ಪ್ರೇಮಿಗಳ ದಿನದಂದು ರಕ್ತದಾನ
ಗದಗ: ಸಂಕಷ್ಟ ಸಮಯದಲ್ಲಿ ಜೀವ ಉಳಿಸಲು ಅಗತ್ಯವಾದ ರಕ್ತವನ್ನು ದಾನ ಮಾಡುವುದರ ಮೂಲಕ ನಗರದಲ್ಲಿ ಗುರುವಾರ ಪ್ರೇಮಿಗಳ ದಿನವನ್ನು ವಿನೂತನವಾಗಿ ಆಚರಿಸಲಾಯಿತು. ನಗರದ ಜಂಡಾ ವೃತ್ತದಲ್ಲಿರುವ ಬ್ಲಡ್ ಬ್ಯಾಂಕಿನಲ್ಲಿ ಗೆಳೆಯರ ಬಳಗ ಸಂಘದ 20ಕ್ಕೂ ಹೆಚ್ಚು ಸದಸ್ಯರು ರಕ್ತದಾನ ಮಾಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡಿದ್ದಾರೆ. ಪ್ರೇಮಿಗಳ ದಿನದಂದೇ ಈ ಕೆಲಸ ಮಾಡಿರುವುದು ನೆನಪಿನಲ್ಲಿ ಉಳಿಯುತ್ತದೆ. ಈ ದಿನವನ್ನು ಸ್ಮರಣೀಯವಾಗಿಸಿ ವಿನೂತನವಾಗಿ ಆಚರಣೆ ಮಾಡಬೇಕೆನ್ನುವ ನಮ್ಮ ಉದ್ದೇಶ ಈಡೇರಿದೆ ಎಂದು ಸಂಘದ ಸದಸ್ಯರು ಹೇಳಿದರು.