ಒಳ್ಳೆಯ ಶಿಕ್ಷಣದಿಂದ ಉತ್ತಮ ಸಮಾಜ
ರೋಣ: ಚಿಕ್ಕ ವಯಸ್ಸಿನಲ್ಲಿಯೇ ಒಳ್ಳೆಯ ಶಿಕ್ಷಣ ಹೊಂದುವುದರಿಂದ ಉತ್ತಮ ಸಮಾಜ ನಿರ್ಮಿಸಲು ತಳಪಾಯ ಹಾಕಿದಂತೆ ಎಂದು ಉಪನೊಂದಣಾಧಿಕಾರಿ ಎಂ. ಪ್ರಸಾದಕುಮಾರ ಹೇಳಿದರು.
ಅವರು ಮಂಗಳವಾರ ಪಟ್ಟಣದ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ಜರುಗಿದ ಸೇಂಟ್‌ಜಾನ್ಸ್ ಶಾಲೆಯ 7ನೇ ವಾರ್ಷಿಕೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಾನ್ನಿಧ್ಯ ವಹಿಸಿದ್ದ ಗುರುಪಾದ ದೇವರು ಆಶೀರ್ವಚನ ನೀಡಿ, ಹಿಂದೆ ಅಕ್ಷರ ಜ್ಞಾನ ಎಂಬುದು ಸರ್ವರಿಗೂ ಸಿಗುತ್ತಿರಲಿಲ್ಲ. ಆದರೆ, ಈಗ ಸರ್ವರಿಗೂ ಸಮಪಾಲು ಎಂಬಂತೆ ಶಿಕ್ಷಣ ಎಲ್ಲರೂ ಪಡೆಯುವಂತಾಗಿದೆ ಎಂದರು. ಫಾದರ ಜೋಜ್ ಆಲಿಯಸ್ ಸಬಸ್ಟಿನ್, ಕೆ. ಮನೋಹರ, ವಿಮಲಾಕ್ಷಿ ಮಠದ ಉಪಸ್ಥಿತರಿದ್ದರು.