ಕಾತರಕಿ ಕಾಂಗ್ರೆಸ್‌ನವರಲ್ಲ: ಕೊಳ್ಳಿ
ನರಗುಂದ: ಬಹು ದಿನಗಳಿಂದ ಕಾಂಗ್ರೆಸ್ ಪಕ್ಷವನ್ನು ಬೇರು ಮಟ್ಟದಿಂದ ಕಟ್ಟಿ ಬೆಳೆಸಿದವರು ಮಾಜಿ ಸಚಿವ ಬಿ.ಆರ್. ಯಾವಗಲ್. ಆದರೆ ಈ ಚುನಾವಣೆಯಲ್ಲಿ ಎಸ್.ಎನ್. ಕಾತರಕಿ ಕಾಂಗ್ರೆಸ್ ಮುಖಂಡರೆಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ ಅವರು ಕಾಂಗ್ರೆಸ್‌ನವರಲ್ಲ ಎಂದು ಕೆಪಿಸಿಸಿ ಸದಸ್ಯ ಎಸ್.ಡಿ. ಕೊಳ್ಳಿ ಹೇಳಿದರು. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೊಳ್ಳಿ, ಈ ಹಿಂದೆ 1985ರಲ್ಲಿ ನರಗುಂದ ವಿಧಾನಸಭಾ ಮತಕ್ಷೇತದಲ್ಲಿ ಸ್ಪರ್ಧಿಸಿ ಸೋತಿದ್ದಾಗಿ ಹೇಳುವ ಕಾತರಕಿ ಮುಂದಿನ 25 ವರ್ಷ ಎಲ್ಲಿ ಮಾಯವಾಗಿದ್ದರು? ಈ ಬಾರಿ ಯಾವಗಲ್ ಗೆಲುವಿಗೆ ಅಡ್ಡಿಯಾಗುವ ಜನರನ್ನು ಕ್ಷೇತ್ರದ ಜನತೆ ಸಹಿಸುವುದಿಲ್ಲ ಎಂದರು. ನಗರ ಕಾಂಗ್ರೆಸ್ ಅಧ್ಯಕ್ಷ ಚಂಬಣ್ಣ ವಾಳದ, ಗುರುಪಾದಪ್ಪ ಕುರಹಟ್ಟಿ, ಪ್ರಕಾಶ ಭೂಮಣ್ಣವರ, ಎಸ್.ಆರ್. ಪಾಟೀಲ ಇದ್ದರು.