ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಶಿವಾಜಿ ಜೀವನಾದರ್ಶ ಅಳವಡಿಸಿಕೊಳ್ಳಿ: ನಾಯಕ

Rashmi Kasaragodu
Updated On : 28 Feb 2013, 11:19 am

ಗದಗ: ಛತ್ರಪತಿ ಶಿವಾಜಿಯವರ ಜೀವನ ಆದರ್ಶಗಳನ್ನು ಯುವ ಜನತೆ ಅಳವಡಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಪಾಂಡುರಂಗ ನಾಯಕ ಹೇಳಿದರು.
ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಇತ್ತೀಚೆಗೆ ಏರ್ಪಡಿಸಲಾಗಿದ್ದ ಛತ್ರಪತಿ ಶಿವಾಜಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತದಲ್ಲಿ ಒಗ್ಗಟ್ಟು ಮೂಡಿಸಿ, ಭವ್ಯ ಭಾರತ ನಿರ್ಮಾಣಗೊಳ್ಳುವಲ್ಲಿ ಶಿವಾಜಿ ಶ್ರಮ ಅನನ್ಯ. ಅವರ ಸಂಘಟನಾ ಶಕ್ತಿಯ ಫಲವಾಗಿ ಭವ್ಯ ಸಾಮ್ರಾಜ್ಯ ಕಟ್ಟಿ ಛತ್ರಪತಿ ಎನಿಸಿಕೊಂಡರು. ಅವರಂತೆ ನಮ್ಮ ಮಕ್ಕಳು ಉನ್ನತ ಆದರ್ಶಗಳನ್ನು ಅಳವಡಿಸಿಕೊಂಡು ದೇಶದ ಮಹಾನ್ ವ್ಯಕ್ತಿಗಳಾಗಬೇಕು ಎಂದರು.
ಜಿಪಂ ಸಿಇಓ ವೀರಣ್ಣ ತುರಮರಿ ಮಾತನಾಡಿ, ಶಿವಾಜಿ ದೇಶ ಭಕ್ತರಾಗಿದ್ದರು. ಪರಕೀಯರು ಭಾರತವನ್ನು ಕಬಳಿಸಲು ಹೊಂಚು ಹಾಕಿದಾಗ ಭಾರತೀಯರನ್ನು ಒಗ್ಗೂಡಿಸುವಲ್ಲಿ ಶ್ರಮಿಸಿದರು ಎಂದರು.
ಗದಗ ಸರ್ಕಾರಿ ಪಪೂ ಮಹಾವಿದ್ಯಾಲಯದ ಇತಿಹಾಸ ಉಪನ್ಯಾಸಕ ಎ.ಪಿ. ಶಾಜೀಗಾರ ಶಿವಾಜಿಯ ವ್ಯಕ್ತಿತ್ವ ಕುರಿತು ಉಪನ್ಯಾಸ ನೀಡಿ, ಶಿವಾಜಿಯವರು ಸರ್ವಧರ್ಮ ಸಮಭಾವದೃಷ್ಟಿ, ಸ್ವಾಭಿಮಾನ ಮತ್ತು ಉತ್ತಮ ಆಡಳಿತ ಕೌಶಲ್ಯ ಹೊಂದಿದ್ದರು. ಅವರ ವ್ಯಕ್ತಿತ್ವ ಇಂದಿನ ಸಮಾಜಕ್ಕೆ ಮಾರ್ಗದರ್ಶಿಯಾಗಬೇಕು ಎಂದರು. ಪ್ರಭಾರಿ ಅಪಾರ ಜಿಲ್ಲಾಧಿಕಾರಿ ಶಶಿಧರ ಕುರೇರ, ಡಿವೈಎಸ್‌ಪಿ ವಿ.ವಿ. ಕುಂಬಾರ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು, ಜಿಪಂ ಸಿಬ್ಬಂದಿ ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಬನಶಂಕರಿ ಅಂಗಡಿ ಸ್ವಾಗತಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement