3ರಂದು ಪುಟ್ಟರಾಜರ 99ನೇ ಜನ್ಮದಿನೋತ್ಸವ
ಗದಗ: ಮಾ. 3ರ ಸಂಜೆ 5 ಗಂಟೆಗೆ ವೀರೇಶ್ವರ ಪುಣ್ಯಾಶ್ರಮದಲ್ಲಿ ಹಾನಗಲ್ಲ ಗುರು ಕುಮಾರ ಶ್ರೀಗಳ 83ನೇ ಪುಣ್ಯಸ್ಮರಣೋತ್ಸವ ಹಾಗೂ ಲಿಂ. ಡಾ. ಪಂಡಿತ ಪುಟ್ಟರಾಜ ಕವಿ ಗವಾಯಿಗಳವರ 99ನೇ ಜನ್ಮದಿನೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ವೀರೇಶ್ವರ ಪುಣ್ಯಾಶ್ರಮದ ಗದಗ-ದಾವಣಗೆರೆ ಸೋಲ ಟ್ರಸ್ಟ್‌ನ ಆಜೀವ ಅಧ್ಯಕ್ಷ ಕಲ್ಲಯ್ಯಜ್ಜನವರು ಹೇಳಿದರು.
ಅವರು ಗುರುವಾರ ವೀರೇಶ್ವರ ಪುಣ್ಯಾಶ್ರಮದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಾ. 3ರಂದು ಬೆಳಗ್ಗೆ 9 ಗಂಟೆಗೆ ಹಾನಗಲ್ಲ ಗುರುಕುಮಾರ ಶ್ರೀಗಳ ಹಾಗೂ ಪುಟ್ಟರಾಜ ಶ್ರೀಗಳ ಭಾವಚಿತ್ರ ಮೆರವಣಿಗೆ ಜರುಗಲಿದ್ದು, ಮೆರವಣಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಪುಣ್ಯಾಶ್ರಮಕ್ಕೆ ಆಗಮಿಸುವುದು. ನಂತರ ತಿಂಗಳ ಪರ್ಯಂತರ ನಡೆದುಬಂದ ಹಾನಗಲ್ಲ ಗುರು ಕುಮಾರೇಶ್ವರ ಪುರಾಣ ಮಂಗಲ ಕಾರ್ಯಕ್ರಮ ಜರುಗಲಿದೆ. ಸಂಜೆ 5 ಗಂಟೆಗೆ ಪುಟ್ಟರಾಜ ಕಲಾಭವನದಲ್ಲಿ ಜರುಗುವ ಕಾರ್ಯಕ್ರಮದ ಸಾನ್ನಿಧ್ಯವನ್ನು ಹುಬ್ಬಳ್ಳಿ ಮೂರು ಸಾವಿರ ಮಠದ ಜ. ಗುರುಸಿದ್ಧರಾಜ ಯೋಗೀಂಂದ್ರ ಶ್ರೀಗಳು, ಮುಂಡರಗಿ ಸಂಸ್ಥಾನಮಠದ ನಾಡೋಜ ಜ. ಅನ್ನದಾನ ಶ್ರೀಗಳು ವಹಿಸುವರು. ನೇತೃತ್ವವನ್ನು ಧಾರವಾಡ-ಮುಳಗುಂದ ಮುರುಘಾಮಠದ ಮಲ್ಲಿಕಾರ್ಜುನ ಶ್ರೀಗಳು ವಹಿಸುವರು. ಉದ್ಘಾಟನೆಯನ್ನು ಬಿಜಾಪುರದ ಜ್ಞಾನಯೋಗಾಶ್ರವುದ ಸಿದ್ಧೇಶ್ವರ ಶ್ರೀಗಳು ನೆರವೇರಿಸುವರು. ಅಧ್ಯಕ್ಷತೆಯನ್ನು ಅಡ್ನೂರು ದಾಸೋಹ ಮಠದ ಪಂಚಾಕ್ಷರ ಶಿವಾಚಾರ್ಯ ಶ್ರೀಗಳು ವಹಿಸುವರು. ಸಮ್ಮುಖವನ್ನು ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ವಹಿಸುವರು.
ಅತಿಥಿಗಳಾಗಿ ಸಚಿವ ಕಳಕಪ್ಪ ಬಂಡಿ, ಮಾಜಿ ಸಚಿವ ಎಚ್.ಕೆ. ಪಾಟೀಲ, ಶಾಸಕ ಶ್ರೀಶೈಲಪ್ಪ ಬಿದರೂರ, ಸಿ.ಸಿ.ಪಾಟೀಲ, ರಾಮಣ್ಣ ಲಮಾಣಿ, ಮಾಜಿ ಶಾಸಕ ಡಿ.ಆರ್. ಪಾಟೀಲ, ಮಹೇಶಗೌಡ ತೇಲಿಗೌಡ್ರ, ವಿ.ಎಸ್. ಮಾಳೆಕೊಪ್ಪಮಠ ಆಗಮಿಸುವರು. ಇದೇ ಸಂದರ್ಭದಲ್ಲಿ ರಾಜಗುರು ಗವಾಯಿ ಹಾಗೂ ಡಾ. ಶರಣಬಸವ ವೆಂಕಟಾಪುರ ಅವರಿಂದ ಉಪನ್ಯಾಸ ಜರುಗಲಿದೆ. ರಾತ್ರಿ 9 ಗಂಟೆಯಿಂದ ಅಹೋರಾತ್ರಿ ವಿವಿಧ ಸಂಗೀತರಾರರಿಂದ ಸಂಗೀತ ಹಾಗೂ ಕೀರ್ತನ ಜರುಗಲಿದೆ ಎಂದರು. ಟ್ರಸ್ಟ್‌ನ ಅಧ್ಯಕ್ಷ ನಿಂಗಪ್ಪ ಕೆಂಗಾರ ಹಾಗೂ ಸದಸ್ಯ ವಸಂತಗೌಡ ಪೊಲೀಸಪಾಟೀಲ ಮಾತನಾಡಿದರು. ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್‌ನ ಉಪಾಧ್ಯಕ್ಷ ಪ್ರಕಾಶ ಬಸರಿಗಿಡದ, ಕಾರ್ಯದರ್ಶಿ ಬಸವರಾಜ ಹಿಡ್ಕಿಮಠ, ಪ್ರಭುಲಿಂಗಯ್ಯ ಹಿರೇಮಠ, ಶಿವರುದ್ರಪ್ಪ ಇಟಗಿ, ಚನ್ನವೀರಸ್ವಾಮಿ ಬಾಳೆಹಳ್ಳಿಮಠ, ಸಂಗಮೇಶ ದುಂದೂರ, ಪರಶುರಾಮ ಕಟ್ಟಿಮನಿ, ಮುರಗಯ್ಯ ಹಿರೇಮಠ ಉಪಸ್ಥಿತರಿದ್ದರು.