ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಭರವಸೆ ನೀಡಿದಂತೆ ಅಭಿವೃದ್ಧಿ: ಪಾಟೀಲ್

Lingaraj Badiger
Updated On : 16 Jan 2013, 12:57 pm

ಕನ್ನಡಪ್ರಭ ವಾರ್ತೆ, ರೋಣ, ಜ. 15
ಚುನಾವಣಾ ಪೂರ್ವದಲ್ಲಿ ನಾನು ನೀಡಿದ ಭರವಸೆಯಂತೆ ಅಭಿವೃದ್ಧಿ ಕಾರ್ಯಮಾಡಿದ ತೃಪ್ತಿ ನನಗಿದೆ. ನನ್ನ ಕ್ಷೇತ್ರದಾದ್ಯಂತ ರಸ್ತೆ, ಚರಂಡಿ, ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳನ್ನು ಸಮರ್ಪಕವಾಗಿ ಒದಗಿಸಿದ್ದೇನೆ ಎಂದು ನರಗುಂದ ಶಾಸಕ ಸಿ.ಸಿ. ಪಾಟೀಲ ಹೇಳಿದರು.
ಈಚೆಗೆ ಅವರು ತಾಲೂಕಿನ ಬೆನಹಾಳ ಗ್ರಾಮದಲ್ಲಿ ಎಸ್‌ಸಿಪಿ ಮತ್ತು ಟಿಸಿಪಿ ಯೋಜನೆಯಡಿಯಲ್ಲಿ ಲಕ್ಷ್ಮೀದೇವಿ ಮತ್ತು ತಾಯಮ್ಮದೇವಿ ಗುಡಿ ಸಮುದಾಯ ಭವನ, ಸಿಸಿ ರಸ್ತೆ ನಿರ್ಮಾಣ ಕಾಮಗಾರಿ ಮತ್ತು ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಬಹುದಿನದ ಬೇಡಿಕೆಯಂತೆ ಬೆನಹಾಳ ಗ್ರಾಮದಲ್ಲಿ ಲಕ್ಷ್ಮೀದೇವಿ ಮತ್ತು ತಾಯಮ್ಮದೇವಿ ಗುಡಿ ಸಮುದಾಯ ಭವನಕ್ಕೆ ತಲಾ ರು. 2.5 ಲಕ್ಷ ಅನುದಾನ, ಶುದ್ಧ ಕುಡಿಯುವ ನೀರಿನ ಘಟಕಕ್ಕೆ ರು. 11 ಲಕ್ಷ ಮತ್ತು ಹರಿಜನ ಕೇರಿಯಲ್ಲಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ರು. 13 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದೆ. ಎಲ್ಲ ಕಾಮಗಾರಿಗಳನ್ನು ಶೀಘ್ರ ಪ್ರಾರಂಭಿಸಬೇಕು. ಕಾಮಗಾರಿಯು ಉತ್ತಮ ಗುಣಮಟ್ಟದಿಂದ ಕೂಡಿರುವಂತೆ ಗುತ್ತಿಗೆದಾರ ಮತ್ತು ಅಭಿಯಂತರರ ಜವಾಬ್ದಾರಿ ಮುಖ್ಯವಾಗಿದೆ.
ಇನ್ನೂ ಹೆಚ್ಚುವರಿಯಾಗಿ ತಲಾ ರು. 1.5 ಲಕ್ಷ ಬಿಡುಗಡೆ ಮಾಡಲಾಗುತ್ತಿದ್ದು, ಸುಮಾರು ರು. 4 ಲಕ್ಷದಲ್ಲಿ ಸುಂದರವಾದ ಸಮುದಾಯ ಭವನ ನಿರ್ಮಿಸಬೇಕು. ಗ್ರಾಮದಲ್ಲಿನ ಹಿರೇಮಠ ಗುಡಿಯ ಕಟ್ಟಡ ನಿರ್ಮಾಣಕ್ಕೆ ಈಗಾಗಲೇ ರು. 3 ಲಕ್ಷ ಬಿಡುಗಡೆ ಮಾಡಲಾಗಿದೆ. ಅಲ್ಲದೇ ಇನ್ನು ರು. 2 ಲಕ್ಷ ಬಿಡುಗಡೆ ಮಾಡಲಾಗುವುದು. ಹುನಗುಂಡಿ ಗ್ರಾಮದ ಸಿ.ಸಿ. ರಸ್ತೆ, ವಾಲ್ಮೀಕಿ ಸಮುದಾಯ ಭವನ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ರು. 25 ಲಕ್ಷಕ್ಕೂ ಹೆಚ್ಚಿನ ಅನುದಾನ ಬಿಡುಗಡೆ ಮಾಡಿಸಿ ಅಭಿವೃದ್ಧಿ ಪಡಿಸಲಾಗಿದೆ. ಇನ್ನು ಸಣ್ಣ ಪುಟ್ಟ ಕೆಲಸಗಳು ಬಾಕಿ ಉಳಿದಿದ್ದಲ್ಲಿ ನನ್ನ ಗಮನಕ್ಕೆ ತನ್ನಿ, ಅವಧಿಯ ಮೊದಲೇ ಪರಿಹರಿಸಲಾಗುವುದು ಎಂದರು.
ಶಿವಾಚಾರ್ಯಮಹಾಂತ ಶ್ರೀಗಳು ಆಶೀರ್ವಚನ ನೀಡಿದರು. ಗ್ರಾಪಂ ಉಪಾಧ್ಯಕ್ಷ ಬಸವಂತಪ್ಪ ತಳವಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಸುಶೀಲಾಬಾಯಿ ಪಾಟೀಲ, ಹುವಪ್ಪ ಜಂಗಣ್ಣವರ, ಬಸನಗೌಡ ಬಾವಿಮನಿ, ಮುತ್ತಪ್ಪ ಜಂಗಣ್ಣವರ, ರಾಮನಗೌಡ ಪಾಟೀಲ, ಹನುಮಪ್ಪ ತಳವಾರ, ಹನುಮಂತಪ್ಪ ಚಲವಾದಿ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement