ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಯುವಕರು ಬಯಲಾಟ ಕಲೆ ಬೆಳೆಸಿ: ಸಾಮಗ

Lingaraj Badiger
Updated On : 22 Feb 2013, 12:40 pm

ಕನ್ನಡಪ್ರಭ ವಾರ್ತೆ, ಗದಗ, ಫೆ. 21
ನಶಿಸಿ ಹೋಗುತ್ತಿರುವ ಬಯಲಾಟ ಕಲೆಯನ್ನು ಇಂದಿನ ಯುವಕರು ಬೆಳೆಸಿಕೊಂಡು ಹೋಗುವ ಅಗತ್ಯತೆ ಇದೆ ಎಂದು ಕರ್ನಾಟಕ ಯಕ್ಷಗಾನ ಅಕಾಡಮಿ ಅಧ್ಯಕ್ಷ ಪ್ರೊ. ಎಂ.ಎಲ್. ಸಾಮಗ ಹೇಳಿದರು.
ಈಚೆಗೆ ಅವರು ಆದರ್ಶ ಶಿಕ್ಷಣ ಸಮಿತಿಯ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಬೆಂಗಳೂರು ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಬಯಲಾಟ ಉತ್ಸವ-2013 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಬಯಲಾಟದ ಕಲೆಯನ್ನು ಅಭ್ಯಶಿಸಬೇಕು. ಜನಪದ ಕಲೆಗಳಿಂದ ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರ ಉಳಿಯಲು ಸಹಾಯಕವಾಗುತ್ತದೆ. ಹಾಗೆಯೇ ಹಿಂದಿನ ಹಿರಿಯರು ಬೆಳೆಸಿದ ಕಲೆಯನ್ನು ಉಳಿಸಿದಂತಾಗುತ್ತದೆ. ದೊಡ್ಡಾಟ, ಸಣ್ಣಾಟಕ್ಕೆ ಅಕಾಡೆಮಿಯಿಂದ ಒಳ್ಳೆಯ ಅವಕಾಶ ನೀಡುವುದಾಗಿ ಹೇಳಿದರು. ಡಾ. ಎಸ್.ಎಫ್. ಜಕಬಾಳ, ಬಿ.ಬಿ.ಬಣ್ಣದ, ಜಾನಪದ ಕಲಾ ಮೇಳದ ಅಧ್ಯಕ್ಷ ಅಶೋಕ ಬಣ್ಣದ, ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಶಿವಪ್ಪ ಕುರಿ ಮಾತನಾಡಿದರು.
ಸಂಸ್ಥೆಯ ಅಧ್ಯಕ್ಷ ವಿ.ಆರ್. ಕುಷ್ಟಗಿ, ಉಪಾಧ್ಯಕ್ಷ ವಿ.ಆರ್. ಮಾಳೆಕೊಪ್ಪಮಠ, ಪ್ರಾಚಾರ್ಯ ಮಲಕಾಜಪ್ಪ ತರ್ಲಕಟ್ಟಿಯವರಿಂದ ನಿಜಗುಣ ಶಿವಯೋಗಿ ಸಣ್ಣಾಟ, ಅಶೋಕ ಸುತಾರ ಹಾಗೂ ಸಂಗಡಿಗರಿಂದ ರತಿಕಲ್ಯಾಣ ದೊಡ್ಡಾಟ, ಮಲ್ಲಿಕಾರ್ಜುನ ಕಾಳೆ ಅವರಿಂದ ದಪ್ಪಿನಾಟ ಕಲಾ ಪ್ರದರ್ಶನವಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement