ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

24ರಂದು ಕ್ರಿಕೆಟ್ ಪಂದ್ಯಾವಳಿ (ಸುದ್ದಿ ಸಂಕ್ಷೇಪ)

Mainashree
Updated On : 22 Jan 2013, 1:02 am

ರೋಣ: ಪಟ್ಟಣದ ಯಂಗ್ ಇಂಡಿಯನ್ಸ್ ಕ್ರಿಕೆಟ್ ಕ್ಲಬ್ ಇವುಗಳ ಆಶ್ರಯದಲ್ಲಿ ಜ. 24ರಂದು ಜಕ್ಕಲಿ ರಸ್ತೆಯ ಸೇಲ್ ಸೊಸೈಟಿ ಮೈದಾನದಲ್ಲಿ ಸಿಕ್ಸ್-ಎ-ಸೈಡ್ ಕ್ರಿಕೆಟ್ ಪಂದ್ಯಾವಳಿ ಏರ್ಪಡಿಸಲಾಗಿದೆ. ಪ್ರಥಮ ಬಹುಮಾನ ರು. 7001, ದ್ವಿತೀಯ ರು. 5001 ಹಾಗೂ ತೃತೀಯ ರು. 3001 ಬಹುಮಾನ ವಿತರಿಸಲಾಗುವುದು. ಉದ್ಘಾಟನೆಯನ್ನು ಸುಭಾಸ ಗಡಗಿ ಹಾಗೂ ಗ್ರಾಪಂ ಉಪಾಧ್ಯಕ್ಷ ಬಸವಂತಪ್ಪ ತಳವಾರ ನೆರವೇರಿಸುವರು. ಅಧ್ಯಕ್ಷತೆಯನ್ನು ಮಾಜಿ ಶಾಸಕ ಜಿ.ಎಸ್. ಪಾಟೀಲ ವಹಿಸುವರು. ಭಾವಾಸಾಬ ಬೇಟಗೇರಿ, ವಿಶ್ವನಾಥ ಜಿಡ್ಡಿಬಾಗೀಲ, ಎ.ಡಿ. ಜನ್ನತಖಾನ, ಎಂ.ಎನ್. ಹತ್ತಿಕಟಗಿ, ಎಲ್.ಕೆ. ಗೌಡಣ್ಣವರ ಮುಂತಾದವರು ಆಗಮಿಸುವರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತರಬೇತಿಗೆ ಅರ್ಜಿ ಆಹ್ವಾನ
ಗದಗ: ಅಪರೇಲ್ ಟ್ರೈನಿಂಗ್ ಆಂಡ್ ಡಿಸೈನ್ ಸೆಂಟರ್ ಗದಗ ಹಾಗೂ ರಾಷ್ಟ್ರೀಯ ಹಿಂದುಳಿದ ವರ್ಗಗಳ ಹಣಕಾಸು ಹಾಗೂ ಅಭಿವೃದ್ಧಿ ನಿಗಮ (ಃಇಈಋಉಈ) ನವದೆಹಲಿ ಇವರ ಸಹಭಾಗಿತ್ವದಲ್ಲಿ 1 ತಿಂಗಳ ಸ್ಮಾರ್ಟ್ ಸ್ಯೂಯಿಂಗ್ ಆಪರೇಟರ್ ಬೆಸಿಕ್ ಉಚಿತ ತರಬೇತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸುವವರು ರಾಜ್ಯದ ನಿವಾಸಿಯಾಗಿರಬೇಕು. ಹಿಂದುಳಿದ ವರ್ಗದವರಾಗಿರಬೇಕು. ಕನಿಷ್ಟ 5 ನೇ ತರಗತಿ ಪಾಸಾಗಿರಬೇಕು. 18 ರಿಂದ 35 ವಯೋವಾನದವರಾಗಿರಬೇಕು. ವಾರ್ಷಿಕ ಆದಾಯ ರು. 40 ಸಾವಿರ ಮೀರಿರಬಾರದು. ಈ ಅರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಎ.ಟಿ.ಡಿ.ಸಿ ಗದಗ ಶೆಟ್ ಸಂಖ್ಯೆ 50-53, ಪವರ ಲೂಮ್ ಪಾರ್ಕ್, ನರಸಾಪುರ, ಬೆಟಗೇರಿ-ಗದಗ ವಿಳಾಸಕ್ಕೆ ಖುದ್ದಾಗಿ ಮೂಲ ದಾಖಲಾತಿಗಳು ಹಾಗೂ ಇತ್ತೀಚಿನ 8 ಭಾವಚಿತ್ರದೊಂದಿಗೆ ಜ. 24 ರೊಳಗೆ ಸಂಪರ್ಕಿಸಿ, ನಿಗದಿತ ನಮೂನೆಯಲ್ಲಿ ಅರ್ಜಿ ತುಂಬಿ ಸಲ್ಲಿಸಲು ಕೋರಲಾಗಿದೆ. ಮಾಹಿತಿಗಾಗಿ ದೂ. 08372-218602, 9844236030, 9449121121 ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.
ಅಪಘಾತ: ಓರ್ವ ಸಾವು
ಗದಗ:   ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಹೊರವಲಯದಲ್ಲಿ ಟಂಟಂ ವಾಹನ ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ್ದ ಘಟನೆ ಭಾನುವಾರ ತಡರಾತ್ರಿ ಜರುಗಿದೆ. ಮೃತನನ್ನು ರಾಘವೇಂದ್ರ ಸಂಕಪ್ಪ ಅಸುಂಡಿ (33) ಎಂದು ಗುರುತಿಸಲಾಗಿದೆ. ಈ ಕುರಿತು ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಂದು ಕಾನೂನು ಸಾಕ್ಷರತಾ ಕಾರ್ಯಕ್ರಮ
ಗದಗ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಗದಗ, ಜಿಲ್ಲಾ ನ್ಯಾಯವಾದಿಗಳ ಸಂಘ ಹಾಗೂ ಉಪಕಾರಾಗೃಹ ಗದಗ ಇವುಗಳ ಆಶ್ರಯದಲ್ಲಿ ಜ. 22ರ ಸಂಜೆ 5ಕ್ಕೆ ನಗರದ ಉಪಕಾರಾಗೃಹದಲ್ಲಿ ವಿಚಾರಣಾಧೀನ ಬಂದಿಗಳಿಗಾಗಿ ಕಾನೂನು ಸಾಕ್ಷರತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಟಿ.ಎಚ್. ಆವಿನ ನೆರವೇರಿಸುವರು. ಅಧ್ಯಕ್ಷತೆಯನ್ನು ಗದಗನ ಉಪಕಾರಾಗೃಹದ ಅಧೀಕ್ಷಕ ಎಂ.ಎಂ. ಮರಕಟ್ಟಿ ವಹಿಸುವರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ವೈ.ಆರ್. ಗುಡೂರ, ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶ ಉಮೇಶ ಮೂಲಿಮನಿ, ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಎಂ.ಎಸ್. ರಾಮೇನಹಳ್ಳಿ, ಎಸ್.ಕೆ. ಬಾಕಳೆ ಮುಂತಾದವರು ಆಗಮಿಸುವರೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
25ರಂದು ರೇಲ್ವೆ ನಿಲ್ದಾಣಗಳ ಪರಿವೀಕ್ಷಣೆ
ಗದಗ: ಜ. 25ರಂದು ಬಿಜಾಪುರದಿಂದ ಹುಬ್ಬಳ್ಳಿಯ ನಡುವೆ ಬರುವ ಮುಖ್ಯ ರೇಲ್ವೆ ನಿಲ್ದಾಣಗಳ ಹಾಗೂ ರೇಲ್ವೆ ಲೈನ್‌ಗಳ ಇತರೆ ಮೂಲ ಸೌಲಭ್ಯಗಳ ಪರಿವೀಕ್ಷಣೆಯನ್ನು ರೇಲ್ವೆ ಮಹಾ ಪ್ರಬಂಧಕ ಅಶೋಕ ಕುಮಾರ ಮಿಥಲ್ ಕೈಗೊಳ್ಳುವರು. ಸಾರ್ವಜನಿಕರು ರೇಲ್ವೆ ಮೂಲ ಸೌಲಭ್ಯಗಳಿಗೆ ಸಂಬಂಧಿಸಿದ ವಿಷಯಗಳ ಕುರಿತು ಜ. 23 ರೊಳಗಾಗಿ ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಗೆ ಲಿಖಿತವಾಗಿ ಸಲ್ಲಿಸಿದಲ್ಲಿ ಸದರಿ ವಿಷಯವನ್ನು ನಮ್ಮ ಮನವಿಯಲ್ಲಿ ಅಳವಡಿಸಿ, ಬೇಡಿಕೆಪೂರೈಸುವಂತೆ ಒತ್ತಾಯಿಸಲಾಗುವುದೆಂದು ಸಂಸ್ಥೆಯ ಅಧ್ಯಕ್ಷ ರಾಜಶೇಖರ ಶಿರೂರ ಹಾಗೂ ಸಂಸ್ಥೆಯ ರೇಲ್ವೆ ಉಪ ಸಮಿತಿ ಚೇರಮನ್ ಹಾಗೂ ಜಡ್‌ಆರ್‌ಯುಸಿಸಿ ನೈರುತ್ಯ ವಲಯದ ಸದಸ್ಯ ಜಿ.ಕೆ. ಆದಪ್ಪಗೌಡ್ರ ತಿಳಿಸಿದ್ದಾರೆಂದು ಸಂಸ್ಥೆಯ ಗೌರವ ಕಾರ್ಯದರ್ಶಿ ಎಂ.ಬಿ. ಸುರಕೋಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement