ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಬ್ರಹ್ಮಚೈತನ್ಯರು ಆಧ್ಯಾತ್ಮಿಕ ಸೂರ್ಯ: ಕುಲಕರ್ಣಿ

Rashmi Kasaragodu
Updated On : 28 Feb 2013, 11:18 am

ಕನ್ನಡಪ್ರಭ ವಾರ್ತೆ, ನರೇಗಲ್ಲ, ಫೆ. 27
ಬ್ರಹ್ಮಚೈತನ್ಯ ಮಹಾರಾಜರು ಆಧ್ಯಾತ್ಮಿಕ ಸೂರ್ಯರಾಗಿದ್ದಾರೆಂದು ಶಿಕ್ಷಕ ಅರುಣ ಕುಲಕರ್ಣಿ ಹೇಳಿದರು.
ಈಚೆಗೆ ಅವರು ಸ್ಥಳೀಯ ದತ್ತಾತ್ರೇಯ ದೇವಸ್ಥಾನದಲ್ಲಿ ಭ್ರಹ್ಮ ಸಮಾಜದ ವತಿಯಿಂದ ದತ್ತ ಭಕ್ತ ಮಂಡಳಿ ಆಶ್ರಯದಲ್ಲಿ ನಡೆದ ಬ್ರಹ್ಮಚೈತನ್ಯ ಮಹಾರಾಜರ ತೊಟ್ಟಿಲೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ತುಕಾರಾಮ ಮಹಾರಾಜರ ಕೃಪಾಶೀರ್ವಾದಿಂದ ಗಣಪತಿ ಹೆಸರಿನ ಈ ಬಾಲಕ ಬ್ರಹ್ಮಚೈತನ್ಯರೆಂಬ ನಾಮದಿಂದ ಜಗತ್ತಿನ ಕಲ್ಯಾಣಕ್ಕೆ ಟೊಂಕಕಟ್ಟಿ ನಿಂತರು. ಅವರಿಂದ ಉದ್ಧಾರವಾದ ಭಕ್ತ ವೃಂದಕ್ಕೆ ಲೆಕ್ಕವೇ ಇಲ್ಲ. ಎಲ್ಲ ಭಕ್ತ ವೃಂದದವರೂ ಅವರನ್ನು ಮಹಾರಾಜರೆಂದೇ ಕರೆದು ಅವರಲ್ಲಿ ತಮ್ಮ ಭಗವಂತನನ್ನು ಕಂಡರು. ಅವರು ಮತ್ತು ಸದ್ಗುರು ಬ್ರಹ್ಮಾನಂದರು ಗುರು-ಶಿಷ್ಯ ಪರಂಪರೆಗೆ ಒಂದು ದೊಡ್ಡ ಸಾಕ್ಷಿ ಎಂದರು.
ಉಡುಪಿರಾವ್ ಕುಲಕರ್ಣಿ ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು. ಈ ಸಂದರ್ಭದಲ್ಲಿ ತೊಟ್ಟಿಲೋತ್ಸವ ಕಾರ್ಯಕ್ರಮ ನಡೆಯಿತು. ವಿಶ್ವನಾಥ ಭಟ್ಟ ವೈದ್ಯ, ನಿವೃತ್ತ ಶಿಕ್ಷಕ ಎಲ್.ಜಿ. ಗ್ರಾಮಪುರೋಹಿತ, ದತ್ತ ಭಕ್ತ ಮಂಡಳಿಯ ಅಧ್ಯಕ್ಷ ಅರುಣ ಕುಲಕರ್ಣಿ (ಕುರಗಡ್ಡಿ), ಪ್ರೊ. ಎಸ್.ಎಚ್. ಕುಲಕರ್ಣಿ, ವಸಂತಭಟ್ಟ ಸದರಜೋಷಿ, ಶ್ರೀವಲ್ಲಭಭಟ್ಟ ಸದರಜೋಷಿ, ಶಂಕ್ರಪ್ಪ ಕುಲಕರ್ಣಿ, ವಿನಾಯಕ ಗ್ರಾಮಪುರೋಹಿತ, ಶೇಷಗಿರಿ ಕುಲಕರ್ಣಿ, ವಿಶ್ವನಾಥಭಟ್ಟ ಗ್ರಾಮಪುರೋಹಿತ, ಮಂಜುನಾಥ ಗ್ರಾಮಪುರೋಹಿತ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement