ಉಚಿತ ತರಬೇತಿಗಳು
ಗದಗ: ಡಾ. ಎಸ್‌ವಿಟಿ ಗ್ರಾಮೀಣಾಭಿವೃದ್ಧಿ ಮತ್ತು ಶಿಕ್ಷಣ ಸಂಸ್ಥೆಯ ವೃತ್ತಿ ಶಿಕ್ಷಣ ತರಬೇತಿ ಕೇಂದ್ರ ಗದಗನಲ್ಲಿ ಕೇಂದ್ರ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಇಲಾಖೆಯ ಡಿಜಿಇಟಿಯಿಂದ ಮಾನ್ಯತೆ ಪಡೆದ ಎಂಇಎಸ್ ಕೋರ್ಸಗಳಾದ ಕಂಪ್ಯೂಟರ್ ಡಿಟಿಪಿ, ಟ್ಯಾಲಿ, ಹಾರ್ಡ್‌ವೇರ್ ಮತ್ತು ನೆಟ್‌ವರ್ಕಿಂಗ್, ಸ್ಫೋಕನ್ ಇಂಗ್ಲಿಷ್, ಬ್ಯಾಂಕಿಂಗ್ ಮತ್ತು ಅಕೌಂಟಿಂಗ್, ಡಿಜಿಟಲ್ ಫೋಟೋಗ್ರಫಿ ಮತ್ತು ವಿಡಿಯೋಗ್ರಫಿ, ಮೊಬೈಲ್ ರಿಪೇರಿ, ಟೇಲರಿಂಗ್ ಇನ್ನಿತರ ಉಚಿತ ತರಬೇತಿಗಳನ್ನು ಮಾರ್ಚ್ 1ರಿಂದ ಪ್ರಾರಂಭಿಸಲಾಗುವುದು. ತರಬೇತಿ ನಂತರ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಕೇಂದ್ರ ಸರ್ಕಾರದ ರಾಷ್ಟ್ರೀಯ ವೃತ್ತಿ ಶಿಕ್ಷಣ ಮಂಡಳಿ(ಎನ್‌ಸಿವಿಟಿ)ಯಿಂದ ರಾಷ್ಟ್ರೀಯ ಪ್ರಮಾಣ ಪತ್ರ ನೀಡಲಾಗುವುದು. ಫೆ. 26 ರೊಳಗಾಗಿ ಸಂಸ್ಥೆಯ ಕೇಂದ್ರ ಕಚೇರಿ ಎಸ್‌ವಿಟಿ ಫೌಂಡೇಶನ್ ಮಳಿಗೆ ಸಂಖ್ಯೆ-7, ಕುಮಾರವ್ಯಾಸ ಸಂಕೀರ್ಣ, ಜಿಲ್ಲಾ ಆಸ್ಪತ್ರೆ ಎದುರಿಗೆ ಖುದ್ದಾಗಿ ಬಂದು ಪ್ರವೇಶ ಪಡೆಯಬೇಕು. ಮಾಹಿತಿಗಾಗಿ ಸಂಸ್ಥೆ ಕಾರ್ಯದರ್ಶಿ ಡಾ. ಸಂತೋಷ ತೋಟಗಂಟಿಮಠ- 9448729748, 9916267077, ಸಂಯೋಜಕ ಸಂಜಯ ಹುಣಶೀಮರದ- 9480619808 ಸಂಪರ್ಕಿಸಬಹುದು.
ಉಚಿತ ಶಿಬಿರ
ಗದಗ: ನಗರದ ಮಸಾರಿಯ ವಿವೇಕಾನಂದ ರಸ್ತೆಯಲ್ಲಿರುವ ವಾತ್ಸಲ್ಯ ಆಸ್ಪತ್ರೆಯಲ್ಲಿ ಫೆ. 18ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 1.30ರ ವರೆಗೆ ಉಚಿತ ಶ್ವಾಸಕೋಶ ಪರೀಕ್ಷಾ ಶಿಬಿರ ಹಮ್ಮಿಕೊಳ್ಳಲಾಗಿದೆ. ಮಾಹಿತಿಗಾಗಿ ವಾತ್ಸಲ್ಯ ಆಸ್ಪತ್ರೆ, ವಿವೇಕಾನಂದ ರಸ್ತೆ, 4ನೇ ಕ್ರಾಸ್, ಮಸಾರಿ, ಗದಗ-582101, ದೂ- 08372-252399, ಮೊ-9611118474 ಸಂಪರ್ಕಿಸಬಹುದು.