರಯಾಣಿಕರಿಗೆ ಎಲ್ಲ ರೀತಿಯ ಸೌಲಭ್ಯ ಒದಗಿಸಿಕೊಡಲಾಗುವುದು. ಕಡಿಮೆ ಅವಧಿಗೆ ನಾನು ಅಧ್ಯಕ್ಷನಾಗಿದ್ದು, ಇರುವ ಸಮಯದಲ್ಲಿಯೇ ಪ್ರಾಮಾಣಿಕತೆಯಿಂದ ಕೆಲಸ ಮಾಡುವುದಾಗಿ ತಿಳಿಸಿದರು. ಬಿಜೆಪಿ ಅಧ್ಯಕ್ಷ ಕರಬಸಪ್ಪ ಹಂಚಿನಾಳ ಮಾತನಾಡಿ, ಪ್ರಾಮಾಣಿಕತೆಯಿಂದ ಪಕ್ಷಕ್ಕಾಗಿ ದುಡಿದ ಕರಿಗೌಡರಿಗೆ ಸರ್ಕಾರ ಸೂಕ್ತ ಸ್ಥಾನ ಮಾನ ನೀಡಿದೆ ಎಂದರು. ಶಾಸಕ ರಾಮಣ್ಣ ಲಮಾಣಿ ಮಾತನಾಡಿ, ಶಿರಹಟ್ಟಿ ಹಾಗೂ ಮುಂಡರಗಿ ಭಾಗದಲ್ಲಿ ಗುಣಮಟ್ಟದ ರಸ್ತೆಗಳಿದ್ದು, ಉತ್ತಮ ಹಾಗೂ ಹೊಸ ಬಸ್ಗಳನ್ನು ನೀಡಬೇಕೆಂದರು. ವಿ.ಟಿ. ಮೇಟಿ, ರಜನೀಕಾಂತ ದೇಸಾಯಿ, ಶೇಖವ್ವ ಸಂಗಟಿ, ಹಾಲಪ್ಪ ಉಳ್ಳಾಗಡ್ಡಿ, ಪಿ.ಎಂ. ಪಾಟೀಲ, ಸೀತಾರಾಮರಾಜು, ಮಲ್ಲಣ್ಣ ಹಳೆಮನಿ, ನೀಲಕಂಠಪ್ಪ ಪತ್ತಾರ, ಮಂಜುನಾಥ ಇಟಗಿ, ಎಸ್.ವಿ. ಪಾಟೀಲ, ಆರ್.ಎಂ. ತಪ್ಪಡಿ. ಸುರೇಶ ಕ್ಯಾದಿಗಿಹಳ್ಳಿ, ಗುಡದಪ್ಪ ದೇಸಾಯಿ, ಚಿನ್ನಪ್ಪ ವಡ್ಡಟ್ಟಿ, ಮದರ್ಸಾಬ್ ಸಿಂಗನಮಲ್ಲಿ, ಸುರೇಶ ಮಾಳೇಕೊಪ್ಪ ಉಪಸ್ಥಿತರಿದ್ದರು. ಶಿವಕುಮಾರಗೌಡ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ವೀರೇಂದ್ರ ಪಾಟೀಲ ನಿರೂಪಿಸಿ, ಶಿವು ನವಲಗುಂದ ವಂದಿಸಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.