2015ಕ್ಕೆ ಗದಗ ಬೆಟಗೇರಿ ನೀರಿನ ಸಮಸ್ಯೆ ಪರಿಹಾರ
ಕನ್ನಡಪ್ರಭ ವಾರ್ತೆ, ಗದಗ, ಫೆ. 14
ಮುಂದಿನ 2013-14ನೇ ಸಾಲಿನಲ್ಲಿ ಎಲ್ಲ ಮೂಲಭೂತ ಸೌಲಭ್ಯಗಳಿಗೆ ಪ್ರಾಮುಖ್ಯತೆ ನೀಡಿ ಆಯವ್ಯಯ ಮಂಡಿಸಲಾಗಿದ್ದು, 2015ರ ವೇಳೆಗೆ ಅವಳಿ ನಗರದ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಲಿದೆ ಎಂದು ನಗರಸಭೆಯ ಮಾಜಿ ಅಧ್ಯಕ್ಷ ಶಿವಣ್ಣ ಮುಳಗುಂದ ಹೇಳಿದರು. ಅವರು ಬುಧವಾರ ಸಂಜೆ ನಗರದ ಹಳೇ ಸರಾಫ್ ಬಜಾರನಲ್ಲಿ (ಚವಡಿಕೂಟ) ವೃತ್ತಕ್ಕೆ ವಾಸಗಿ ವೃತ್ತವೆಂದು ನಾಮಕರಣಗೊಳಿಸಿದ ಹಿನ್ನೆಲೆಯಲ್ಲಿ ವೃತ್ತ ಉದ್ಘಾಟಿಸಿ ಮಾತನಾಡಿದರು. ನಗರದ ಪ್ರಮುಖ ರಸ್ತೆಗಳ ಅಭಿವೃದ್ಧಿ ವೃತ್ತಗಳ ನಿರ್ಮಾಣ ಹಾಗೂ ಮೂಲಭೂತ ಸೌಕರ್ಯ ಕಲ್ಪಿಸಲು ನಗರಸಭೆ ಆಡಳಿತ ಸರ್ವ ಸದಸ್ಯರು ಹಾಗೂ ನಗರದ ಸಾರ್ವಜನಿಕರ ಸಹಕಾರದಲ್ಲಿ ಪ್ರಾಮಾಣಿಕ ಪ್ರಯತ್ನ ಕೈಗೊಂಡಿದೆ. ಸರ್ವಜಾತಿ ಜನಾಂಗಗಳಿಗೆ ಆದ್ಯತೆ ನೀಡಲಾಗಿದೆ ಎಂದರು.
ಮಾಜಿ ಸದಸ್ಯ ಸಿದ್ದು ಪಲ್ಲೇದ ಮಾತನಾಡಿ, 5 ವರ್ಷದ ಅಧಿಕಾರ ಅವಧಿಯಲ್ಲಿ ಸರಾಫ ಬಜಾರನ ಮುಖ್ಯ ರಸ್ತೆ ಕರಿದೇವರ ಗುಡಿ ಸಂಪರ್ಕ ರಸ್ತೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಅನುಷ್ಠಾನ ಕೈಗೊಂಡಿದ್ದು, ಸಾರ್ವಜನಿಕರ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಆರ್ಯವೈಶ್ಯ ಸಮಾಜದ ಅಧ್ಯಕ್ಷ ಗೋವಿಂದರಾಜ ಕುಷ್ಟಗಿ ಅಧ್ಯಕ್ಷತೆ ವಹಿಸಿದ್ದರು. ಸದಾನಂದ ಹೊನ್ನಳ್ಳಿ, ವಾಸಣ್ಣ ಹೆಬಸೂರ, ನಗರಸಭೆ ಅಭಿಯಂತರ ದೊಡ್ಡಮನಿ, ವಿ.ಟಿ. ಹೇಮಾದ್ರಿ, ಕೆ.ಎನ್. ಹೊಸೂರ, ಕೃಷ್ಣಾ ಜನಾದ್ರಿ, ಪಿ.ವಿ.ಕೊಳೂರ, ಕೆ.ಎಚ್. ಜಂತ್ಲಿ, ಎಸ್.ಜಿ. ಹೆಗಡೆಕಟ್ಟಿ, ಎಸ್.ಎಂ. ಗುಂಡಾ, ಬಿ.ಟಿ. ಹೇಮಾದ್ರಿ, ಜಿ.ಆರ್. ದೊಡ್ಮನಿ, ಎಸ್.ಎಲ್. ಸಂಪಗಾವಿ, ಎನ್.ವಿ. ಶೆಟ್ಟರ, ಎಸ್.ಸಿ. ಪಾನಗಂಟಿ, ವಿ.ಎಚ್. ದೇಸಾಯಿಗೌಡ್ರ, ರಾಜು ರಾಯ್ಕರ, ವೆಂಕಣ್ಣ ದೊಡ್ಮನಿ, ರಮೇಶ ಪಾಲನಕರ, ಡಿ.ವಿ. ಮುಂಡರಗಿ, ರವಿ ಶಿದ್ಲಿಂಗ್, ನೂರುಲ್ಲಾ ಶಿರಹಟ್ಟಿ, ಸುಲೇಮಾನ ಹುಯಿಲಗೋಳ, ಮಾರುತಿ ಜಾಧವ, ಸಂಜು ರಾಯ್ಕರ ಪಾಲ್ಗೊಂಡಿದ್ದರು.