ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಅಂಗವಿಕಲ ಕ್ರೀಡಾಳು ಬದುಕು ದುಸ್ತರ

Lingaraj Badiger
Updated On : 16 Jan 2013, 12:55 pm

ಕ್ರೀಡೆಗಳಲ್ಲಿ ಅಪಾರ ಆಸಕ್ತಿ ಹೊಂದಿದ ಬಸವರಾಜ ಸ್ಥಳೀಯ ಆಟಗಾರರೊಂದಿಗೆ ಕೂಡಿಕೊಂಡು ಒಂಟಿಕಾಲಿನ ಓಟ, ಜಾವಲಿನ್ ಹಾಗೂ ಡಿಸ್ಕ್ ಎಸೆತ, ವ್ಹೀಲ್ ಚೇರ್ ಇತ್ಯಾದಿಗಳನ್ನು ಅಭ್ಯಸಿಸಿ ಕ್ರೀಡೆಗಳಲ್ಲಿ ಭಾಗವಹಿಸಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಪಡೆದಿದ್ದಾನೆ. 1996-97ರಲ್ಲಿ ಬೆಂಗಳೂರಿನಲ್ಲಿ ನಡೆದ ಅಂಗವಿಕಲರ ಕ್ರೀಡಾಕೂಟದಲ್ಲಿ ಉದ್ದ ಜಿಗಿತ ಮತ್ತು ಬರ್ಚಿ ಎಸೆತದಲ್ಲಿ ಪ್ರಶಸ್ತಿ ಗಳಿಸಿದ್ದಾನೆ.
ಹಲವು ಪ್ರಶಸ್ತಿ
ಚೆನ್ನೈನಲ್ಲಿ ನಡೆದ 6ನೇ ರಾಷ್ಟ್ರೀಯ ಅಂಗವಿಕಲರ ಕ್ರೀಡಾಕೂಟದಲ್ಲಿ ಚಿನ್ನದ ಪದಕ, ಆಂಧ್ರಪ್ರದೇಶ, ತಮಿಳನಾಡು, ಪಶ್ಚಿಮಬಂಗಾಳ, ಮಹಾರಾಷ್ಟ್ರ, ಮಧುರೈ, ದಿಲ್ಲಿಯಲ್ಲಿ ನಡೆದ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಪ್ರತಿ ಕ್ರೀಡಾಕೂಟದಲ್ಲಿಯೂ (ಸಿಂಗಲ್ ಲೆಗ್, ಸಿಂಗಲ್ ಕ್ರಕ್ಸ) ಗುಂಡು ಎಸೆತದಲ್ಲಿ ಸತತ ಚಿನ್ನದ ಪದಕ ಗಳಿಸಿದ್ದಾನೆ.
ಶಾರ್ಟ್‌ಪುಟ್ ಸ್ಪರ್ಧೆಯಲ್ಲಿ ರಾಜ್ಯಕ್ಕೆ ಪ್ರಥಮ, ರಾಜ್ಯ ಮಟ್ಟದ ಸ್ಪೋರ್ಟ್ಸ್ ಮೀಟ್‌ನ 50 ಮೀಟರ್ ಅಂಗವಿಕಲರ ಓಟದಲ್ಲಿ ಪ್ರಥಮ, ಫೆಸಿಕ್ ಗೆಮ್ಸ್‌ನಲ್ಲಿ ಶಾಟ್‌ಪುಟ್ ಡಿಸ್ಕಥ್ರೋ, ಜಾವಲಿನ್ ಎಸೆತದಲ್ಲಿ ಪ್ರಥಮ, ರಾಜ್ಯ ಮಟ್ಟದ ಸ್ಪೋರ್ಟ್ಸ್ ಮೀಟ್‌ನ ಸಿಂಗಲ್ ಲೆಗ್ ಓಟದಲ್ಲಿ ಪ್ರಥಮ, 4ನೇ ನ್ಯಾಶನಲ್ ಗೆಮ್ಸ್ ಪಂದ್ಯಾವಳಿಯಲ್ಲಿ ಭಾಗವಹಿಸಿ ಸಮಗ್ರ ಪ್ರಶಸ್ತಿ, ಕರ್ನಾಟಕ ವಿಕಲಚೇತನ ಕ್ರೀಡಾ ಸಂಸ್ಥೆ ಬೆಂಗಳೂರು, ಸೇವಾ ಕಿರಣ ಕ್ಷೇಮಾಭಿವೃದ್ಧಿ, ಚಾರಿಟೇಬಲ್ ಟ್ರಸ್ಟ್ ಮಂಡ್ಯಾ ಆಯೋಜಿಸಿದ್ದ ಪಂದ್ಯಾವಳಿಯಲ್ಲಿ ಜಾವಲಿನ್ ಎಸೆತದಲ್ಲಿ ದ್ವಿತೀಯ, 9ನೇ ಸಿನೀಯರ ನ್ಯಾಷನಲ್ ಆಫ್ ಲೆಟರ್ ಚಾಂಪಿಯನ್ ಪಂದ್ಯಾವಳಿ, ಜಾವಲಿನ್ ಹಾಗೂ ಡಿಸ್ಕಸ್ ಥ್ರೋದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾನೆ.
ಕಷ್ಟದ ಬದುಕು
ಇಷ್ಟೊಂದು ಸಾಧನೆಗಳ ಸರಮಾಲೆಯನ್ನೇ ಬಸವರಾಜ ಹೊಂದಿದ್ದರೂ, ಬದುಕಿನ ಬಂಡಿ ಎಳೆಯುವುದು ಕಷ್ಟವಾಗಿದೆ.
 ಜೀವನ ನಿರ್ವಹಣೆಗಾಗಿ ಒಂದು ಎಸ್‌ಟಿಡಿ ಭೂತ್ ಇಟ್ಟುಕೊಂಡಿದ್ದ ಆದರ, ಇತ್ತೀಚಿನ ದಿನಗಳಲ್ಲಿ ಅದರ ಬಳಕೆ ಕಡಿಮೆಯಾಗಿದ್ದರಿಂದ ಅದನ್ನು ಮುಚ್ಚುವಂತಾಯಿತು. ಸದ್ಯ ಸಣ್ಣ ಫರ್ಟಿಲೈಸರ್ ವ್ಯಾಪಾರ ಮಾಡಿಕೊಂಡು ಹೆಂಡತಿ ಮಕ್ಕಳೊಂದಿಗೆ ಹೊಟ್ಟೆ ತುಂಬಿಸಿಕೊಳ್ಳಲು ರಾಷ್ಟ್ರಮಟ್ಟದ ಕ್ರೀಡಾಪಟು ಜಿವನ ಸಾಗಿಸಲು ಹರಸಾಹಸಪಡುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement