ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಮಕ್ಕಳಿಗೆ ಸಂಸ್ಕಾರ ಮುಖ್ಯ: ಅರಗಿದ್ದಿ

Lingaraj Badiger
Updated On : 16 Jan 2013, 12:56 pm

ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಜ. 15
ಮಕ್ಕಳಿಗೆ ಶಾಲಾ ಶಿಕ್ಷಣದ ಜತೆಗೆ ಪಾಲಕರ ಸಂಸ್ಕಾರದ ಶಿಕ್ಷಣ ಪ್ರಾಮುಖ್ಯವಾದದ್ದು, ಈ ನಿಟ್ಟಿನಲ್ಲಿ ಪಾಲಕರು ಮಕ್ಕಳ ಶೈಕ್ಷಣಿಕ ಪ್ರಗತಿ ಬಗೆಗೆ ಹೆಚ್ಚು ಆಸಕ್ತಿ ವಹಿಸುವುದು ಅವಶ್ಯ ಎಂದು ಎಸ್‌ಡಿಎಂಸಿ ಅಧ್ಯಕ್ಷ ಎಸ್.ಎಂ.ಅರಗಿದ್ದಿ ಹೇಳಿದರು.
ಈಚೆಗೆ ಅವರು ಸ್ಥಳೀಯ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಪಾಲಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪಾಲಕರು ಮಕ್ಕಳನ್ನು ಶಾಲೆಗೆ ಕಳುಹಿಸುವುದೊಂದೆ ನಮ್ಮ ಕರ್ತವ್ಯ ಎನ್ನದೇ ಶಾಲೆಗೆ ಮೇಲಿಂದ ಮೇಲೆ ಭೇಟಿ ನೀಡಿ ಮಕ್ಕಳ ಹಾಜರಾತಿ ಶಿಕ್ಷಣದ ಮೌಲ್ಯ ಮಾಪನ ಕುರಿತು ಶಿಕ್ಷಕರ ಜತೆ ಚರ್ಚೆ ಜತೆಗೆ ಮಕ್ಕಳ ಹಕ್ಕುಗಳ ಬಗ್ಗೆ ಚರ್ಚಿಸುವ ಜವಾಬ್ದಾರಿ ಪಾಲಕರ ಮೇಲಿದೆ. ಅದರಂತೆ ಶಿಕ್ಷಕರು ಸತತ ಅಧ್ಯಯನದ ಮೂಲಕ ಜ್ಞಾನ ಸಂಪಾದಿಸಿ ಬಳಿಕ ಮಕ್ಕಳಿಗೆ ಬೋಧಿಸಿದಾಗ ಮಾತ್ರ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಸಿಗಲು ಸಾಧ್ಯ. ಈ ದಿಸೆಯಲ್ಲಿ ಅತ್ಯಂತ ಪಾವಿತ್ರ್ಯವುಳ್ಳ ಶೈಕ್ಷಣಿಕ ಕ್ಷೇತ್ರದ ಗೌರವ ಹೆಚ್ಚಿಸುವ ಜವಬ್ದಾರಿಕೆ ನಮ್ಮೆಲ್ಲರ ಮೇಲಿದೆ ಎಂದರು. ಶಾಲಾ ಮುಖ್ಯೋಪಾಧ್ಯಾಯ ಐ.ಕೆ.ಬಾಗವಾನ, ಮಕ್ಕಳ ಹಕ್ಕು ಮತ್ತು ಕಲಿಕಾ ಕುರಿತು ಪಾಲಕರಿಗೆ ಮಾಹಿತಿ ನೀಡಿದರು. ಎಂ.ಎಚ್. ಕೋಲಕಾರ, ಎಂ.ಡಿ. ಸರಕಾವಸ, ಎ.ಎಂ. ಕೊಪ್ಪಳ, ಹಾಜಿ ಎಂ.ಕೆ. ಹಿರೇಹಾಳ, ಎಂ.ಎ. ಚಿನ್ನೂರ, ಅಶ್ರಫಅಲಿ ಗೋಡೆಕಾರ, ಇಸ್ರತಬಾನು ತಟಗಾರ, ಅಬ್ದುಲಸಾಬ ಕಾತರಕಿ, ಮದಾರಸಾಬ ಮಾಣಿಕಬಾಯಿ, ಬಿ.ವೈ. ಕರ್ನೂಲ, ಬಿ.ಎಚ್.ಬಾಗವಾನ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement