15ರಂದು ಬಿಎಸ್ಸಾರ್ ಕಾಂಗ್ರೆಸ್ ಸಮಾವೇಶ
ಲಕ್ಷ್ಮೇಶ್ವರ: ಶಿರಹಟ್ಟಿ ವಿಧಾನಸಭೆ ಕ್ಷೇತ್ರದ ಬಿಎಸ್ಆರ್ ಕಾಂಗ್ರೆಸ್ ಪಕ್ಷದ ಬೃಹತ್ ಸಮಾವೇಶವನ್ನು ಫೆ. 15ರಂದು ಪಟ್ಟಣದ ಮಾಜಿ ಶಾಸಕ ಗಂಗಣ್ಣ ಮಹಾಂತಶೆಟ್ಟರ್ ಅವರ ತೋಟದ ಆವರಣದಲ್ಲಿ ಏರ್ಪಡಿಸಲಾಗಿದೆ ಎಂದು ಪಕ್ಷದ ಮುಖಂಡ ಸಣ್ಣಿರಪ್ಪ ಹಳ್ಳೆಪ್ಪನವರ ಹೇಳಿದರು.
ಅವರು ಸೋಮವಾರ ಸಂಜೆ ಗಂಗಣ್ಣ ಮಹಾಂತಶೆಟ್ಟರ್ ಅವರ ನಿವಾಸದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಪಕ್ಷದ ಸಂಸ್ಥಾಪಕ ಅಧ್ಯಕ್ಷ ಬಿ. ಶ್ರೀರಾಮುಲು ಸಮಾವೇಶ ಉದ್ದೇಶಿಸಿ ಮಾತನಾಡುವರು. ಚಲನ ಚಿತ್ರ ನಟಿ ರಕ್ಷಿತಾ ಆಗಮಿಸುವರು. ಗದಗ ಜಿಲ್ಲಾಧ್ಯಕ್ಷ ಗಂಗಣ್ಣ ಮಹಾಂತಶೆಟ್ಟರ, ಅನಿಲ ಮೆಣಸಿನಕಾಯಿ, ವೈ.ಎನ್. ಗೌಡರ. ಸಣ್ಣಿರಪ್ಪ ಹಳ್ಳೆಪ್ಪನವರ, ಶಿರಹಟ್ಟಿ ವಿಧಾನಸಭೆ ಕ್ಷೇತ್ರದ ಬಿಎಸ್ಆರ್ ಕಾಂಗ್ರೆಸ್ನ ನಿಯೋಜಿತ ಅಭ್ಯರ್ಥಿ ಜಯಶ್ರೀ ಹಳ್ಳೆಪ್ಪನವರ. ಯಲಬುರ್ಗಾ ಕ್ಷೇತ್ರದ ನಿಯೋಜಿತ ಅಭ್ಯರ್ಥಿ ನವೀನ ಗುಳಗಣ್ಣವರ, ಅಶೋಕ ಪಲ್ಲೇದ, ಮದನಲಾಲ್ ಬಾಫಣಾ, ತಾಪಂ ಮಾಜಿ ಅಧ್ಯಕ್ಷ ಶಿವನಗೌಡ್ರ ಕಂಠಿಗೌಡ್ರ, ಬಸಲಿಂಗಪ್ಪ ಕಪ್ಪತ್ತನವರ ಆಗಮಿಸುವರು ಎಂದರು.
ಗಂಗಣ್ಣ ಮಹಾಂತಶೆಟ್ಟರ, ಸೋಮಣ್ಣ ಡಾಣಗಲ್ಲ, ಅಶೋಕ ಪಲ್ಲೇದ, ಶಿವಾನಂದ ದೇಸಾಯಿ, ಶೇಖಣ್ಣ ಕರಿನಾಗಣ್ಣವರ, ಖುರ್ಷಿದ ಅಹ್ಮದ್ ಡಾಲಾಯತ್, ರುದ್ರಪ್ಪ ಉಮಚಗಿ, ಶಿವರಾಜಗೌಡ ಪಾಟೀಲ, ಸಂಗಪ್ಪ ಕಾಡಣ್ಣವರ, ಎಂ.ಎಫ್. ಬನ್ನಿಕೊಪ್ಪ, ಮಹಾಂತೇಶ ಹಳ್ಳೆಪ್ಪನವರ, ಶಾಂತಣ್ಣ ಬಳ್ಳಾರಿ ಹಾಜರಿದ್ದರು.