ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

203 ವಾರ್ಡ್‌ಗೆ 1011 ನಾಮಪತ್ರ

Mainashree
Updated On : 24 Feb 2013, 11:29 am

ಗದಗ: ಸ್ಥಳೀಯ ಸಂಸ್ಥೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ಕಾರ್ಯ ಮುಗಿದಿದ್ದು, ಜಿಲ್ಲೆಯ 5 ಪುರಸಭೆ, 3 ಪಟ್ಟಣ ಪಂಚಾಯ್ತಿ ಹಾಗೂ 1 ನಗರಸಭೆಯ ಒಟ್ಟು 203 ವಾರ್ಡ್‌ಗಳಿಗೆ 1011 ನಾಮಪತ್ರಗಳು ಸಲ್ಲಿಕೆಯಾಗಿವೆ.
ಗದಗ-ಬೆಟಗೇರಿ ನಗರಸಭೆಯ 35 ವಾರ್ಡ್‌ಗಳಿಗೆ 242 ಅಭ್ಯರ್ಥಿಗಳಿಂದ 284 ನಾಮಪತ್ರಗಳು ಸಲ್ಲಿಕೆಯಾಗಿವೆ.ಕಾಂಗ್ರೆಸ್, ಬಿಜೆಪಿ ಹಾಗೂ ಬಿಎಸ್ಸಾರ್ ತಲಾ 35, ಕೆಜೆಪಿ 28 ಹಾಗೂ ಜೆಡಿಎಸ್‌ನಿಂದ 27 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಪಕ್ಷೇತರರು 149 ನಾಮಪತ್ರ ಸಲ್ಲಿಸಿದ್ದಾರೆ.
ಶಿರಹಟ್ಟಿ ಪಟ್ಟಣ ಪಂಚಾಯತ್‌ನ 17 ವಾರ್ಡ್‌ಗಳಿಗೆ 102 ನಾಮಪತ್ರ ಸಲ್ಲಿಕೆಯಾದವು. ಬಿಜೆಪಿ, ಜೆಡಿಎಸ್, ಕಾಂಗ್ರೆಸ್, ಬಿಎಸ್‌ಆರ್, ಕೆಜೆಪಿ ಬಹುತೇಕ ಸ್ಥಾನಗಳಿಗೆ ಸ್ಪರ್ಧಿಸಿವೆ.
ಗಜೇಂದ್ರಗಡ ಪುರಸಭೆಗೆ ಬಿಜೆಪಿ, ಕಾಂಗ್ರೆಸ್ ತಲಾ 23, ಜೆಡಿಎಸ್-8, ಕೆಜೆಪಿ-6, ಸಿಪಿಐಎಂ-8 ಬಿಎಸ್‌ಆರ್ 10 ಹಾಗೂ ಪಕ್ಷೇತರ- 4 ಸೇರಿ ಒಟ್ಟು 82 ನಾಮಪತ್ರಗಳು ಸಲ್ಲಿಕೆಯಾದವು.
ಲಕ್ಷ್ಮೇಶ್ವರ ಪುರಸಭೆಯ 23 ವಾರ್ಡ್‌ಗಳಿಗೆ ಒಟ್ಟು 103 ನಾಮಪತ್ರ ಸಲ್ಲಿಸಲಾಗಿದೆ. ಚತುಷ್ಕೋನ ಸ್ಪರ್ಧೆ ಸಾಧ್ಯತೆ ದಟ್ಟವಾಗಿದೆ. 2ನೇ ವಾರ್ಡಿನಲ್ಲಿ ಒಂದೇ ನಾಮಪತ್ರ ಸಲ್ಲಿಕೆಯಾಗಿದ್ದು, ಅವಿರೋಧ ಆಯ್ಕೆ ಲಕ್ಷಣ ಗೋಚರಿಸಿದೆ.
ರೋಣ ಪುರಸಭೆಯ 23 ವಾರ್ಡ್‌ಗಳಿಗೆ 79 ನಾಮಪತ್ರ ಸಲ್ಲಿಕೆಯಾಗಿವೆ. ಶನಿವಾರ 36 ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದರು. ಪಕ್ಷವಾರು ವಿವರ ಲಭ್ಯವಾಗಿಲ್ಲ.
ಮುಂಡರಗಿ ಪುರಸಭೆಯ 23 ವಾರ್ಡ್‌ಗಳಿಗೆ ಒಟ್ಟು 123 ನಾಮಪತ್ರ ಸಲ್ಲಿಕೆಯಾಗಿವೆ. ಬಿಜೆಪಿ 28, ಕಾಂಗ್ರೆಸ್ 25, ಜೆಡಿಎಸ್ 27, ಕೆಜೆಪಿ 12, ಬಿಎಸ್ಸಾರ್ ಕಾಂಗ್ರೆಸ್ 20 ಹಾಗೂ ಪಕ್ಷೇತರರು 11 ನಾಮಪತ್ರ ಸಲ್ಲಿಸಿದ್ದಾರೆ.
ನರೇಗಲ್ಲ ಪಟ್ಟಣ ಪಂಚಾಯತಿಯ 17 ವಾರ್ಡ್‌ಗಳಲ್ಲಿ 69 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಕಾಂಗ್ರೆಸ್-17, ಬಿಜೆಪಿ-17, ಜೆಡಿಎಸ್-8, ಬಿಎಸ್ಸಾರ್-8, ಕೆಜೆಪಿ-5 ಹಾಗೂ ಪಕ್ಷೇತರ 14 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.
ಮುಳಗುಂದ ಪಟ್ಟಣ ಪಂಚಾಯತ್‌ನ 19 ವಾರ್ಡ್‌ಗಳಿಗೆ 76 ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದ್ದಾರೆ. ಕಾಂಗ್ರೆಸ್-19, ಬಿಜೆಪಿ-17, ಕೆಜೆಪಿ-10, ಜೆಡಿಎಸ್-15, ಬಿಎಸ್ಸಾರ್ -15 ಕಡೆ ನಾಮಪತ್ರ ಸಲ್ಲಿಸಿವೆ.
ನರಗುಂದ ಪುರಸಭೆಯ ಎಲ್ಲ 23 ವಾರ್ಡ್‌ಗಳಿಗೂ ರಾಷ್ಟ್ರೀಯ ಪಕ್ಷಗಳು ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಒಟ್ಟು 93 ನಾಮಪತ್ರ ಸಲ್ಲಿಕೆಯಾಗಿವೆ.
ಎಲ್ಲಿ, ಎಷ್ಟು ನಾಮಪತ್ರ?
ಗದಗ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಲ್ಲಿ ಒಟ್ಟು 203 ವಾರ್ಡ್‌ಗಳಿದ್ದು, 1011 ನಾಮಪತ್ರಗಳು ಸಲ್ಲಿಕೆಯಾಗಿವೆ. ಗದಗ - ಬೆಟಗೇರಿ ನಗರಸಭೆಯ 35 ವಾರ್ಡ್‌ಗಳಿಗೆ 284, ರೋಣ ಪುರಸಭೆಯ 23 ವಾರ್ಡ್‌ಗೆ 79, ನರಗುಂದ ಪುರಸಭೆಯ 23 ವಾರ್ಡ್‌ಗೆ 93, ಗಜೇಂದ್ರಗಡ ಪುರಸಭೆಯ 23 ವಾರ್ಡ್‌ಗೆ 82, ಮುಂಡರಗಿ ಪುರಸಭೆಯ 23 ವಾರ್ಡ್‌ಗೆ 123, ಲಕ್ಷ್ಮೇಶ್ವರ ಪುರಸಭೆಯ 23 ವಾರ್ಡ್‌ಗೆ 103, ಶಿರಹಟ್ಟಿ ಪಟ್ಟಣ ಪಂಚಾಯತ್‌ನ 17 ವಾರ್ಡ್‌ಗೆ 102, ಮುಳಗುಂದ ಪಟ್ಟಣ ಪಂಚಾಯತಿಯ 19 ವಾರ್ಡ್‌ಗೆ 76, ನರೇಗಲ್ಲ ಪಟ್ಟಣ ಪಂಚಾಯತಿಯ 17 ವಾರ್ಡ್‌ಗೆ 69 ನಾಮಪತ್ರಗಳು ಸಲ್ಲಿಕೆಯಾಗಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement