ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಹಾಲು ಉತ್ಪಾದಕರಿಗೆ ಹೆಚ್ಚಿನ ತರಬೇತಿ ಅಗತ್ಯ

Parashurama
Updated On : 15 Feb 2013, 12:14 pm

ಕನ್ನಡಪ್ರಭ ವಾರ್ತೆ, ರೋಣ, ಫೆ.14
ರಾಜ್ಯದ ರೈತರು ಕೃಷಿ ಚುಟವಟಿಕೆಯಲ್ಲಿ ಹೆಚ್ಚಿನ ಆದಾಯ ಕಾಣದೇ ಇಂದು ಆರ್ಥಿಕವಾಗಿ ಹಿಂದುಳಿದಳಿದಿದ್ದಾರೆ. ಆದ್ದರಿಂದ ಕೃಷಿ ಜತೆಗೆ ಉಪ ಕಸುಬುಗಳನ್ನು ಅಳವಡಿಸಿಕೊಳ್ಳುವುದು ಅವಶ್ಯವಾಗಿದೆ ಎಂದು ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ನೀಲಕಂಠ ಅಸೂಟಿ ಹೇಳಿದರು.
ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಯೂನಿಯನ್, ಸಹಕಾರಿ ಇಲಾಖೆ ಗದಗ ಹಾಗೂ ಧಾರವಾಡ ಹಾಲು ಒಕ್ಕೂಟದ ಆಶ್ರಯದಲ್ಲಿ ಏರ್ಪಡಿಸಿದ್ದ ರೋಣ ಹಾಗೂ ನರಗುಂದ ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರ ಹಾಗೂ ಕಾರ್ಯದರ್ಶಿಗಳ 1 ದಿನದ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು. ರಾಜ್ಯದ ರೈತರು ಬೆಳೆದ ಬೆಳೆಗಳಿಗೆ ಇಂದು ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗದೇ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದಾನೆ. ರೈತನು ಆರ್ಥಿಕವಾಗಿ ಸದೃಢಗೊಳ್ಳಬೇಕಾದರೆ ಅವರು ಕೃಷಿ ಜತೆಗೆ ಹಾಲು ಉತ್ಪಾದನೆಯಂತಹ ಉಪ ಕಸುಬುಗಳನ್ನು ಕೈಕೊಳ್ಳುವುದು ಅವಶ್ಯಕ.
ಕೃಷಿಯಲ್ಲಿ ಉತ್ಪಾದನೆಗಿಂತ ವೆಚ್ಚ ಹೆಚ್ಚಗಾಗಿದ್ದು, ಇದನ್ನು ಹೊಗಲಾಡಿಸಲು ಹಾಲಿನ ಉತ್ಪಾದನೆಯ ಕಸುಬು ಲಾಭದಾಯಕವಾಗಿದೆ. ಆದ್ದರಿಂದ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ರಾಜ್ಯದ ರೈತರು ಹಾಲಿನ ಉತ್ಪಾದನೆಯಲ್ಲಿ ತೊಡಗಿಕೊಳ್ಳುವಂತೆ ತಿಳಿಸಿದರು.
ಸಹಕಾರಿ ರಂಗ ಹೆಚ್ಚು ಹೆಚ್ಚು ವಿಸ್ತಾರಗೊಳ್ಳುತ್ತಿದ್ದಂತೆ ಅದಕ್ಕೆ ಅನೇಕ ತಿದ್ದುಪಡಿಗಳ ಅವಶ್ಯಕತೆ ಇದೆ. ಇಂತಹ ತಿದ್ದುಪಡಿಗಳಿಂದ ರೈತರಿಗೆ ಹೆಚ್ಚು ಅನುಕೂಲವಾಗಲಿದೆ. ಸಹಕಾರಿ ಸಂಘಗಳಲ್ಲಿ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳಿಗೆ ಹೆಚ್ಚಿನ ಹೊಣೆಗಾರಿಕೆ ಇರುತ್ತದೆ. ಸಹಕಾರಿ ಸಂಘದಲ್ಲಿನ ಅಭಿವೃದ್ಧಿ ಕೆಲಸಗಳನ್ನು ಕೈಕೊಂಡ ಬಗ್ಗೆ ಷೇರುದಾರರಿಗೆ ಮಾಹಿತಿ ನೀಡುವುದು ಅವಶ್ಯ ಎಂದರು. ತರಬೇತಿ ಶಿಬಿರದಲ್ಲಿ ಜಿಲ್ಲಾ ಸಹಕಾರಿ ಯುನಿಯನ್‌ನ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ, ಸಹಕಾರಿ ಸಂಘಗಳ ಜಿಲ್ಲಾ ಸಹಾಯಕ ನಿಬಂಧಕ ಎಂ.ಸಿ. ಉಪ್ಪಿನ ಮಾತನಾಡಿದರು.
ಈ ಸಂದರ್ಭ ಎ.ಎಂ. ಹುಡೇದ, ಜಬ್ಬಾರ್‌ಬೇಗ, ಎಂ.ಬಿ. ಮಡಿವಾಳರ, ಎಸ್.ಸಿ. ಹಳ್ಳಿ, ಡಿ.ಎಸ್. ಆಶಿ, ಎಚ್.ವಿ. ನಾಗೋಲಿ, ಸಿ.ಎಂ. ಮಾಕಾಪುರ ಉಪಸ್ಥಿತರಿದ್ದರು. ತರಬೇತಿ ಶಿಬಿರದಲ್ಲಿ ನರಗುಂದ ಹಾಗೂ ರೋಣ ತಾಲೂಕಿನ ಎಲ್ಲ ಸಹಕಾರ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು, ಇನ್ನಿತರರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement