ಕ್ರೀಡಾಪಟುಗಳಿಗೆ ಸನ್ಮಾನ
ನರೇಗಲ್ಲ: 9ನೇ ರಾಷ್ಟ್ರೀಯ ಸಬ್ ಜ್ಯೂನಿಯರ್ ಚಾಂಪಿಯನ್ಶಿಪ್ನಲ್ಲಿ ಪ್ರತಿಭೆ ಮೆರೆದ ಹಠಯೋಗಿ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಸ್ಥೆಯ ವಿದ್ಯಾರ್ಥಿಗಳನ್ನು ಸ್ಥಳೀಯ ಓಂ ಶಿಕ್ಷಣ ಸಂಸ್ಥೆಯ ಪ್ರಾಥಮಿಕ ಶಾಲೆಯ ಸಭಾ ಭವನದಲ್ಲಿ ಇತ್ತೀಚೆಗೆ ಸನ್ಮಾನಿಸಲಾಯಿತು.ರೋಪ್ ಜಂಪ್ ಕ್ರೀಡೆಯ ರಾಷ್ಟ್ರೀಯ ಕಾರ್ಯದರ್ಶಿ ಅಬ್ದುಲ್ ರಜಾಕ್ ಟೇಲರ್, ಓಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಅಶೋಕ ಬೇವಿನಕಟ್ಟಿ ಮಾತನಾಡಿದರು. ತೇಜಶ್ವಿನಿ ಕುಂಬಾರ ಹಾಗೂ ವಿಶ್ವನಾಥ ಹಿರೆಮಠ ಕ್ರೀಡೆಯಲ್ಲಿನ ಅನುಭವ ಹಂಚಿಕೊಂಡರು. ಪಿ.ವಿ. ಬೇವಿನಕಟ್ಟಿ ಅಧ್ಯಕ್ಷತೆ ವಹಿಸಿದ್ದರು. ಎ.ಡಿ. ಇಟಗಿ, ಪಪಂನ ಮಾಜಿ ಸದಸ್ಯ ಅಪ್ಪಣ್ಣ ಸಂಕನಗೌಡ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ತಂಡದ ವ್ಯವಸ್ಥಾಪಕ ಬಸವರಾಜ ಶಿದ್ನೆಕೊಪ್ಪ, ರಾಜ್ಯ ತರಬೇತುದಾರ ಹನುಮಂತ ಮ್ಯಾಗೇರಿ, ಎಸ್.ಆರ್. ಕಿನ್ನಾಳ, ಎನ್.ಎಸ್. ಬನ್ನಿ ಮತ್ತಿತರರು ಇದ್ದರು.