ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ವಿಶ್ವಕರ್ಮರು ರಾಜಕೀಯ ಪ್ರಜ್ಞೆ ಬೆಳೆಸಿಕೊಳ್ಳಬೇಕು

Lingaraj Badiger
Updated On : 22 Feb 2013, 12:40 pm

ಕನ್ನಡಪ್ರಭ ವಾರ್ತೆ, ರೋಣ, ಫೆ. 21
ಸರ್ಕಾರದ ವಿವಿಧ ಸೌಲತ್ತುಗಳನ್ನು ಸಮರ್ಪಕವಾಗಿ ಪಡೆಯಬೇಕಾದಲ್ಲಿ ಕೇವಲ ಕಾರ್ಯಕ್ರಮ ಮಾಡಿದರೆ ಸಾಲದು. ವಿಶ್ವಕರ್ಮದವರು ನಿರಂತರ ಹೋರಾಟದೊಂದಿಗೆ ರಾಜಕೀಯ ಪ್ರಜ್ಞೆ ಬೆಳೆಸಿಕೊಳ್ಳುವದು ಅತ್ಯಗತ್ಯವಾಗಿದೆ ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ರಾಜ್ಯಾಧ್ಯಕ್ಷ ಕೆ.ಪಿ. ನಂಜುಂಡಿ ಹೇಳಿದರು.
ಅವರು ಭಾನುವಾರ ಸಂಜೆ ಪಟ್ಟಣದಲ್ಲಿ ರೋಣ ತಾಲೂಕು ವಿಶ್ವಕರ್ಮ ಸಮಾಜ ಮತ್ತು ಕಾಳಿಕಾದೇವಿ ದೇವಸ್ಥಾನ ಸುಧಾರಣಾ ಸಮಿತಿಗಳ ಆಶ್ರಯದಲ್ಲಿ ರೋಣ ತಾಲೂಕು ವಿಶ್ವಕರ್ಮ ಸಮಾಜ ಸಂಘಟನಾ ಕಾರ್ಯಕ್ರಮ ಹಾಗೂ ಜಗನ್ಮಾತೆ ಕಾಳಿಕಾದೇವಿ ದೇವಸ್ಥಾನದ 6ನೇ ವಾರ್ಷಿಕೋತ್ಸವ ಆಚರಣೆ ಅಂಗವಾಗಿ ಜರುಗಿದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಂಪಿ ಉತ್ಸವ ಶಿಲ್ಪಿಗಳ ಉತ್ಸವವಾಗಲಿ:  ಕರ್ನಾಟಕದ ಜಾಗತಿಕ ಪರಂಪರೆಯಲ್ಲಿ ಹೆಸರು ಹೊಂದಲು ಹಂಪಿಯಲ್ಲಿನ ಕಲಾ ಕೃತಿಗಳ ವಿಶ್ವ ಕೆತ್ತನೆ, ಕಲಾ ವೈಭವ ಕಾರಣವಾಗಿದೆ. ಆ ಕಲಾ ವೈಭವ ಅರಳಲು ಕಾರಣಿಕರ್ತರಾದ ಕಲಾ ಶಿಲ್ಪಿಗಳನ್ನು ಪ್ರತಿ ವರ್ಷ ಆಚರಣೆ ಮಾಡುತ್ತಿರುವ ಹಂಪಿ ಉತ್ಸವದಲ್ಲಿ ಮರೆಯುತ್ತಿದ್ದಾರೆ. ಇನ್ನು ಅದು ಹಂಪಿ ಉತ್ಸವವಾಗದೇ ಶಿಲ್ಪಿಗಳ ಉತ್ಸವಾಗಿ ಆಚರಣೆಯಾಗಬೇಕು. ಆ ದಿಶೆಯಲ್ಲಿ ಅಲ್ಲಿನ ಜಿಲ್ಲಾಡಳಿತ ಮತ್ತು ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದು ಆಗ್ರಹಿಸಿದರು.
ಸರ್ಕಾರಕ್ಕೆ ನಾನೇ ಕೊಡುವೆ 5 ಕೋಟಿ: ಸರ್ಕಾರ ಬಜೆಟ್‌ನಲ್ಲಿ ವಿಶ್ವಕರ್ಮ ಸಮಾಜಕ್ಕೆ ರು. 1 ಕೋಟಿ ನೀಡಿದೆ. ರಾಜ್ಯದಲ್ಲಿ 35 ಲಕ್ಷ ಜನಸಂಖ್ಯೆಯನ್ನು ಹೊಂದಿದ ವಿಶ್ವಕರ್ಮ ಸಮಾಜವನ್ನು ಸರ್ಕಾರ ಈ ರೀತಿಯಾಗಿ ಕಣ್ಣೊರೆಸುವ ತಂತ್ರವನ್ನು ಮಾಡಬಾರದು. ಬೇಕಿದ್ದರೆ ಸರ್ಕಾರಕ್ಕೆ ನಾನೇ ನನ್ನ ಸ್ವಂತ ಹಣದಲ್ಲಿ ರು. 5 ಕೋಟಿ ಕೊಡುತ್ತೇನೆ. ದಯವಿಟ್ಟು ನ್ಯಾಯ ಸಮ್ಮತವಾದ ವಿಶ್ವಕರ್ಮರ ಬೇಡಿಕೆಯನ್ನು ಈಡೇರಿಸಿ ಸಮಾಜದ ಮುಖ್ಯವಾಹಿನಿಗೆ ವಿಶ್ವಕರ್ಮರನ್ನು ತನ್ನಿ, ಇಲ್ಲದಿದ್ದಲ್ಲಿ ಮುಂಬರುವ ದಿನಗಳಲ್ಲಿ ಗಂಭೀರತೆಯನ್ನು ಸರ್ಕಾರ ಎದುರಿಸಬೇಕಾಗುತ್ತದೆ ಎಂದು ಸವಾಲು ಹಾಕಿದರು.
ಮಾಜಿ ಶಾಸಕ ಜಿ.ಎಸ್.ಪಾಟೀಲ್, ಗುಲಗಂಜಿ ಮಠದ ಗುರುಪಾದ ಶ್ರೀಗಳು ಮಾತನಾಡಿದರು. ಜಗನ್ನಾತ ಶ್ರೀಗಳು, ಮುತ್ತಪ್ಪಜ್ಜನವರು, ಮೌನ ಚಿದಾನಂದ ಶ್ರೀಗಳು, ಅಪ್ಪಯ್ಯ ಮೌನೇಶ್ವರ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಅಧ್ಯಕ್ಷತೆಯನ್ನು ತಾಲೂಕು ವಿಶ್ವಕರ್ಮ ಸಮಾಜದ ಅಧ್ಯಕ್ಷ ಎಂ.ಯು. ಕಂಚಗಾರ ವಹಿಸಿದ್ದರು. ಡಾ. ಪ್ರಶಾಂತ ಪಾಟೀಲ, ವಿಶ್ವನಾಥ ಜಿಡ್ಡಿಬಾಗಿಲ, ಮಿಥುನ್ ಪಾಟೀಲ, ಅಶೋಕ ನವಲಗುಂದ, ಶಿವಣ್ಣ ಪಲ್ಲೇದ, ಶಿವಾನಂದ ಜವಳಿ, ಡಾ. ಎಸ್.ಜಿ. ನವಣಿ, ಬಸವರಾಜ ನವಲಗುಂದ, ವೀರಭದ್ರಪ್ಪ ಬಡಿಗೇರ, ಕಾಳಮ್ಮ ಬಡಿಗೇರ, ನಾರಾಯಣಪ್ಪ ಪತ್ತಾರ, ನಾರಾಯಣಾಚಾರ್ಯ ವಿಶ್ವಕರ್ಮ ಮುಂತಾದವರು ಉಪಸ್ಥಿತರಿದ್ದರು. ಕಾಳೇಶ ಪೋತದಾರ ಸ್ವಾಗತಿಸಿದರು. ನಟರಾಜ ಸೋನಾರ ನಿರೂಪಿಸಿದರು. ವಿ.ಡಿ.ಪವಾಸ್ಕರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement