ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಮಠಗಳಿಗೆ ಅನುದಾನ: ದುರುದ್ದೇಶವಿಲ್ಲ

Mainashree
Updated On : 20 Feb 2013, 11:08 am

ಲಕ್ಷ್ಮೇಶ್ವರ: ಸರ್ಕಾರವು ಮಠ ಮಾನ್ಯಗಳಿಗೆ ಹಣ ನೀಡುತ್ತಿರುವುದರ ಹಿಂದೆ ಯಾವುದೇ ರಾಜಕೀಯ ದುರುದ್ದೇಶವಿಲ್ಲ. ಮಠ ಮಂದಿರಗಳಿಗೆ ನೀಡುವ ಹಣವು ಬಡ ಮಕ್ಕಳ ಅನ್ನ ಮತ್ತು ಶಿಕ್ಷಣಕ್ಕೆ ವಿನಿಯೋಗವಾಗುತ್ತಿದೆ ಎಂದು ಶಾಸಕ ರಾಮಣ್ಣ ಲಮಾಣಿ ಅಭಿಪ್ರಾಯಪಟ್ಟರು.
ಸಮೀಪದ ಮುಕ್ತಿಮಂದಿರ ಧರ್ಮ ಕ್ಷೇತ್ರದಿಂದ ಲಕ್ಷ್ಮೇಶ್ವರದವರೆಗೆ ಹಾಗೂ ಮುಕ್ತಿಮಂದಿರ ಕ್ಷೇತ್ರದಿಂದ ಗುಲಗಂಜಿಕೊಪ್ಪದ ರಸ್ತೆ ಡಾಂಬರೀಕರಣ ಕಾಮಗಾರಿಗೆ ಸೋಮವಾರ ಬೆಳಗ್ಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ರಾಜ್ಯ ಸರ್ಕಾರವು ಗ್ರಾಮಾಂತರ ಪ್ರದೇಶಗಳ ಜನರಿಗೆ ಅನುಕೂಲವಾಗುವಂತಹ ರಸ್ತೆಗಳನ್ನು ಅಭಿವೃದ್ಧಿ ಪಡಿಸುವಲ್ಲಿ ಸಾಕಷ್ಟು ಕಾರ್ಯಗಳನ್ನು ಮಾಡಿದೆ. ಮುಕ್ತಿಮಂದಿರ ಕ್ಷೇತ್ರಕ್ಕೆ ಬಂದು ಹೋಗುವ ಜನರಿಗೆ ಹಾಗೂ ಕುಂದಗೋಳ ತಾಲೂಕಿನ ಹಲವು ಹಳ್ಳಿಗಳಿಗೆ ಈ ರಸ್ತೆ ನಿರ್ಮಾಣದಿಂದ ಇನ್ನೂ ಹೆಚ್ಚಿನ ಅನುಕೂಲವಾಗುವುದು ಎಂದು ಹೇಳಿದರು. ಮುಕ್ತಿಮಂದಿರದ ವಿಮಲರೇಣುಕ ವೀರ ಮುಕ್ತಿಮುನಿ ಶ್ರೀಗಳು ಮಾತನಾಡಿ, ಧರ್ಮಕ್ಷೇತ್ರಗಳನ್ನು ಅಭಿವೃದ್ಧಿ ಪಡಿಸಿದರೆ ನಮ್ಮ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಕಾರ್ಯ ಮಾಡಿದಂತೆ ಎಂದು ಹೇಳಿದರು.  ಈ ಸಂದರ್ಭದಲ್ಲಿ ಸೋಮಣ್ಣ ಮುಳಗುಂದ, ಚೆಂಬಣ್ಣ ಬಾಳಿಕಾಯಿ, ನಿಂಗಪ್ಪ ಬನ್ನಿ, ನಾಗರಾಜ ಚಿಂಚಲಿ, ಸತೀಶ ಮೆಕ್ಕಿ, ಜಗದೀಶ ಪುರಾಣಿಕಮಠ, ಚಾಯಪ್ಪ ಬಸಾಪೂರ, ಸಿದ್ದಣ್ಣ ಬೊಳ್ಳೊಳ್ಳಿ, ನೀಲಪ್ಪ ಅತ್ತಿಗೇರಿ, ರಾಮಣ್ಣ ರಿತ್ತಿ ಮುಂತಾದವರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement