2013-14 ಬಜೆಟ್ ಮಾತು
ಕೇಂದ್ರ ಬಜೆಟ್ ಸ್ವಾಗತಾರ್ಹವಾಗಿದ್ದು, ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿ ಹಾಗೂ ಪ್ರಧಾನಮಂತ್ರಿ ಮನಮೋಹನಸಿಂಗ್ ಅವರ ನೇತೃತ್ವದಲ್ಲಿ ಪಿ. ಚಿದಂಬರಂ ಶ್ರೀಸಾಮಾನ್ಯರಿಗೆ ಹೊರೆಯಾಗದಂತಹ ಮುಂಗಡ ಪತ್ರ ನೀಡಿದ್ದಾರೆ.
-ಎಚ್.ಕೆ. ಪಾಟೀಲ
ರೈತರಿಗೆ, ಕೈಗಾರಿಕೆಗಳಿಗೆ ಯಾವುದೇ ರೀತಿಯ ಹೆಚ್ಚಿನ ಪ್ರಾಶಸ್ತ್ಯ ನೀಡಿಲ್ಲ. ಆದಾಯಕರ ವಿನಾಯತಿಯನ್ನು ಹೆಚ್ಚಿಸಿಲ್ಲ. ರು. 50 ಲಕ್ಷ ಆಸ್ತಿ ಮಾರಾಟ ಮಾಡಿದಾಗ ಶೇ. 1ರಷ್ಟು ಟಿಡಿಎಸ್ ಮಾಡುವುದು ಸರಿಯಾದ ಕ್ರಮವಲ್ಲ.
- ರಾಜಶೇಖರ ಶಿರೂರ
ಮುಂಬರುವ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರದ ಬಜೆಟ್ ಮಂಡಿಸಲಾಗಿದೆ. ಈ ಬಜೆಟ್‌ನಲ್ಲಿ ಶ್ರಮಿಕರ ಪರವಾದ ಸೂಕ್ತ ಯೋಜನೆಗಳು ಜಾರಿಯಾಗಿಲ್ಲ. ಇದೊಂದು ಕಾಟಾಚಾರದ ಬಜೆಟ್ ಆಗಿದೆ.
-ಕರಬಸಪ್ಪ ಹಂಚಿನಾಳ
ಕೇಂದ್ರ ಬಜೆಟ್‌ನಲ್ಲಿ ಹೊಸದೇನೂ ಇಲ್ಲ. ಶ್ರೀಸಾಮಾನ್ಯರಿಗೆ, ರೈತರಿಗೆ, ಬಡವರಿಗೆ ಉಪಯೋಗವಾಗುವ ಯೋಜನೆಗಳನ್ನು ಹೆಚ್ಚಾಗಿ ಬಜೆಟ್‌ನಲ್ಲಿ ಪ್ರಸ್ತಾಪ ಮಾಡಿಲ್ಲ. ಇದೊಂದು ಶ್ರೀಸಾಮಾನ್ಯ ವಿರೋಧಿ ಬಜೆಟ್ ಆಗಿದೆ.
- ಹೇಮಗಿರೀಶ ಹಾವಿನಾಳ
ಕೇಂದ್ರ ಬಜೆಟ್ ಶೋಷಿತ ಜನಾಂಗವಾದ ದಲಿತ ಮತ್ತು ಅಲ್ಪಸಂಖ್ಯಾತ, ಮಹಿಳೆಯರಿಗೆ ವಿಶೇಷ ಆದ್ಯತೆಯನ್ನು ನೀಡಿದ್ದು ಸ್ವಾಗತಾರ್ಹ. ಈ ವರ್ಗದ ಜನರು ಮುಖ್ಯವಾಹಿನಿಗೆ ಬರಲು ಈ ಬಜೆಟ್ ಪೂರಕವಾಗಿದೆ.
- ಕಮಲಾ ಹಾದಿಮನಿ
ಕೈಗಾರಿಕೆಗೆ ಹೆಚ್ಚಿನ ಆದ್ಯತೆ ನೀಡಿಲ್ಲ. ಇದೊಂದು ಕೈಗಾರಿಕಾ ವಿರೋಧಿ ಬಜೆಟ್.ಕೈಗಾರಿಕೆಗಳಿಂದ ದೇಶದ ಅಭಿವೃದ್ಧಿ ಸಾಧಿಸಲು ಸಹಕಾರಿಯಾಗುವುದು. ಆದರೆ, ಕೇಂದ್ರದ ಯುಪಿಎ ಕೈಗಾರಿಕೆಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡದಿರುವುದು ಖಂಡನಾರ್ಹ.
- ಸೋಮನಗೌಡ ಹುಡೇದಮನಿ
ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುವಲ್ಲಿ ವಿಫಲವಾಗಿದೆ. ಹಾಗೂ ನಿರುದ್ಯೋಗಿಗಳಿಗೆ ಉದ್ಯೋಗ ನೀಡಲು ಸಹಕಾರಿಯಾಗುವ ಸಣ್ಣ ಪ್ರಮಾಣದ ಕೈಗಾರಿಕೆಗಳ ಸ್ಥಾಪನೆಗೆ ಹೆಚ್ಚಿನ ಆದ್ಯತೆ ನೀಡಿಲ್ಲ.
- ಕುಮಾರಸ್ವಾಮಿ ವಡ್ಡಿನ
ಪಿ. ಚಿದಂಬರಂ ಗುರುವಾರ ಮಂಡಿಸಿರುವ ಬಜೆಟ್ ಜನ ಸ್ನೇಹಿಯಾಗಿದ್ದು, ಎಲ್ಲ ರಂಗಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವ ಮೂಲಕ ಜನರ ಆಶೋತ್ತರಗಳಂತೆ ಬಜೆಟ್ ಮಂಡಿಸಿದ್ದು, ಇದರಿಂದ ದೇಶದ ಅಭಿವೃದ್ಧಿಗೆ ಸಹಕಾರಿಯಾಗಲಿದೆ..
- ವಿದ್ಯಾಧರ ದೊಡ್ಡಮನಿ
ಬಜೆಟ್‌ನಲ್ಲಿ ಯಾವುದೇ ರೀತಿಯ ಜನೋಪಯೋಗವಾಗುವ ಯೋಜನೆಗಳಿಲ್ಲ. ಇದೊಂದು ಟೊಳ್ಳು ಬಜೆಟ್ ಆಗಿದ್ದು, ಮುಂದಿನ ದಿನಗಳಲ್ಲಿ ಬರುವ ವಿಧಾನಸಭಾ ಚುನಾವಣೆಯ ದೂರ ದೃಷ್ಟಿನ್ನಿಟ್ಟುಕೊಂಡು ಮಂಡಿಸಿದ ಬಜೆಟ್ ಆಗಿದೆ.
- ಈಶಣ್ಣ ನಾಲ್ವಾಡ
ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ ಗುರುವಾರ ಮಂಡಿಸಿರುವ ಬಜೆಟ್‌ನಲ್ಲಿ ಸಾರ್ವಜನಿಕರಿಗೆ ಉಪಯೋಗವಾಗುವಂತಹ ಯಾವುದೇ ರೀತಿಯ ಹೊಸ ಯೋಜನೆಗಳನ್ನು ರೂಪಿಸದೇ ಇರುವುದು ಸಾರ್ವಜನಿಕರಲ್ಲಿ ನೋವುಂಟು ಮಾಡಿದೆ.
- ಮುತ್ತಣ್ಣ ಹೂಗಾರ