ಹೊಳೆಆಲೂರು: ಕಸಾಪ ದತ್ತಿ ಉಪನ್ಯಾಸ
ಹೊಳೆಆಲೂರು: ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ವತಿಯಿಂದ ಈಚೆಗೆ ಲಕ್ಷ್ಮವ್ವ ಕಳಕಪ್ಪ ಕನಕೇರಿ ಹಾಗೂ ಸಂಗಮ್ಮ ಅನ್ನದಾನಿ ಗಂಜಿಹಾಳರ ಸ್ಮಾರಕ ದತ್ತಿ ಉಪನ್ಯಾಸ ಹೊಳೆಆಲೂರಿನಲ್ಲಿ ಜರುಗಿತು. ಶ್ರೀ ಕಲ್ಮೇಶ್ವರ ಸಂಸ್ಥೆಯ ರಜತಮಹೋತ್ಸವ ಭವನದಲ್ಲಿ ನಡೆದ ಈ ಸಮಾರಂಭದ ಅಧ್ಯಕ್ಷತೆಯನ್ನು ಪ್ರಾ. ಎಸ್.ಎಸ್.ಪಟ್ಟಣಶೆಟ್ಟಿ ವಹಿಸಿದ್ದರು. ಆರ್.ಎಸ್. ಮಡಿವಾಳರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಕನ್ನಡ ನಾಡು ನುಡಿಗಳ ಕುರಿತು ವಿದ್ಯಾರ್ಥಿಗಳು ಗಂಭೀರವಾಗಿ ಆಲೋಚಿಸಬೇಕಾಗಿದೆ. ಜನಪದದಲ್ಲಿ ಹೆಣ್ಣಿನ ಕುರಿತು ವಿವಿಧ ತ್ರಿಪದಿಗಳನ್ನು ವಿವರಿಸಿದರು.12ನೇ ಶತಮಾನದಲ್ಲಿನ ಶರಣೆಯರ ಕುರಿತು ಮಾತನಾಡಿ, ವಚನಕಾರ್ತಿಯರ ಸಾಧನೆಗಳ ಕುರಿತು ಹೇಳಿದರು. ಡಾ. ಪ್ರಭು ಗಂಜಿಹಾಳ, ಶಿದ್ಧಲಿಂಗಪ್ಪ ಕನಕೇರಿ ಮತ್ತು ಬಿ.ಎಂ.ಗುಣಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ತಾಲೂಕು ಕಸಾಪ ಅಧ್ಯಕ್ಷ ಪ್ರೊ. ಎಸ್.ವಿ. ಅಂದಾನಶೆಟ್ರ ಸ್ವಾಗತಿಸಿದರು. ಪ್ರೊ. ಎಸ್.ವೈ.ಪೂಜಾರ ವಂದಿಸಿದರು. ಡಾ. ಎಸ್.ಬಿ.ಸಜ್ಜನರ ನಿರೂಪಿಸಿದರು.