ಸಂವಿಧಾನಕ್ಕೆ ಬದ್ಧರಾಗಿ: ಶ್ರೀ
ಮುಂಡರಗಿ: ಜಾತ್ಯತೀತ ವ್ಯವಸ್ಥೆಗೆ ನಾವು ಮಾಡುವ ಕೆಲಸಗಳು ಪೂರಕವಾಗಿರಬೇಕೆಂದು ಎಡೆಯೂರು, ಡಂಬಳ-ಗದಗ ಸಂಸ್ಥಾನ ಮಠದ ಜ. ತೋಂಟದ ಡಾ. ಸಿದ್ಧಲಿಂಗ ಶ್ರೀ ಹೇಳಿದರು.
ಅವರು ಈಚೆಗೆ ಪಟ್ಟಣದ ತೋಂಟದಾರ್ಯ ಮಠದಲ್ಲಿ ಜರುಗಿದ 64ನೇ ತ್ರೈಮಾಸಿಕ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ನಾವು ನಮ್ಮ ಸಂವಿಧಾನಕ್ಕೆ ಬದ್ಧರಾಗಿರಬೇಕು. ನಾವು ಹೆಚ್ಚು, ನೀವು ಕಡಿಮೆ, ನಮ್ಮ ಧರ್ಮ ಶ್ರೇಷ್ಠ, ನಿಮ್ಮ ಧರ್ಮ ಕೀಳು, ಎಂಬ ಮೂಲ ಭೂತವಾದವನ್ನು ಹೇಳುವಂತಹ ಸ್ವಾಮೀಜಿಗಳಿದ್ದು, ಅಂತವರನ್ನು ವಿರೋಧಿಸುವುದಲ್ಲದೇ ಜೈಲಿಗೆ ಕಳಿಸಬೇಕು ಎಂದರು. ಈ ದೇಶದಲ್ಲಿ 20 ಕೋಟಿ ಮುಸ್ಲಿಮರಿದ್ದಾರೆ. ಉಳಿದ 80 ಕೋಟಿಯಲ್ಲಿ ಹಲವಾರು ಜಾತಿಯ ಜನರಿದ್ದಾರೆ. ಈ ದೇಶದ ಪ್ರಧಾನ ಮಂತ್ರಿಯವರು ಒಬ್ಬ ಸಿಖ್ ಜನಾಂಗದವರಾಗಿದ್ದಾರೆ. ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಮುಸ್ಲಿಂ ಧರ್ಮದವರಾಗಿದ್ದಾರೆ. ಸರ್ವತಂತ್ರ, ಗಣತಂತ್ರ, ಜಾತ್ಯತೀತ, ಸಾರ್ವಭೌಮ ವ್ಯವಸ್ಥೆಗೆ ಇಡೀ ಜಗತ್ತಿನಲ್ಲಿಯೇ ಭಾರತ ದೇಶ ಕಳಶಪ್ರಾಯವಾಗಿದೆ ಎಂದರು.
ಬಸವರಾಜ ವೆಂಕಟಾಪುರ ಉಪನ್ಯಾಸ ನೀಡಿದರು. ತಾಲೂಕು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಸುರೇಶ ಕುಂಬಾರ, ಈಶ್ವರಪ್ಪ ಉಪ್ಪಿನ ಬೆಟಗೇರಿ ಮುಂತಾದವರನ್ನು ಸನ್ಮಾನಿಸಲಾಯಿತು. ಹನುಮಂತಗೌಡ ಪಾಟೀಲ, ನೀಲಕಂಠಪ್ಪ ಪತ್ತಾರ, ಕೊಟ್ರೇಶ ಅಂಗಡಿ, ರವೀಂದ್ರ ಉಪ್ಪಿನ ಬೆಟಗೇರಿ, ದೃವಕುಮಾರ ಹೊಸಮನಿ, ರುದ್ರಪ್ಪ ಲದ್ದಿ, ಮಂಜುನಾಥ ಇಟಗಿ, ಪಾಲಾಕ್ಷಿ ಗಣದಿಣ್ಣಿ, ಡಾ. ನಿಂಗು ಸೊಲಗಿ ಉಪಸ್ಥಿತರಿದ್ದರು. ಈಶ್ವರಪ್ಪ ಬೆಟಗೇರಿ ಸ್ವಾಗತಿಸಿದರು. ಗಿರೀಶಗೌಡ ಪಾಟೀಲ ನಿರೂಪಿಸಿದರು. ಎ.ಕೆ. ಮುಲ್ಲಾನವರ ವಂದಿಸಿದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.