ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಗಜೇಂದ್ರಗಡಕ್ಕೆ ಮೂಲ ಸೌಲಭ್ಯ ನೀಡಿ

Mainashree
Updated On : 16 Feb 2013, 10:33 am

ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಫೆ. 15
ಸರ್ಕಾರ ಕಾಟಾಚಾರಕ್ಕೆಂಬಂತೆ ಗಜೇಂದ್ರಗಡ ತಾಲೂಕು ಎಂದು ಘೋಷಣೆ ಮಾಡಿ ಕೈತೊಳೆದುಕೊಂಡರೆ ಸಾಲದು, ಮೂಲ ಸೌಲಭ್ಯ ಒದಗಿಸದಿದ್ದರೆ ಬೀದಿಗಿಳಿದು ಪ್ರತಿಭಟನೆಗೆ ಮುಂದಾಬೇಕಾಗುತ್ತದೆ ಎಂದು ಗಜೇಂದ್ರಗಡ ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ವೀರಣ್ಣ ಸೊನ್ನದ ಹೇಳಿದರು.
ಅವರು ಈಚೆಗೆ ಸ್ಥಳೀಯ ದುರ್ಗಾ ವೃತ್ತದಲ್ಲಿ ಗಜೇಂದ್ರಗಡ ತಾಲೂಕು ಹೋರಾಟ ಸಮಿತಿ ವತಿಯಿಂದ ಗಜೇಂದ್ರಗಡ ತಾಲೂಕು ಘೋಷಣೆಯ ನಿಮಿತ್ತ ನಡೆದ ವಿಜಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜನಸಾಂದ್ರತೆ ಮತ್ತು ಭೌಗೋಳಿಕವಾಗಿ ಎಲ್ಲ ಅರ್ಹತೆ ಹೊಂದಿರುವ ಗಜೇಂದ್ರಗಡ ಪಟ್ಟಣವನ್ನು ತಾಲೂಕು ಕೇಂದ್ರವಾಗಿ ಘೋಷಣೆ ಮಾಡಬೇಕೆಂದು ಹೋರಾಟ ಸಮಿತಿ ನಿರಂತರ ಹೋರಾಟ ಮಾಡುವುದರ ಜತೆಗೆ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಸದಾನಂದಗೌಡ ಈಗಿನ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರನ್ನು ಖುದ್ದಾಗಿ ಭೇಟಿ ಮಾಡಿ, ಮನವಿ ಸಲ್ಲಿಸಿದ್ದ ಕುರಿತು ಹೇಳಿದರು.
ಸರ್ಕಾರವು ಗಜೇಂದ್ರಗಡ ತಾಲೂಕು ಕೇಂದ್ರ ಘೋಷಣೆ ಮಾಡಿದ್ದಕ್ಕೆ ಮುಖ್ಯಮಂತ್ರಿಗಳಿಗೆ ಹಾಗೂ ಸಚಿವ ಕಳಕಪ್ಪ ಬಂಡಿಯವರಿಗೂ ಹೋರಾಟ ಸಮಿತಿ ಪರವಾಗಿ ಅಭಿನಂದಿಸಿದ ಅವರು, ಸರ್ಕಾರ ತಾಲೂಕು ಘೋಷಣೆ ಜತೆಗೆ ರು. 2 ಕೋಟಿ ಹಣ ಬಿಡುಗಡೆ ಮಾಡುವುದಾಗಿ ಹೇಳಿದೆ. ಆದರೆ, ಇದರಿಂದ ಮೂಲ ಸೌಲಭ್ಯ ಒದಗಿಸಲು ಅಸಾಧ್ಯವಾಗಿದ್ದು, ಕೂಡಲೆ ರು. 10 ಕೋಟಿ ಹಣ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು. ಎಂ.ಎಸ್. ಹಡಪದ, ಎಚ್.ಎಸ್. ಸೋಂಪುರ, ರವಿ ಗಡೇದವರ, ರವಿ ದಂಡಿನ, ಬಸವರಾಜ ಮತ್ತಿಕಟ್ಟಿ, ಮಾತನಾಡಿದರು. ಬಳಿಕ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ವೆಂಕುಸಾ ಭಾಂಡಗೆ, ಬಾಳಪ್ಪ ಪವಾರ, ನಿಂಗಪ್ಪ ರೇವಡಿ, ಬಿ.ಕೆ. ವದೇಗೊಳ, ಷಣ್ಮುಕಪ್ಪ ನಿಡಗುಂದಿ, ಕೆಜೆಪಿ ಮುಖಂಡ ಶರಣಬಸವ ಮೆಣಸಿನಕಾಯಿ, ಎಸ್.ಎಂ. ಆರಗಿದ್ದಿ, ಮುರ್ತುಜಾ ಡಾಲಾಯತ್, ಕೊಟ್ರೇಶ ಚಿಲಕಾ, ಶಶಿಧರ ಹೂಗಾರ, ಮಾರುತಿ ಕಲ್ಲೋಡ್ಡರ ಬಿ.ಎಸ್. ಶೀಲವಂತರ ಬಾಲು ರಾಠೋಡ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement