ನರಗುಂದ: ಇಂದು ಸ್ನೇಹ ಸಮ್ಮೇಳನ
ನರಗುಂದ: ಪಟ್ಟಣದ ರೋಟರ್ಯಾಕ್ಟ್ ಕನ್ನಡ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ 2012-13ನೇ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಫೆ. 27ರ ಬೆಳಗ್ಗೆ 10.30ಕ್ಕೆ ಬಸವೇಶ್ವರ ಸಮುದಾಯ ಭವನದಲ್ಲಿ ಜರಗಲಿದೆ. ಸಾನ್ನಿಧ್ಯವನ್ನು ಪುಣ್ಯಾರಣ್ಯ ಪತ್ರಿವನಮಠದ ಗುರುಸಿದ್ದವೀರ ಶ್ರೀಗಳು ವಹಿಸುವರು. ಸುರೇಶ ಬೋನಗೇರಿ, ಶಾಸಕ ಸಿ.ಸಿ. ಪಾಟೀಲ, ಚಂದ್ರಶೇಖರ ಕೋಟಿ, ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳಾ ಪಾಟೀಲ, ಎಸ್.ಬಿ. ಯಳ್ಳೂರ, ಮತ್ತಿತರರು ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.